ಬೆಂಗಳೂರಲ್ಲಿ ಡ್ರಗ್ಸ್‌; ದೆಹಲಿಯಲ್ಲಿ ವಿರೇನ್ ಖನ್ನಾ ಬಂಧನ

ಬೆಂಗಳೂರು, ಸೆಪ್ಟೆಂಬರ್ 04: ಬೆಂಗಳೂರು ನಗರಕ್ಕೆ ಮಾದಕ ದ್ರವ್ಯಗಳ ಪೂರೈಕೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ದೆಹಲಿಯಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಸಿಸಿಬಿಯ ಇಬ್ಬರು ಅಧಿಕಾರಿಗಳು ಅಲ್ಲಿಗೆ ತೆರಳಿದ್ದು, ಆರೋಪಿಯನ್ನು ಬೆಂಗಳೂರಿಗೆ ಕರೆ ತರಲಿದ್ದಾರೆ.

Recommended Video

      ಕೊನೆಗೂ ಅಖಾಡಕ್ಕೆ ಧುಮುಕಿದ Dhoni Boys | Oneindia Kannada

      ಬಂಧಿತ ವ್ಯಕ್ತಿಯನ್ನು ವಿರೇನ್ ಖನ್ನಾ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಸಿಸಿಬಿಯ ಇಬ್ಬರು ಅಧಿಕಾರಿಗಳು ದೆಹಲಿಗೆ ಬಂಧಿತ ಆರೋಪಿಯನ್ನು ಕರೆತರಲು ತೆರಳಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಈ ಬಂಧನದಿಂದ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.

      ಬಂಧಿತ ಆರೋಪಿ ವಿರೇನ್ ಖನ್ನಾ ವೃತ್ತಿಯಲ್ಲಿ ಟೆಕ್ಕಿಯಾಗಿದ್ದಾನೆ. ಈತ ಪಾರ್ಟಿಗಳನ್ನು ಆಯೋಜಿಸುತ್ತಿದ್ದನು. ಅಲ್ಲಿ ಸೆಲೆಬ್ರೆಟಿಗಳು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

      CCB Police Arrested Viren Khanna In New Delhi

      ವಿರೇನ್ ಖನ್ನಾ ಮೂಲತಃ ಬೆಂಗಳೂರಿನ ನಿವಾಸಿ. ದೆಹಲಿಯ ಮಥೂರ ರಸ್ತೆಯ ನಿವಾಸದಿಂದಲೇ ಈತ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ. ಈತ ಆಯೋಜನೆ ಮಾಡುವ ಪಾರ್ಟಿಗಳಿಗೆ ಸೆಲೆಬ್ರಿಟಿಗಳಿಗೆ ಮಾತ್ರ ಆಹ್ವಾನ ಇರುತ್ತಿತ್ತು.

      ಬೆಂಗಳೂರು ನಗರದಲ್ಲಿನ ಡ್ರಗ್ಸ್ ಮಾಫಿಯಾ ಕುರಿತು ತನಿಖೆ ನಡೆಸುತ್ತಿರುವ ಸಿಬಿಬಿ ಪೊಲೀಸರು ನಟಿ ರಾಗಿಣಿ ದ್ವಿವೇದಿ, ರಾಗಿಣಿ ಆಪ್ತರಾದ ರವಿ ಶಂಕರ್ ಬಂಧಿಸಿದ್ದಾರೆ. ವಿರೇನ್ ಖನ್ನಾರನ್ನು ಬೆಂಗಳೂರಿಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+