ವಿ. ರಮಾಮಣಿಯವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ
ಬೆಂಗಳೂರು, ಸೆಪ್ಟೆಂಬರ್ 12: ವಿ.ಆರ್.ಎ. ರಮಾಮಣಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸೆಪ್ಟೆಂಬರ್ 14ರಂದು ಬೆಂಗಳೂರಿನ ರಾಮ ಲಲಿತ ಕಲಾ ಮಂದಿರದಲ್ಲಿ ನಡೆಯಲಿದೆ.
ವಿ. ಸಿಎನ್ ಚಂದ್ರಶೇಖರ್ ವಯೋಲಿನ್, ವಿ.ಎಚ್‌ಎಸ್ ಸುಧೀಂದ್ರ-ಮೃದಂಗ, ವಿ. ರಂಗನಾಥ ಚಕ್ರವರ್ತಿ ಅವರು ಘಟದೊಂದಿಗೆ ಸಾಥ್ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್.ಕೆ ಪದ್ಮನಾಭ ಆಗಮಿಸಲಿದ್ದಾರೆ. ಆರ್‌ಎ ರಮಾಮಣಿಯವರು ತಮಗೆ 5 ವರ್ಷವಿದ್ದಾಗಲೇ ಅವರು ಸಂಗೀತಾಭ್ಯಾಸ ಆರಂಭಿಸಿದ್ದರು.
ಪ್ರಸಿದ್ಧ ಸಂಗೀತಗಾರರಾದ ವಿ.ಶ್ರೀನಿವಾಸ ರಾಮಚಂದ್ರರಾವ್, ವಿ. ಬಳ್ಳಾರಿ ಶೇಷಗಿರಿ ಆಚಾರ್, ವಿ. ಆರ್‌ಕೆ ಶ್ರೀಕಂಠನ್, ವಿ. ಅನೂರ್ ರಾಮಕೃಷ್ಣ, ವಿ. ಪಾಲ್‌ಘಟ್ ಕೆ.ವಿ. ನಾರಾಯಣಸ್ವಾಮಿ ಅವರ ಬಳಿ ಸಂಗೀತಾಭ್ಯಾಸ ಮಾಡಿದ್ದಾರೆ.
ಇನ್ನು ಅವರ ಪತಿ ವಿ. ಟಿಎಎಸ್ ಮಣಿ ಅವರು ಮೃದಂಗದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.