ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಯಪ್ಪನಹಳ್ಳಿಯಲ್ಲಿ ಚಿಟ್ಟೆ ಮಾದರಿ ರೈಲ್ವೆ ನಿಲ್ದಾಣ, ವಿಶೇಷತೆಯೇನು?

|
Google Oneindia Kannada News

ಬೆಂಗಳೂರು, ಮೇ 14: ಬೈಯಪ್ಪನಹಳ್ಳಿಯಲ್ಲಿ ಚಿಟ್ಟೆ ಮಾದರಿಯಲ್ಲಿ ರೈಲ್ವೆ ಟರ್ಮಿನಲ್ ನಿರ್ಮಾಣವಾಗುತ್ತಿದ್ದು, ಏರ್‌ಪೋರ್ಟ್‌ ಮಾದರಿಯ ಸೌಲಭ್ಯಗಳು ಕೆಲವೇ ವರ್ಷಗಳಲ್ಲಿ ಲಭ್ಯವಾಗಲಿದೆ.

ಭಾರತೀಯ ರೈಲ್ವೆ ಇಲಾಖೆ ಹಾಗೂ ಬಿಬಿಎಂಪಿಯು ಸೋಮವಾರ ನೀಲನಕ್ಷೆ ಬಿಡುಗಡೆ ಮಾಡಿದ್ದು, ಯೋಜನೆ ಬಗ್ಗೆ ವಿವರಿಸಿದ್ದಾರೆ. ಒಟ್ಟು 132 ಎಕರೆ ಪ್ರದೇಶದಲ್ಲಿ ಇದು ನಿರ್ಮಾಣವಾಗುತ್ತಿದೆ. 30 ಎಕರೆಯನ್ನು 99 ವರ್ಷಕ್ಕೆ ಖಾಸಗಿಯವರಿಂದ ಪಡೆಯಲಾಗಿದೆ.

ಚಿಟ್ಟೆ ಟರ್ಮಿನಲ್ ವಿಶೇಷತೆಯೇನು?

ಚಿಟ್ಟೆ ಟರ್ಮಿನಲ್ ವಿಶೇಷತೆಯೇನು?

ರೈಲ್ವೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಇದು ವರ್ಲ್ಡ ಕ್ಲಾಸ್ ನಿಲ್ದಾಣವಾಗಲಿದೆ. ಸುಮಾರು 250 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ವಾಣಿಜ್ಯ ಚಟುವಟಿಕೆಗಳು ಇನ್ನು 8 ರಿಂದ 10 ವರ್ಷದಲ್ಲಿ ಅಭಿವೃದ್ಧಿಗೊಳ್ಳಲಿದೆ.

9 ಲಕ್ಷ ಪ್ರಯಾಣಿಕರ ನಿರೀಕ್ಷೆ

9 ಲಕ್ಷ ಪ್ರಯಾಣಿಕರ ನಿರೀಕ್ಷೆ

ಈ ಚಿಟ್ಟೆ ಟರ್ಮಿನಲ್ ಮುಂದಿನ 20 ವರ್ಷಗಳಲ್ಲಿ ಸುಮಾರು 9 ಲಕ್ಷ ಪ್ರಯಾಣಿಕರನ್ನು ನಿರೀಕ್ಷಿಸುತ್ತಿದೆ. ವಿಶ್ರಾಂತಿ ಕೊಠಡಿ, ಆಗಮಿಸುವ ಹಾಗೂ ನಿರ್ಗಮಿಸುವವರಿಗೆ ವಿಶೇಷ ಕೊಠಡಿ ವ್ಯವಸ್ಥೆ, ರೈಲು ಬರುವ 15 ನಿಮಿಷಗಳಿದ್ದಲ್ಲಿ ಅಲ್ಲಿಂದ ತೆರಳುವ ವ್ಯವಸ್ಥೆ ಮಾಡಲಾಗುತ್ತದೆ ಎಂದುನ ಜನರಲ್ ಮ್ಯಾನೇಜರ್ ಅಶ್ವಿನಿ ಕುಮಾರ್ ತಿಳಿಸಿದ್ದಾರೆ.

ನೈಋತ್ಯ ರೈಲ್ವೆ ನಿಲ್ದಾಣಗಳಲ್ಲಿ 2 ಸಾವಿರ ಮಕ್ಕಳ ರಕ್ಷಣೆ ನೈಋತ್ಯ ರೈಲ್ವೆ ನಿಲ್ದಾಣಗಳಲ್ಲಿ 2 ಸಾವಿರ ಮಕ್ಕಳ ರಕ್ಷಣೆ

ಚಿಟ್ಟೆ ಟರ್ಮಿನಲ್ ಹೇಗಿರಲಿದೆ

ಚಿಟ್ಟೆ ಟರ್ಮಿನಲ್ ಹೇಗಿರಲಿದೆ

ನಿಲ್ದಾಣದ ಆಕಾರ ಚಿಟ್ಟೆಯ ರೀತಿ ಇರಲಿದೆ. ಅದರಲ್ಲಿ ರೂಫ್ ಗಾರ್ಡನ್‌ಗಳಿರಲಿವೆ. ಉದ್ಯಾನನಗರಿ ವಿಷಯವಸ್ತುವಾಗಿಸಿಕೊಳ್ಳಲಾಗಿದೆ. ಶುಚಿತ್ವ ಹಾಗೂ ಪ್ರಯಾಣಿಕರ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್ ಜೂನ್‌ನಲ್ಲಿ ಬಳಕೆಗೆ ಮುಕ್ತ, ತಗ್ಗಲಿದೆ ರೈಲು ದಟ್ಟಣೆಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್ ಜೂನ್‌ನಲ್ಲಿ ಬಳಕೆಗೆ ಮುಕ್ತ, ತಗ್ಗಲಿದೆ ರೈಲು ದಟ್ಟಣೆ

ವಾಣಿಜ್ಯ ಮಳಿಗೆಗಳಿಗೂ ಅವಕಾಶ

ವಾಣಿಜ್ಯ ಮಳಿಗೆಗಳಿಗೂ ಅವಕಾಶ

ಮುಂದಿನ ಐದಾರು ವರ್ಷಗಳಲ್ಲಿ ನಿಲ್ದಾಣದಲ್ಲಿಯೇ ಹೋಟೆಲ್, ಆಸ್ಪತ್ರೆ, ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡಲಾಗುತ್ತದೆ. 2017ರ ನವೆಂಬರ್‌ನಲ್ಲಿ ಆರ್ಕಿಟೆಕ್ಟರ್‌ನಿಂದ ಸಲಹೆ ಪಡೆದಿದ್ದರು. ಭಾರತೀಯ ರೈಲ್ವೆಯು ದೇಶದ 400 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲು ಖಾಸಗಿ ಸಹಭಾಗಿತ್ವದೊಂದಿಗೆ ಮುಂದಾಗಿದೆ.

ಬೈಯಪ್ಪನಹಳ್ಳಿ ರೈಲು ನಿಲ್ದಾಣ ಕಾಮಗಾರಿ ಶೀಘ್ರ ಅಂತ್ಯ, ಏನು ಅನುಕೂಲ?ಬೈಯಪ್ಪನಹಳ್ಳಿ ರೈಲು ನಿಲ್ದಾಣ ಕಾಮಗಾರಿ ಶೀಘ್ರ ಅಂತ್ಯ, ಏನು ಅನುಕೂಲ?

English summary
A butterfly-shaped rail terminal at Byappanahalli will offer airport-like facilities to passengers in a few years. The Indian Railway Stations Development Corporation (IRSDC), along with BBMP, on Monday unveiled the blueprint of the Byappanahalli station development project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X