ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೀಟರ್ ಬಡ್ಡಿ ವ್ಯವಹಾರ; ಸಿಸಿಬಿ ಪೊಲೀಸರ ವಶಕ್ಕೆ ವೈಯಾಲಿಕಾವಲ್ ಫೈನಾನ್ಶಿಯರ್

By Lekhaka
|
Google Oneindia Kannada News

ಬೆಂಗಳೂರು, ಡಿಸೆಂಬರ್ 06: ಮೀಟರ್ ಬಡ್ಡಿ ಲೆಕ್ಕದಲ್ಲಿ ಜನರಿಂದ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಡ್ಡಿಗಾಗಿ ಆರೋಪಿಯು ಕಿರುಕುಳ ನೀಡುತ್ತಿರುವ ಕುರಿತು ಸಿಸಿಬಿಗೆ ದೂರುಗಳು ಬಂದಿದ್ದವು. ಬಡ್ಡಿ ದಂಧೆಕೋರರ ವಿರುದ್ಧ ಸಿಸಿಬಿ ಕಾರ್ಯಾಚರಣೆ ನಡೆಸುತ್ತಿದ್ದು, ವೈಯಾಲಿಕಾವಲ್ ನ ನಾಗರಾಜ್ ಶೆಟ್ಟಿ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ‌ ನಡೆಸಿ ಆತನನ್ನು ಬಂಧಿಸಿದ್ದಾರೆ.

400 ಕೋಟಿ ಮೌಲ್ಯದ ಬ್ಯಾಂಕ್ ಹಗರಣದ ಮಾಸ್ಟರ್ ಮೈಂಡ್ ಬಂಧನ400 ಕೋಟಿ ಮೌಲ್ಯದ ಬ್ಯಾಂಕ್ ಹಗರಣದ ಮಾಸ್ಟರ್ ಮೈಂಡ್ ಬಂಧನ

ಮನೆಯಲ್ಲಿ 164 ಚೆಕ್, 84 ಪ್ರಾಮಿಸರಿ ನೋಟ್ ಗಳು, ಸಾಲ ಪಡೆದವರಿಂದ ಪಡೆದಿದ್ದ ಆಸ್ತಿ ದಾಖಲೆಗಳು ಹಾಗೂ 22 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ. ಮೂಲತಃ ಶಿವಮೊಗ್ಗದವನಾಗಿರುವ ನಾಗರಾಜ್ ಶೆಟ್ಟಿ ವೈಯಾಲಿಕಾವಲ್ ನಲ್ಲಿ ಬಾಲಾಜಿ ಫೈನಾನ್ಸ್ ನಡೆಸುತ್ತಿದ್ದ. ಮೃತ ಕಪಾಲಿ ಮೋಹನ್ ಆಪ್ತನಾಗಿರುವ ಈತ ವೈಯಾಲಿಕಾವಲ್, ಮಲ್ಲೇಶ್ವರಂ ಸುತ್ತಮುತ್ತಲಿನ ಉದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಹೆಚ್ಚಿನ ಸಾಲ ನೀಡಿದ್ದ.

Bengaluru: CCB Police Arrested Man For Levying High Interest On Debt

Recommended Video

T Natarajan ಮೋದಲ ಸರಣಿಯಲ್ಲೇ ಭರವಸೆಯ ಆಟವಾಡಿದರು | Oneindia Kannada

ಆದರೆ ಸಾಲಕ್ಕೆ ಅಧಿಕ ಬಡ್ಡಿಯನ್ನು ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ದಿನದ ಲೆಕ್ಕದಲ್ಲಿ ಅತಿ ಹೆಚ್ಚಿನ ಬಡ್ಡಿಯನ್ನು ವಸೂಲಿ ಮಾಡುತ್ತಿದ್ದ ನಾಗರಾಜ್ ಶೆಟ್ಟಿ ಬಡ್ಡಿ ಕಟ್ಟದೇ ಇದ್ದರೆ ಕಿರುಕುಳ ನೀಡುತ್ತಿದ್ದ ಎಂಬ ದೂರು ಬಂದಿತ್ತು. ಒಂದು ವರ್ಷಕ್ಕೆ ಪಡೆದ ಸಾಲಕ್ಕೆ ಸುಮಾರು 60% ಬಡ್ಡಿ ಪಡೆಯುತ್ತಿದ್ದ. ಈ ಕುರಿತು ಕೆಲವರು ಸಿಸಿಬಿಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ.

ನಾಗರಾಜ್ ಶೆಟ್ಟಿ ಕನ್ನಡದ ಕೆಲ ಸಿನಿಮಾಗಳಲ್ಲೂ ನಟನೆ ಮಾಡಿದ್ದ ಎಂದು ತಿಳಿದುಬಂದಿದೆ. ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರೆದಿದೆ.

English summary
CCB police have arrested a man accused of levying high interest on debt in Vyalikaval at bengaluru. There were complaints to CCB about the accused being harassed for interest
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X