ಡಿಕೆಶಿಗೆ ಮತ್ತೊಂದು ಬಿಗ್ ಶಾಕ್: ಅಕ್ರಮ ಹಣ ತನಿಖೆ ಸಿಬಿಐಗೆ!

Recommended Video

      ಡಿಕೆಶಿ ವಿಚಾರದಲ್ಲಿ ಯಡಿಯೂರಪ್ಪ ಸರ್ಕಾರ ಮಾಡಿದ್ದೇನು ಗೊತ್ತಾ..? | DK Shivakumar | Oneindia Kannada

      ಬೆಂಗಳೂರು, ಅಕ್ಟೋಬರ್ 03: ಅಕ್ರಮ ಹಣ ವರ್ಗಾವಣೆಗೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಯಲ(ಐಟಿ)ದ ವಶದಲ್ಲಿರುವ ಕನಕಪುರ ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ.

      ಈ ಪ್ರಕರಣವನ್ನು ಕೇಂದ್ರ ತನಿಖಾ ದಳ(ಸಿಬಿಐ)ಕ್ಕೆ ಒಪ್ಪಿಸಲು ರಾಜ್ಯ ಬಿಜೆಪಿ ಸರ್ಕಾರ ಒಪ್ಪಿಗೆ ಸೂಚಿಸಿದೆ.

      ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಸಿಕ್ಕ ಅಕ್ರಮ ಹಣ ಭ್ರಷ್ಟಾಚಾರದಿಂದ ಬಂದಿದ್ದಿರಬಹುದು ಎಂಬ ಅನುಮಾನದ ಮೇರೆಗೆ ಭ್ರಷ್ಟಾಚಾರ ವಿರೋಧಿ ಕಾಯ್ದೆ-1988 ರ ಅಡಿಯಲ್ಲಿ ವಿಚಾರಣೆ ನಡೆಸಲು ಇ.ಡಿ.ಯು ಸಿಬಿಐ ಗೆ ಮನವಿ ಮಾಡಿದೆ. ಈ ಕುರಿತು ಕರ್ನಾಟಕ ಸರ್ಕಾರಕ್ಕೆ ಜಾರಿ ನಿರ್ದೇಶನಾಲಯ ಪತ್ರಮುಖೇನ ಮನವಿ ಮಾಡಿದ್ದು, ಅದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

      ಒಂದರ ಮೇಲೊಂದು ಆಘಾತ

      ಒಂದರ ಮೇಲೊಂದು ಆಘಾತ

      ಆದಾಯ ತೆರಿಗೆ ಅಧಿಕಾರಿಗಳಿಂದ 2018ರ ಆಗಸ್ಟ್ ನಲ್ಲಿ ನಿರಂತರವಾಗಿ ವಿಚಾರಣೆಗೊಳಪಟ್ಟ ಡಿಕೆ ಶಿವಕುಮಾರ್ ಅವರನ್ನು ನಂತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇದೀಗ ಸಿಬಿಐ ಸಹ ಈ ಕುರಿತು ವಿಚಾರಣೆ ನಡೆಸಲಿದ್ದು, ಡಿಕೆ ಶಿವಕುಮಾರ್ ಅವರಿಗೆ ಒಂದರಮೇಲೊಂದರಂತೆ ಆಘಾತ ಎದುರಾಗುತ್ತಿದೆ

      ದೆಹಲಿ ಮನೆಯಲ್ಲಿ ಸಿಕ್ಕಿದ್ದ ಹಣ

      ದೆಹಲಿ ಮನೆಯಲ್ಲಿ ಸಿಕ್ಕಿದ್ದ ಹಣ

      ಆಗಸ್ಟ್ 2017 ರಲ್ಲಿ ಡಿಕೆಶಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ 8.50 ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿತ್ತು. ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಲಭ್ಯವಾದ ಈ ಹಣಕ್ಕೆ ಯಾವುದೇ ರೀತಿಯ ಲೆಕ್ಕವಿರಲಿಲ್ಲ.

      ವಶಕ್ಕೆ ಪಡೆದಿದ್ದ ಇ.ಡಿ. ಅಧಿಕಾರಿಗಳು

      ವಶಕ್ಕೆ ಪಡೆದಿದ್ದ ಇ.ಡಿ. ಅಧಿಕಾರಿಗಳು

      ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೆ. 3ರಂದು ಇ.ಡಿ. ಡಿಕೆ ಶಿವಕುಮಾರ್ ಅವರನ್ನು ಬಂಧಿಸಿತ್ತು. ಇದಕ್ಕೂ ಮೊದಲು ಆಗಸ್ಟ್ 30ರಿಂದ ಸತತ ನಾಲ್ಕು ದಿನ ವಿಚಾರಣೆಗೆ ಒಳಪಡಿಸಿತ್ತು. ಬಳಿಕ ಅವರನ್ನು ವಿಶೇಷ ನ್ಯಾಯಾಲಯವು ಇ.ಡಿ ವಶಕ್ಕೆ ಒಪ್ಪಿಸಿತ್ತು. 14 ದಿನಗಳ ವಿಚಾರಣೆಯ ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ತಿಹಾರ್ ಜೈಲಿನಲ್ಲಿರುವ ಅವರ ನ್ಯಾಯಾಂಗ ಬಮಧನದ ಅವಧಿ ಅಕ್ಟೋಬರ್ 1 ರಂದು ಮುಕ್ತಾಯವಾಗಿತ್ತು.

      ಅಕ್ಟೋಬರ್ 15 ರವರೆಗೆ ಬಂಧನ ವಿಸ್ತರಣೆ

      ಅಕ್ಟೋಬರ್ 15 ರವರೆಗೆ ಬಂಧನ ವಿಸ್ತರಣೆ

      ಆದರೆ ಡಿಕೆ ಶಿವಕುಮಾರ್ ಅವರ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಕುರಿತಂತೆ ಹಲವು ದಾಖಲೆಗಳನ್ನು ಇ.ಡಿ.(ಜಾರಿ ನಿರ್ದೇಶನಾಲಯ) ವಶಪಡಿಸಿಕೊಂಡಿದ್ದು, ಅಕ್ರಮ ವ್ಯವಹಾರದ ಕುರಿತಂತೆ ಹಲವು ದಾಖಲೆಗಳನ್ನು ಕಲೆಹಾಕಿದೆ. ಈ ಕುರಿತು ಮತ್ತಷ್ಟು ವಿಚಾರಣೆಯ ಅಗತ್ಯವಿದ್ದು, ಜಾಮೀನಿನ ಮೇಲೆ ಡಿಕೆಶಿ ಬಿಡುಗಡೆಯಾದರೆ ತಮ್ಮ ಪ್ರಭಾವವನ್ನು ಬಳಸಿಕೊಂಡು ಸಾಕ್ಷ್ಯ ನಾಶ ಮಾಡಬಹುದು ಎಂಬ ವಾದವನ್ನು ಮುಂದಿಟ್ಟು, ಅವರ ಬಂಧನದ ಅವಧಿಯನ್ನು ಅಕ್ಟೋಬರ್ 15 ರವರೆಗೆ ವಿಸ್ತರಿಸುವಲ್ಲಿ ಇಡಿ ಯಶಸ್ವಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+