ಬೆಳ್ಳಂಬೆಳಗ್ಗೆ ಬೆಂಗಳೂರನ್ನು ತೊಯ್ದು ತೊಪ್ಪೆಯಾಗಿಸಿದ ಮಳೆ

ಬೆಂಗಳೂರು, ಮೇ 1: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ(ಏ.30)ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಷಿಷಿಯಸ್ ವರೆಗೂ ತಲುಪಿ, 'ಉಸ್ಸಪ್ಪಾ ಎಂಥ ಸೆಖೆ' ಎಂದು ಬೈದುಕೊಂಡವರಿಗೆಲ್ಲ ಇಂದು ಬೆಳ್ಳಂಬೆಳಗ್ಗೆ ವರುಣನ ಶುಭೋದಯ ಸಂದೇಶ ಸಿಕ್ಕಿದೆ!

ಹೌದು, ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ ಗುಡುಗು, ಗಾಳಿ ಸಮೇತ ಮಳೆ ಸುರಿದಿದೆ. ಜಾಲಹಳ್ಳಿ, ರಾಜಾಜೀನಗರ, ಚಾಮರಾಜಪೇಟೆ, ಗಾಂಧಿನಗರ, ಬಿನ್ನಿಪೇಟೆ ಮುಂತಾದ ಹಲವೆಡೆ ಮಳೆ ಸುರಿದಿದೆ.

ಅಚ್ಚರಿ ಎಂದರೆ ಹವಾಮಾನ ಇಲಾಖೆಯಿಂದ ಯಾವುದೂ ಮುನ್ಸೂಚನೆ ಇರಲಿಲ್ಲ. ಏ.28 ಮತ್ತು 29 ರಂದು ಬೆಂಗಳೂರಿನಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿತ್ತು. ನಿನ್ನೆ(ಏ.30) ಸಾಂಸ್ಕೃತಿಕ ನಗರಿ ಮೈಸೂರನ್ನು ತೊಯ್ದು ತೊಪ್ಪೆಯಾಗಿಸಿದ್ದ ಮಳೆ, ಇಂದು ಉದ್ಯಾನ ನಗರಿ ಬೆಂಗಳೂರನ್ನು ತೋಯಿಸಿದೆ.

ಮೇ.4 ಅಥವಾ 5 ರಂದು ರಾಜ್ಯದಲ್ಲಿ ಮೋಡಕವಿದ ವಾತಾವರಣ ಕಂಡುಬರಲಿದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕಾರ್ಮಿಕರ ದಿನದ ಸರ್ಕಾರಿ ರಜೆಯಂದು ರಿಲ್ಯಾಕ್ಸ್ ಆಗಿ ಬೆಳಿಗ್ಗೆ ಎದ್ದವರಿಗೆಲ್ಲ ಸಿಕ್ಕಿದ್ದು ದಟ್ಟ ಮೋಡದ ಶುಭೋದಯ ಸಂದೇಶ. ಕೆಲವೇ ಕ್ಷಣದಲ್ಲಿ ಗಾಳಿಯೊಂದಿಗೆ ಆರಂಭವಾದ ಮಳೆ ರಾಜಧಾನಿಯನ್ನು ಬೆಳ್ಳಂಬೆಳಗ್ಗೆ ತೋಯ್ದು ತೊಪ್ಪೆಯಾಗಿಸಿದೆ. ಒಂದೇ ಸಮಾಧಾನ ಅಂದ್ರೆ ಇವತ್ತು ಆಫೀಸಿಗೆ ಹೋಗೋ ಗೋಜಿಲ್ಲ, ರಜೆ ಎಂಬುದು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+