Get Updates
Get notified of breaking news, exclusive insights, and must-see stories!

Byappanahalli- KR Pura Metro: ಬೈಯಪ್ಪನಹಳ್ಳಿ- ಕೆಆರ್ ಪುರಂ ಮೆಟ್ರೋ ಮಾರ್ಗದಲ್ಲಿ ಕಂಡು ಬಂದ ಆರು ಬೋಗಿಯ ರೈಲು- ಮಾಹಿತಿ, ವಿವರ

ಬೆಂಗಳೂರು, ಆಗಸ್ಟ್‌ 12: ಬೈಯಪ್ಪನಹಳ್ಳಿ-ಕೃಷ್ಣರಾಜಪುರಂ (ಕೆಆರ್ ಪುರಂ) ಮೆಟ್ರೊ ರೈಲು ಮಾರ್ಗದ ಪ್ರಾಯೋಗಿಕ ಸಂಚಾರ ಕಳೆದು ತಿಂಗಳು ಆರಂಭವಾಗಿದೆ. 6 ಬೋಗಿಗಳ ಮೆಟ್ರೊ ರೈಲನ್ನು ಬೆನ್ನಗಾನಹಳ್ಳಿಯಲ್ಲಿ ಇರುವ ತೆರೆದ ವೆಬ್‌ ಗ್ರಿಡರ್‌ ಮೇಲೆ ನಿಲ್ಲಿಸಿರುವುದು ಕಂಡುಬಂದಿದೆ. ಬೈಯಪ್ಪನಹಳ್ಳಿ- ಕೃಷ್ಣರಾಜಪುರಂ ನೇರಳೆ ಮಾರ್ಗವು ಎರಡು ಕಿಮೀ ವಿಸ್ತರಣೆಯಾಗಿದೆ. ಇದು ವೈಟ್‌ಫೀಲ್ಡ್ ಪ್ರದೇಶವನ್ನು ಕೆಂಗೇರಿ, ಮೈಸೂರು ರಸ್ತೆ, ಮೆಜೆಸ್ಟಿಕ್ ಸೇರಿದಂತೆ ಬೆಂಗಳೂರಿನ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.

ಪ್ರಾಯೋಗಿಕ ಚಾಲನೆಯ ಭಾಗವಾಗಿ ಆರು ಬೋಗಿಗಳ ಮೆಟ್ರೋ ರೈಲು ಕಳೆದ ತಿಂಗಳಿಂದ ಸಂಚಾರ ನಡೆಸುತ್ತಿದೆ. ಇದನ್ನು ಸಾಮಾನ್ಯವಾಗಿ ಉದ್ಘಾಟನೆಗಿಂತ ಮೊದಲು ನಡೆಸಲಾಗುತ್ತದೆ. ಟ್ರ್ಯಾಕ್ ಜೋಡಣೆ, ವೇಗ ಮತ್ತು ಇತರ ತಾಂತ್ರಿಕ ಸವಾಲುಗಳನ್ನು ಪರಿಶೀಲಿಸಲು ಪ್ರಾಯೋಗಿನ ಸಂಚಾರವನ್ನು ನಡೆಸಲಾಗುತ್ತದೆ.

Byappanahalli- KR Pura Metro: BMRCL Conduct Load Testing of Open Web Girder at Benniganahalli

ಬೆನ್ನಗಾನಹಳ್ಳಿಯ ರೈಲ್ವೆ ಹಳಿಯ ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಓಪನ್ ವೆಬ್ ಗ್ರಿಡರ್‌ (ಒಡಬ್ಲ್ಯುಜಿ) ಮೇಲೆ ಲೋಡ್ ಪರೀಕ್ಷೆಯನ್ನೂ ನಡೆಸಲಾಗಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ನಂತರ ಮಾರ್ಗವನ್ನು ಪರಿಶೀಲಿಸಿದ್ದಾರೆ. ಅವರು ಉದ್ಘಾಟನೆಗೆ ಅನುಮೋದನೆ ನೀಡಬೇಕಿದೆ.

ಜುಲೈ ಮಧ್ಯದಲ್ಲಿ ಕೆಆರ್ ಪುರಂ-ಬೈಯಪ್ಪನಹಳ್ಳಿ ಮಾರ್ಗವನ್ನು ಉದ್ಘಾಟಿಸುವ ಗುರಿ ಇದೆ ಎಂದು ಬಿಎಂಆರ್‌ಸಿಎಲ್ ಈ ಹಿಂದೆ ಘೋಷಿಸಿತ್ತು. ಆದಾಗ್ಯೂ, ಈ ಮೆಟ್ರೋ ಮಾರ್ಗದ ಉದ್ಘಾಟನಾ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.

Byappanahalli- KR Pura Metro: BMRCL Conduct Load Testing of Open Web Girder at Benniganahalli

ಕೆಲವು ವರದಿಗಳ ಪ್ರಕಾರ, ಮೆಟ್ರೋ ಇಲಾಖೆಯು ಸೆಪ್ಟಂಬರ್‌ನಲ್ಲಿ ಈ ವಿಸ್ತರಣೆಯನ್ನು ಉದ್ಘಾಟಿಸುವ ಸಾಧ್ಯತೆಯಿದೆ. ನೇರಳೆ ಮಾರ್ಗವು ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಏಕೆಂದರೆ ವೈಟ್‌ಫೀಲ್ಡ್ ಹಲವಾರು ಟೆಕ್ ಪಾರ್ಕ್‌ಗಳನ್ನು ಹೊಂದಿದೆ. ನಗರದ ವಿವಿಧ ಭಾಗಗಳ ಉದ್ಯೋಗಿಗಳು ಅಲ್ಲಿ ಕೆಲಸ ಮಾಡುತ್ತಾರೆ.

ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರವು ವೈಟ್‌ಫೀಲ್ಡ್- ಕೆಆರ್ ಪುರಂ ಮಾರ್ಗವನ್ನು ಪ್ರಾರಂಭಿಸಿತು. ಈ ಪ್ರಮುಖ ವಿಸ್ತರಣೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.

Byappanahalli- KR Pura Metro: BMRCL Conduct Load Testing of Open Web Girder at Benniganahalli

ನಂತರ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಬೆನ್ನಿಗಾನಹಳ್ಳಿ ರೈಲು ನಿಲ್ದಾಣದ ಮೇಲೆ ತೆರೆದ ವೆಬ್ ಗ್ರೈಂಡರ್ ಅನ್ನು ಸ್ಥಾಪಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನ ನಾಲ್ಕು ಹೊರವಲಯದ ಪಟ್ಟಣಗಳಿಗೆ ಮೆಟ್ರೋ ವಿಸ್ತರಣೆ

ಬೆಂಗಳೂರಿನ ನಾಲ್ಕು ಹೊರವಲಯದ ಪಟ್ಟಣಗಳಾದ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಮತ್ತು ಹೊಸಕೋಟೆಗೆ ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಈ ವಿಚಾರದ ಕುರಿತು ಚರ್ಚೆಯಾಗಿದೆ.

ಬೆಂಗಳೂರು ಗ್ರಾಮಾಂತರ ಶಾಸಕರ ಸಭೆಯಲ್ಲಿ ಭಾಗವಹಿಸಿದ ಮಾತನಾಡಿದ ಶಾಸಕರೊಬ್ಬರು, 'ಬೆಂಗಳೂರು ನಗರದೊಂದಿಗೆ ಸಂಪರ್ಕವನ್ನು ಹೆಚ್ಚಿಸಲು ನಾವು ಈ ನಾಲ್ಕು ಪಟ್ಟಣಗಳಿಗೆ ಮೆಟ್ರೋ ವಿಸ್ತರಣೆಯನ್ನು ಪ್ರಸ್ತಾಪಿಸಿದ್ದೇವೆ' ಎಂದು ಹೇಳಿದ್ದಾರೆ.

Byappanahalli- KR Pura Metro: BMRCL Conduct Load Testing of Open Web Girder at Benniganahalli

ನಮ್ಮ ಮೆಟ್ರೋದಿಂದ ಬೆಂಗಳೂರು ಬಳಿಯ ನಾಲ್ಕು ಪಟ್ಟಣಗಳ ಅಭಿವೃದ್ಧಿಯಾಗಲಿದೆ. ಇದು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಶಾಸಕರು ತಿಳಿಸಿದ್ದಾರೆ.

ನಮ್ಮ ಮೆಟ್ರೋ ಯೋಜನೆಯ 2ಎ ಮತ್ತು 2ಬಿ ಹಂತಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಬೆಂಗಳೂರಿನ ಉಪನಗರಗಳನ್ನು ಸಂಪರ್ಕಿಸುತ್ತದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.

ಈಗ ಸಿಲ್ಕ್‌ ಬೋರ್ಡ್‌ನಿಂದ ನೇರವಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇದು 2025ರಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಈ ಯೋಜನೆಯು ಬೆಂಗಳೂರು ಪ್ರಮುಖ ಐಟಿ ಕಾರಿಡಾರ್‌ಗಳಿಗೆ ಸಂಪರ್ಕ ಕಲ್ಪಿಸಲಿದೆ. ಈ ಯೋಜನೆಯಿಂದ ನಗರದ ಸಂಚಾರ ದಟ್ಟಣೆ ವ್ಯಾಪಕವಾಗಿ ಕಡಿಮೆ ಆಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+