ಕಾಂಗ್ರೆಸ್ ಹೈಕಮಾಂಡ್ ಅಂಗಳ ತಲುಪಿದ ಶಿವಾಜಿನಗರ ಟಿಕೆಟ್ ಫೈಟ್

ಬೆಂಗಳೂರು, ನವೆಂಬರ್ 6: ಶಿವಾಜಿನಗರ ಉಪ ಚುನಾವಣೆಯ ಟಿಕೆಟ್ ಫೈಟ್ ಇದೀಗ ಕಾಂಗ್ರೆಸ್ ಹೈಕಮಾಂಡ್ ಅಂಗಳ ತಲುಪಿದೆ.

ರಿಜ್ವಾನ್ ಅರ್ಷದ್ ಟಿಕೆಟ್ ಪ್ರಯತ್ನಕ್ಕೆ ಶಿವಾಜಿನಗರ ಕಾಂಗ್ರೆಸ್ ಮುಖಂಡರು ಮುಳ್ಳಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ. ಹೀಗಾಗಿ ಶಿವಾಜಿನಗರ ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸೆಪ್ಟೆಂಬರ್‌ನಲ್ಲಿ ರಿಜ್ವಾನ್ ಅರ್ಷದ್ ಹಾಗೂ ಬಿಆರ್ ನಾಯ್ಡು ವಿರುದ್ಧ ಮಾತಿನ ಚಕಮಕಿ ನಡೆದಿತ್ತು. ರೋಷನ್ ಬೇಗ್ ರಾಜೀನಾಮೆಯಿಂದ ತೆರವಾಗಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ಪ್ರಕ್ರಿಯೆಗಳು ನಡೆಯುತ್ತಿವೆ.

ರಿಜ್ವಾನ್ ಅರ್ಷದ್ ಮಾವನಿಂದಲೇ ವಿರೋಧ

ರಿಜ್ವಾನ್ ಅರ್ಷದ್ ಮಾವನಿಂದಲೇ ವಿರೋಧ

ಸ್ವತಃ ರಿಜ್ವಾನ್ ಅರ್ಷದ್ ಮಾವನಿಂದಲೂ ರಿಜ್ವಾನ್ ಅರ್ಷದ್‌ಗೆ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿದೆ. ರಿಜ್ವಾನ್ ಅರ್ಷದ್ ಟಿಕೆಟ್ ತಪ್ಪಿಸಲು ಸಾಕಷ್ಟು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ.

ತಾವು ಟಿಕೆಟ್ ಆಕಾಂಕ್ಷಿಯಾಗಿದ್ದರೂ ತಮ್ಮನ್ನು ಹೊರಗಿಟ್ಟು ಸಭೆ ನಡೆಸುತ್ತಿರುವುದ್ಯಾಕೆ ಎಂದು ನಾಯ್ಡು ಅಸಮಾಧಾನ ಹೊರಹಾಕಿದ್ದರು. ನಾಯ್ಡು ಬೆಂಬಲಿಗರೂ ಕೂಡ ಧ್ವನಿಗೂಡಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ ಅವರು, ಕಾರ್ಯಕರ್ತರು ಮುಖಂಡರಿಲ್ಲದೇ ಚುನಾವಣೆ ಮಾಡಲು ಆಗುತ್ತಾ? ನೀವೆಲ್ಲಾ ಬನ್ನಿ ಎಂದ ಸಮಾಧಾನಪಡಿಸಿ ಬಿ.ಆರ್. ನಾಯ್ಡು ಅವರನ್ನೂ ಸಭೆಗೆ ಸೇರಿಸಿಕೊಂಡಿದ್ದರು. ಇದೀಗ ಮತ್ತೆ ಹಳೇ ಜಗಳ ಹೊಗೆಯಾಡುತ್ತಿದೆ.

ಟಿಕೆಟ್ ಆಕಾಂಕ್ಷಿಗಳು ಯಾರ್ಯಾರು?

ಟಿಕೆಟ್ ಆಕಾಂಕ್ಷಿಗಳು ಯಾರ್ಯಾರು?

ಶಿಬಾಜಿನಗರದ ಟಿಕೆಟ್ ಆಕಾಂಕ್ಷಿಗಳಾದ ಹುಸೇನ್, ಬಿಆರ್ ನಾಯ್ಡು ಸೇರಿ ಪ್ರಮುಖರು, ಅಹ್ಮದ್ ಪಟೇಲ್, ಗುಲಾಂ ನಬಿ ಆಜಾದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ರಿಜ್ವಾನ್‌ಗೆ ಟಿಕೆಟ್ ನೀಡಿದರೆ ಸ್ಥಳೀಯ ಮುಖಂಡರು ಯಾರೂ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಎರಡು ಬಾರಿ ಚುನಾವಣೆಯಲ್ಲಿ ಸೋತವರಿಗೆ ಮತ್ಯಾಕೆ ಟಿಕೆಟ್

ಎರಡು ಬಾರಿ ಚುನಾವಣೆಯಲ್ಲಿ ಸೋತವರಿಗೆ ಮತ್ಯಾಕೆ ಟಿಕೆಟ್

ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋತವರಿಗೆ ಮತ್ತೆ ಟಿಕೆಟ್ ನೀಡುವ ಅಗತ್ಯವೇನಿದೆ, ರಿಜ್ವಾನ್ ಅರ್ಷದ್ ಗೆ ಕ್ಷೇತ್ರದಲ್ಲಿ ಹಿಡಿತವೂ ಇಲ್ಲ, ವಿಧಾನಪರಿಷತ್ ಸದಸ್ಯರಾಗಿ ಅಧಿಕಾರ ಸಿಕ್ಕಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

 ರಿಜ್ವಾನ್ ಬಿಟ್ಟು ಯಾರಿಗಾದರೂ ಟಿಕೆಟ್ ನೀಡಿ

ರಿಜ್ವಾನ್ ಬಿಟ್ಟು ಯಾರಿಗಾದರೂ ಟಿಕೆಟ್ ನೀಡಿ

ಯಾರಿಗೆ ಬೇಕಾದರೂ ಟಿಕೆಟ್ ನೀಡಿ ಆದರೆ ರಿಜ್ವಾನ್‌ ಅರ್ಷದ್ ಗೆ ಮಾತ್ರ ಬೇಡ, ಇನ್ಯಾರಿಗೇ ಕೊಟ್ಟರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಶಿವಾಜಿನಗರ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+