Cauvery dispute: ಮೌನ ಮುರಿದ ವಿನೋದ್ ಪ್ರಭಾಕರ್ ಹೇಳಿದ್ದೇನು?
ಬೆಂಗಳೂರು, ಸೆಪ್ಟಂಬರ್ 20: ಕಾವೇರಿ ವಿಚಾರದಲ್ಲಿ ಕನ್ನಡ ಚಿತ್ರರಂಗ ಸುಮ್ಮನೇ ಕೂತಿಲ್ಲ ಎಂದು ತಮ್ಮದೇ ಆದ ಸ್ಟೈಲ್‌ನಲ್ಲಿ ಹೇಳುವ ಮೂಲಕ ನಟ ವಿನೋದ್ ಪ್ರಭಾಕರ್ ಅವರು ಮೌನ ಮುರಿದಿದ್ದಾರೆ. ಅದಲ್ಲದೇ ಈ ಮೂಲಕ ಕಾವೇರಿ ಪರ ಹೋರಾಟಗಾರರನ್ನು ಅವರು ಬೆಂಬಲಿಸಿದ್ದಾರೆ.
ತಮಿಳುನಾಡಿಗೆ ನಿತ್ಯ ಐದು ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ವಿಚಾರವಾಗಿ ಈಗಾಗಲೇ ಕರ್ನಾಟಕಲ್ಲಿ ಸಂಬಂಧಿಸಿದ ಪ್ರಾಧಿಕಾರ ಸೂಚನೆ ನೀಡಿದೆ. ಈ ಮಧ್ಯೆ ಕಾವೇರಿ ಪರ ಕನ್ನಡ ಚಿತ್ರರಂಗ ನಿಲ್ಲುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಕನ್ನಡ ಪರ ಹೋರಾಟಗಾರರು ಪ್ರತಿಭಟಿಸಿದ್ದರು.

ಈ ಕುರಿತು ಈಗಾಗಲೇ ನಟರಾದ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ದರ್ಶನ್ ಅವರು ಪ್ರತಿಕ್ರಿಯಿಸಿದ ಬೆನ್ನಲ್ಲೆ ನಟ ವಿನೋದ ಪ್ರಭಾಕರ್ ಅವರು ಸಹ ಧ್ವನಿಯಾಗಿದ್ದಾರೆ. ಕನ್ನಡ ಚಿತ್ರರಂಗ ಸುಮ್ಮನೆ ಕೂತಿಲ್ಲ. ಎಲ್ಲ ಕಲಾವಿದರು ತಮ್ಮದೇ ಆದ ರೀತಿಯಲ್ಲಿ ಹೋರಾಟಗಾರರನ್ನು ಬೆಂಬಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮೌನ ಮುರಿದು ಶಿವಣ್ಣ ಹೇಳಿದ್ದೇನು?
ಬುಧವಾರ ಸಂಜೆಯಷ್ಟೇ ಸೆಂಚುರಿ ಸ್ಟಾರ್, ದೊಡ್ಡನೆಯ ಶಿವರಾಜ್ ಕುಮಾರ್ ಅವರು ಟ್ವೀಟ್ ಮಾಡಿ, ''ರೈತ ದೇಶದ ಬೆನ್ನೆಲುಬು ಅಂತಾರೆ ಆ ರೈತನ ಬೆನ್ನೆಲುಬು ನಮ್ಮ ಕಾವೇರಿ. ರಾಜ್ಯದಲ್ಲಿ ಈ ಸರಿ ಮಳೆಯ ಅಭಾವವಿದು ರೈತ ಆಗಲೇ ಸಂಕಷ್ಟದಲ್ಲಿದಾನೆ. ಎರಡು ರಾಜ್ಯದ ನಾಯಕರು ಹಾಗು ನ್ಯಾಯಾಲಯ ಎಲ್ಲ ಅಂಶಗಳನ್ನು ಪರಿಶೀಲಿಸಿ ಒಂದು ಸಮಾಧಾನಕರ ಪರಿಹಾರ ಕಂಡುಕೊಳ್ಳಬೇಕು ಅನ್ನೋದು ನನ್ನ ಪ್ರಾರ್ಥನೆ'' ಎಂದು ಅವರು ಪೋಸ್ಟ್ ಮಾಡುವ ಮೂಲಕ ಕಾವೇರಿ ಪರ ಹೋರಾಟಗಾರರನ್ನು ಅವರು ಬೆಂಬಲಿಸಿದ್ದಾರೆ.
ಕೆಲವರು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಯ್ತು, ನಟ ಕಿಚ್ಚ ಸುದೀಪ್, ಶಿವಣ್ಣ ಆಯ್ತು ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರು ಕಾವೇರಿ ಪರ ಹೋರಾಟಗಾರರನ್ನು ಬೆಂಬಲಿಸುವುದು ಯಾವಾಗ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರರಂಗದ ಒಬ್ಬೊಬ್ಬರೇ ಮೌನ ಮುರಿದ ಕಾವೇರಿ ವಿಚಾರ ಕುರಿತು ಮಾತನಾಡುವ, ಬೆಂಬಲಿಸುವ ಸಾಧ್ಯತೆಗಳು ಇವೆ.












Click it and Unblock the Notifications