• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫುಟ್‌ಪಾತ್ ಮೇಲೆ ನುಗ್ಗಿದ ಕಾರು, 7 ಮಂದಿಗೆ ಗಾಯ: ವೈರಲ್ ವಿಡಿಯೋ

|
   Bengaluru : ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನಲ್ಲಿ ಕಾರ್ ಚಾಲಕನಿಂದ ಅನಾಹುತ

   ಬೆಂಗಳೂರು, ಆಗಸ್ಟ್ 19: ಕುಡಿದ ಮತ್ತಿನಲ್ಲಿ ಕಾರ್ ಚಾಲಕ ಫುಟ್‌ಪಾತ್ ಮೇಲೆ ಹತ್ತಿಸಿದ ಆಘಾತಕಾರಿ ಘಟನೆ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಭಾನುವಾರ ನಡೆದಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ.

   ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೋಟೆಲ್ ಒಂದರ ಮುಂಭಾಗ ಈ ಅವಘಡ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಅದರ ವಿಡಿಯೋ ಸೆರೆಯಾಗಿದೆ. ಪಾದಚಾರಿ ಮಾರ್ಗದಲ್ಲಿದ್ದ ಜನರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

   ಅಪ್ರಾಪ್ತ ಯುವಕನ ಜಾಲಿ ರೈಡ್ ಗೆ ಯುವತಿ ಬಲಿ

   ಎಸ್‌ಯುವಿ ಚಾಲಕ ರಾಜೇಂದ್ರನನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೇಗವಾಗಿ ಬಂದ ಬಿಳಿ ಬಣ್ಣದ ಮಹೀಂದ್ರಾ ಝೈಲೋ ವಾಹನ ಫುಟ್‌ಪಾತ್ ಮೇಲೆಹತ್ತಿ ಅಲ್ಲಿ ಸಾಗುತ್ತಿದ್ದ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಒಂಬತ್ತು ಸೆಕೆಂಡುಗಳ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

   ಗೌತಮ್ ಮತ್ತು ಶಂಕರ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

   ಮೈಸೂರಿನಲ್ಲಿ ಅಪ್ರಾಪ್ತ ಯುವಕರಿಂದ ಹಿಟ್ ಅಂಡ್ ರನ್ ಘಟನೆ

   'ಇದು ಪಾನಮತ್ತನಾಗಿ ಚಾಲನೆ ಓಡಿಸಿದ ಪ್ರಕರಣ. ಅತಿಯಾಗಿ ಮದ್ಯ ಸೇವಿಸಿದ್ದ ಚಾಲಕ, ಚಾಲನೆ ಮೇಲೆ ನಿಯಂತ್ರಣ ತಪ್ಪಿದ್ದಾನೆ. ಇದರಿಂದ ಈ ಅವಘಡ ಸಂಭವಿಸಿದೆ. ಎಲ್ಲರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ' ಎಂದು ಎಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸರು ತಿಳಿಸಿದ್ದಾರೆ.

   ಮೂಡಬಿದರೆ ಬಳಿ ಕಾಲೇಜು ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ; ಓರ್ವಳ ಸ್ಥಿತಿ ಗಂಭೀರ

   ಅಪಘಾತದ ಸ್ಥಳದಲ್ಲಿದ್ದ ಹೋಟೆಲ್‌ನಲ್ಲಿ ಹೆಚ್ಚಿನ ಜನರಿಂದರು. ಹೀಗಾಗಿ ಕೆಲವರು ತಮ್ಮ ಸರದಿಗಾಗಿ ಹೊರಗೆ ಕಾಯುತ್ತಿದ್ದರು. ಅಲ್ಲದೆ, ನಡೆದುಕೊಂಡು ಹೋಗುತ್ತಿದ್ದ ಕೆಲವರಿಗೆ ಕೂಡ ಕಾರ್ ಡಿಕ್ಕಿಯಾಗಿದೆ. ಚಾಲಕ ರಾಜೇಂದ್ರ ಟ್ರಾವೆಲ್ ಸಂಸ್ಥೆಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

   English summary
   A SUV rammed into a busy footpath, injured seven on Sunday in HSR Layout, Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X