ಬೆಂಗಳೂರು 'ವಿಪ್ರೋ'ಗೆ ನಿತ್ಯ 3ಲಕ್ಷ ಲೀ.ಶೂನ್ಯ ಬ್ಯಾಕ್ಟೀರಿಯಾ ನೀರು ಪೂರೈಕೆ: BWSSB

ಬೆಂಗಳೂರು, ಮೇ 02: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್‌ ಸೈನ್ಸ್ (IISc) ವಿಜ್ಞಾನಿಗಳ ಸಹಯೋಗದಲ್ಲಿ ಬೆಂಗಳೂರು ಜಲಮಂಡಳಿ ಅಳವಡಿಸಿಕೊಂಡಿರುವ ದೇಶೀಯ ತಂತ್ರಜ್ಞಾನದ ಮೂಲಕ ಉತ್ಪಾದಿಸುತ್ತಿರುವ 'ಝೀರೋ ಬ್ಯಾಕ್ಟೀರಿಯ' ಸಂಸ್ಕರಿಸಿದ ನೀರಿನ ಪೂರೈಕೆಯನ್ನು BWSSB ಗುರುವಾರದಿಂದ ಆರಂಭವಾಗಿದೆ.

ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಅವರು, ಝೀರೋ ಬ್ಯಾಕ್ಟೀರಿಯ' ಸಂಸ್ಕರಿಸಿದ ಇಂದು 'ವಿಪ್ರೋ' (Wipro) ಕಂಪನಿಗೆ ಸರಬರಾಜು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

BWSSB Started Zero Bacteria Treated Water Daily Supply For Wipro in Bengaluru

ಐಟಿ ಕಂಪನಿಗಳಿಂದ ಸಕಾರಾತ್ಮಕ ಸ್ಪಂದನೆ

ಬೆಂಗಳೂರು ವ್ಯಾಪ್ತಿಯಲ್ಲಿ ಸಂಸ್ಕರಿಸಿದ ನೀರಿನ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಐಐಎಸ್‌ಸಿ ಯಿಂದ ವಿನೂತನ ತಂತ್ರಜ್ಞಾನವನ್ನು ಜಲಮಂಡಳಿ ಅಳವಡಿಸಿಕೊಂಡಿದೆ. ಈ ನೀರು ಪೂರೈಕೆಗೆ ಕ್ರಮಗಳಿಗೆ ಐಟಿ ಕಂಪನಿಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ ಎಂದರು.

ಜಲಮಂಡಳಿಯ ವತಿಯಿಂದ ನಗರದಲ್ಲಿ 34 ಕ್ಕೂ ಹೆಚ್ಚು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (STP) ಪ್ರಾರಂಭಿಸಲಾಗಿದೆ. ಇಷ್ಟು ಎಸ್‌ಟಿಪಿ ಗಳ ಮೂಲಕ ನಿತ್ಯ ಬೆಂಗಳೂರಿನಲ್ಲಿ 1200 MLDಯಷ್ಟು ಉತ್ತಮ ಗುಣಮಟ್ಟದ ಸಂಸ್ಕರಿಸಿದ ನೀರು ಲಭ್ಯವಾಗುತ್ತಿದೆ.

ಈ ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸುವ ಮೂಲಕ ಕಾವೇರಿ ನೀರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ಜಲಮಂಡಳಿಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕಳೆದ 2 ತಿಂಗಳಲ್ಲಿ ಕೈಗೊಂಡ ಕಾರ್ಯಗಳಿಗೆ ಐಟಿ ಕಂಪನಿಗಳು ಹಾಗೂ ಬಲ್ಕ್ ಯೂಸರ್ಸ್‌ಗಳು ಸಾಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಸ್ಕರಿಸಿದ ನೀರಿನ ಬೇಡಿಕೆ 60 ಸಾವಿರ ಲೀಟರ್‌ಗಳಿಂದ 6 ಎಂ.ಎಲ್‌.ಡಿ ಗೆ ತಲುಪಿದೆ ಎಂದು ಅವರು ವಿವರಿಸಿದರು.

ಐಟಿ ಕಂಪನಿಗಳಿಂದ ಈ ನಿರೀಗೆ ಭಾರೀ ಬೇಡಿಕೆ

ಐಐಎಸ್‌ಸಿ ವಿಜ್ಞಾನಿಗಳ ಸಹಯೋಗ, ಮಾರ್ಗದರ್ಶನದಲ್ಲಿ ಬೆಂಗಳೂರು ಜಲಮಂಡಳಿಯ ಎಂಜಿನೀಯರ್‌ಗಳು ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ದೇಶೀಯ ತಂತ್ರಜ್ಞಾನ ರೂಪಿಸಿದ್ದಾರೆ. ಎರಡು ವಾರಗಳ ಹಿಂದೆ ಪ್ರಾರಂಭಿಸಲಾದ ಈ ಯೋಜನೆಯ ಮೂಲಕ ಇಂದು ಪ್ರತಿ ದಿನ ಸುಮಾರು 1 ಕೋಟಿ ಲೀಟರ್‌ ನಷ್ಟು 'ಶೂನ್ಯ ಬ್ಯಾಕ್ಟೀರಿಯಲ್'‌ ಸಂಸ್ಕರಿಸಿದ ನೀರು ಉತ್ಪಾದನೆಯ ಸಾಮರ್ಥ್ಯವನ್ನು ಜಲಮಂಡಳಿ ಅಳವಡಿಸಿಕೊಂಡಿದೆ.

BWSSB Started Zero Bacteria Treated Water Daily Supply For Wipro in Bengaluru

ಬೆಂಗಳೂರಿನ ಅಗರ, ಕೆ.ಸಿ ವ್ಯಾಲಿ ಮತ್ತು ಬೆಳ್ಳಂದೂರು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ (ಎಸ್‌ಟಿಪಿ) ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಈ ನೀರಿಗೆ ಐಟಿ ಕಂಪನಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಬರುತ್ತಿದೆ ಎಂದರು.

ವಿಪ್ರೋಗೆ ನಿತ್ಯ 3ಲಕ್ಷ ಲೀ.ಸಂಸ್ಕರಿಸಿದ ನೀರು

ಇಂದಿನಿಂದ ವಿಪ್ರೋ ಕಂಪನಿಗೆ ಟ್ಯಾಂಕರ್ ಮೂಲಕ ನಿತ್ಯ 3 ಲಕ್ಷ ಲೀಟರ್ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಲಾಗುವುದು. ಈ ನೀರಿನ ಪೂರೈಕೆಗಾಗಿ ಕೆಲವು ದಿನಗಳ ಹಿಂದೆ 'ವಿಪ್ರೋ' ಜಲಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

ವಿಪ್ರೋ ಸೇರಿದಂತೆ ಎಚ್‌.ಎ.ಎಲ್‌, ಬ್ರೂಕ್‌ಫಿಲ್ಡ್‌ ಮತ್ತು ಅಡೋಬ್‌ ಸಿಸ್ಟಮ್ಸ್‌ ಕಂಪನಿಗಳ ಜೊತೆಗೆ 40 ಐಟಿ ಪಾರ್ಕಗಳು ಈ ಸಂಸ್ಕರಿಸಿದ ಶೂನ್ಯ ಬ್ಯಾಕ್ಟೀರಿಯಾ ನೀರಿಗೆ ಬೇಡಿಕೆ ಇಟ್ಟಿವೆ. ಈ ಕುರಿತು ಕಂಪನಿ ಮುಖ್ಯಸ್ಥರು ಜಲಮಂಡಳಿ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕಂಪನಿಗಳಿಗೂ ನೀರು ಪೂರೈಕೆ ಮಾಡುವ ನಿರೀಕ್ಷೆಗಳು ಇವೆ ಎಂದರು.

ಈ ಸಂದರ್ಭದಲ್ಲಿ ನಿರ್ವಹಣಾ ವಿಭಾಗದ ಮುಖ್ಯ ಅಭಿಯಂತರರಾದ ಕುಮಾರ್ ನಾಯ್ಕ್, ಕಾರ್ಯನಿರ್ವಾಹಕ ಇಂಜಿನೀಯರ್‌ ನಾಗರಾಜ್‌, ರಾಹುಲ್‌ ಪ್ರಿಯದರ್ಶಿ, ಎಇಇ ಎಸ್‌ಇ 3 ಕೃಷ್ಣಕುಮಾರ್‌ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+