ಸಂಚಾರಿ ಪೊಲೀಸರ ವೇಷದಲ್ಲಿ ಕಾರು ಕದ್ದ ಕಳ್ಳರು

ಬೆಂಗಳೂರು, ನವೆಂಬರ್ 25 : ಪೊಲೀಸರ ವೇಷ ಧರಿಸಿ ಕಳ್ಳತನ ಮಾಡುವುದು ಕಳ್ಳರಿಗೆ ಸುಲಭ ದಾರಿಯಾಗಿ ಕಂಡಿರುವಂತಿದೆ. ನಗರದಲ್ಲಿ ಮತ್ತೆ ಮತ್ತೆ ಇಂಥ ಘಟನೆಗಳು ಬೆಳಕಿಗೆ ಬರುತ್ತಿರುವುದೇ ಈ ಅನುಮಾನ ಮೂಡಲು ಕಾರಣ.

ಮೊನ್ನೆ ತಾನೆ ಪೊಲೀಸರಂತೆ ವೇಷ ಧರಿಸಿ ಸುಲಿಗೆ ಮಾಡುತ್ತಿದ್ದ ಗುಂಪನ್ನು ಬಂಧಿಸುವಲ್ಲಿ ನಗರದ ಪೊಲೀಸರು ಯಶಸ್ವಿ ಆಗಿದ್ದರು. ಈಗ ಮತ್ತೆ ಅಂಥಹದ್ದೇ ಘಟನೆ ನಗರದಲ್ಲಿ ಘಟಿಸಿದೆ.

ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಸಂಚಾರಿ ಪೊಲೀಸರ ವೇಷದಲ್ಲಿ ಬಂದ ಗುಂಪು ಟೋಯಿಂಗ್ ವಾಹನ ಬಳಸಿ ಹಾಡು ಹಗಲೇ ಎತ್ತಿಕೊಂಡು ಹೋಗಿದೆ.

Car has been thefted by fake traffic police in bengaluru

ಸುತ್ತಮುತ್ತಲಿನವರೆಲ್ಲ ಬಹುಶಃ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರು ಎತ್ತಿಕೊಂಡು ಹೋಗುತ್ತಿರಬಹುದು ಎಂದುಕೊಂಡಿದ್ದಾರೆ. ಆದರೆ ಕಾರಿನ ಮಾಲೀಕ ಕಿರಣ್ ಅವರು ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದಾಗ ವಾಹನ ಕಳುವಾಗಿರುವುದು ಗಮನಕ್ಕೆ ಬಂದಿದೆ.

ಟೋಯಿಂಗ್ ವಾಹನದಲ್ಲಿ ಕಿರಣ್ ಅವರ ಕಾರನ್ನು ಎತ್ತಿಕೊಂಡು ಹೋಗುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಆದರೆ ಈ ವಿಷಯವಾಗಿ ದೂರು ದಾಖಲಿಸಲು ರಾಜಾಜಿನಗರ ಠಾಣೆ ಪೊಲೀಸರು ಹಿಂದೇಟು ಹಾಕಿದ್ದಾರೆ. ಪೊಲೀಸರ ಹಿಂಜರಿಕೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+