Dhanveer Gowda: ದರ್ಶನ್ ಆಪ್ತ ಧ್ವನೀರ್ ಗೌಡಗೂ ಸಂಕಷ್ಟ: ಸಿಸಿಬಿಯಿಂದ ತೀವ್ರ ವಿಚಾರಣೆ, ಮೊಬೈಲ್ ವಶ!
Actor Dhanveer Gowda News: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಅವರೊಂದಿಗೆ ಹೆಚ್ಚಿನ ಆತ್ಮಿಯತೆ ಹೊಂದಿರುವ ನಟ ಧನ್ವಿರ್ ಗೌಡ ಅವರಿಗೂ ಸಂಕಷ್ಟ ಎದುರಾಗಿದೆ. ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಸುದ್ದಿ ಹರಿದಾಡಿತು. ಆ ಬಗ್ಗೆ ಇಂದು ಸರ್ಕಾರದ ಮಟ್ಟದಲ್ಲಿ ಸಭೆ ಇದೆ. ಈ ಮಧ್ಯ ಸಿಸಿಬಿ ಪೊಲೀಸರು ನಟ ಧನ್ವಿರ್ ಗೌಡ ಅವರನ್ನು ವಶಕ್ಕೆ ಪಡೆದು ತೀವ್ರ ನಡೆಸಿದ್ದಾರೆ.
ಜೈಲಿನಲ್ಲಿನ ವಿಡಿಯೋಗಳನ್ನು ನಟ ಧನ್ವೀರ್ ಅವರು ಬಿಡುಗಡೆ ಮಾಡಿದ್ದಾರೆ ಎಂಬ ಅನುಮಾನ ಸಿಸಿಬಿಗೆ ಬಂದಿದೆ. ನಟ ದರ್ಶನ್ ಬಂಧನ ಬಳಿಕ ಆರಂಭದಿಂದಲೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಜೈಲಿಗೆ ಧನ್ವೀರ್ ಗೌಡ ಆಗಾಗ ಭೇಟಿ ನೀಡುತ್ತಿದ್ದರು. ದರ್ಶನ್ ಆಪ್ತರ ಬಣದಲ್ಲಿ ಮುಖ್ಯವಾಗಿದ್ದ ನಟ ಧನ್ವೀರ್ ಅವರು ಡಿಬಾಸ್ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಸದ್ಯ ಜೈಲಿನ ವಿಡಿಯೋ ಸೋರಿಕೆ ಹಿಂದೆ ಧನ್ವೀರ್ ಇದ್ದಾರೆಂಬ ಶಂಕೆ ಹಿನ್ನೆಲೆಅವರನ್ನು ವಶಕ್ಕೆ ಪಡೆದಿರುವ ಸಿಸಿಬಿ ವಿಚಾರಣೆ ನಡೆಸಿದೆ. ಸದ್ಯ ಅವರ ಮೊಬೈಲ್‌ನಲ್ಲಿ ಯಾವುದೇ ವಿಡಿಯೋಗಳು ಸಿಕ್ಕಿಲ್ಲ ಎನ್ನಲಾಗಿದೆ.

ಧನ್ವೀರ್ ಮೊಬೈಲ್ ವಶಕ್ಕೆ, ಲ್ಯಾಬ್‌ಗೆ ರವಾನೆ
ಭಾನುವಾರ ಸಂಜೆಯಿಂದ ನಟ ಧನ್ವೀರ್ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜೈಲಿನ ವಿಡಿಯೋ ಬಿಡುಗಡೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಅವರ ಮುಂದಿಟ್ಟಿದ್ದಾರೆ. ಅವರ ಮೊಬೈಲ್ ವಶಕ್ಕೆ ಪಡೆದು ಅದರಲ್ಲಿನ ಮಾಹಿತಿ ಪಡೆಯಲು ಸಿಸಿಬಿ ಮುಂದಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಧನ್ವೀರ್ ಅವರ ಮೊಬೈಲ್ ಅನ್ನು ಕಳುಹಿಸಲಾಗಿದೆ. ಪರಿಶೀಲನೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗುವ ನಿರೀಕ್ಷೆ ಇದೆ.
ಜೈಲಿನ ವಿಡಿಯೋಗಳು ಹೇಗೆ ಸೋರಿಕೆ ಆಗಿವೆ. ಜೈಲಿನ ಭೇಟಿ, ವಿಡಿಯೋ ತೆಗೆದಿದ್ದು ಯಾರು?= ಅವುಗಳನ್ನು ಹಂಚಿಕೊಂಡಿದ್ದು ಸೇರಿದಂತೆ ಎಲ್ಲ ಆಯಾಮಗಳಲ್ಲಿ ಸಿಸಿಬಿ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಈ ಮಧ್ಯೆ ದರ್ಶನ್ ಆಪ್ತರಾದ ನಟ ಧನ್ವೀರ್ ಗೌಡ ಅವರನ್ನು ನಿರಂತರ ವಿಚಾರಣೆ ನಡೆಸಿದ್ದು ಸುದ್ದಿಯಾಗಿದೆ. ಈ ಮೂಲಕ ನಟನ ಅಭಿಮಾನಿಗಳಿಗೆ ಸಿಸಿಬಿ ಶಾಕ್ ನೀಡಿದೆ.
ಜೈಲಿನಲ್ಲಿ ತಿಂಗಳುಗಳಿಂದ ನಟ ದರ್ಶನ್ ಗೆ ಹಾಸಿಗೆ, ದಿಂಬು, ಬೆಡ್ ಸಿಗುತ್ತಿಲ್ಲ. ಈ ಸಂಬಂಧ ಅರ್ಜಿ ಹಾಕಿದ್ದಾರೆ. ಮತ್ತೊಂದೆಡೆ ಅವರಿರುವ ಜೈಲಿನಲ್ಲಿನ ನಟೋರಿಯಸ್ ಕ್ರಮಿನಲ್ ಗಳಿಗೆ ರಾಜಾತಿಥ್ಯ ಸಿಗುತ್ತಿವೆ ಎಂಬ ವಿಚಾರ ಗೊತ್ತಿದೆ. ಆ ಸಂಬಂಧದ ವಿಡಿಯೋಗಳು ಸೋರಿಕೆ ಆಗುತ್ತಿದ್ದಂತೆ ತನಿಖೆಗೆ ಇಳಿದ ಸಿಸಿಬಿ ಪೊಲೀಸರು ಹಲವರನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ನದ ಧ್ವನ್ವೀರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಸಂಬಂಧ ಇಂದು ಸೋಮವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಿಎಂ ಸಿದ್ದರಾಮಯ್ಯ ಹಾಗೂ ಪೊಲೀಸ್ ಅಧಿಕಾರಗಳ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಲಿದೆ.












Click it and Unblock the Notifications