ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರಿನ ಸಂಪರ್ಕ ಸಕ್ರಮಗೊಳಿಸಲು ಡಿ.31 ಡೆಡ್‌ಲೈನ್

|
Google Oneindia Kannada News

ಬೆಂಗಳೂರು, ನ.25 : ಬೆಂಗಳೂರು ನಗರದಲ್ಲಿ ಅನಧಿಕೃತವಾಗಿ ನೀರು ಮತ್ತು ಒಳಚರಂಡಿ ಸಂಪರ್ಕ ಪಡೆದವರು ಡಿ.31ರೊಳಗೆ ಸಕ್ರಮಗೊಳಿಸಿಕೊಳ್ಳಬೇಕು ಎಂದು ಬೆಂಗಳೂರು ಜಲಮಂಡಳಿ ಅಂತಿಮ ಗಡುವು ಕೊಟ್ಟಿದೆ. ಸಕ್ರಮಗೊಳಿಸಿಕೊಳ್ಳದಿದ್ದರೆ, ಜೈಲು ಶಿಕ್ಷೆ ಅಥವ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಬೆಂಗಳೂರು ಹೊರವಲಯ ಅಥವಾ ನಗರ ಪ್ರದೇಶಗಳಲ್ಲಿ ಇರುವ ಗ್ರಾಹಕರು ಡಿ.31ರೊಳಗೆ ನಿಗದಿತ ನಮೂನೆ ಅರ್ಜಿ ಸಲ್ಲಿಸಿ ನೀರಿನ ಸಂಪರ್ಕವನ್ನು ಅಧಿಕೃತಗೊಳಿಸಿಕೊಳ್ಳಬೇಕು ಎಂದು ಸೋಮವಾರ ಜಲಮಂಡಳಿ ಪ್ರಕಟಣೆ ಹೊರಡಿಸಿದೆ. ಅನಧಿಕೃತ ನೀರಿನ ಸಂಪರ್ಕ ಪಡೆದವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಕಳೆದವಾರ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಕಟಣೆ ಹೊರಡಿಸಲಾಗಿದೆ.

BWSSB

ನೀರಿನ ಸಂಪರ್ಕಗಳನ್ನು ಸಕ್ರಮ ಮಾಡಿಕೊಳ್ಳಲು ಬೇಕಾದ ಅರ್ಜಿಗಳು ಮತ್ತು ಅಗತ್ಯ ದಾಖಲೆಗಳು, ಶುಲ್ಕ ಮುಂತಾದ ವಿವರಗಳು ಆಯಾ ಉಪವಿಭಾಗ ಕಚೇರಿಗಳಲ್ಲಿ ಹಾಗೂ ಮಂಡಳಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. [ಹೊಸ ನೀರಿನ ಸಂಪರ್ಕ ಪಡೆಯುವುದು ಹೇಗೆ]

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಹೊಸದಾಗಿ ಸೇರ್ಪಡೆಯಾದ ನಗರಸಭೆ ಮತ್ತು ಪುರಸಭೆ ಪ್ರದೇಶಗಳಲ್ಲಿ ನೀರು ಪೂರೈಸುವ ಉದ್ದೇಶದಿಂದ ಕಾವೇರಿ 4ನೇ ಹಂತ, 2ನೇ ಘಟ್ಟದ ಯೋಜನೆ ಜಾರಿ ಮಾಡಲಾಗಿದೆ.

ಈ ಯೋಜನೆಗಳು ಸೇರಿದಂತೆ ನಗರದ ಇತರ ಪ್ರದೇಶಗಳಲ್ಲಿ ಹಲವಾರು ಅನಧಿಕೃತ ಸಂಪರ್ಕಗಳಿವೆ. ಈಗಾಗಲೇ ಹಲವು ಬಾರಿ ಗಡುವು ವಿಧಿಸಿದರೂ ಗ್ರಾಹಕರು ಅಧಿಕೃತ ಸಂಪರ್ಕ ಪಡೆದುಕೊಳ್ಳಲು ಮುಂದಾಗುತ್ತಿಲ್ಲ. ಆದ್ದರಿಂದ ಅಂತಿಮ ಗಡುವು ವಿಧಿಸಲಾಗಿದೆ.

ಜೈಲು ಶಿಕ್ಷೆ, ದಂಡ : ಗ್ರಾಹಕರು ಅಧಿಕೃತವಾಗಿ ನೀರಿನ ಸಂಪರ್ಕ ಪಡೆದಿರುವ ಕುರಿತು ಜ.1ರಿಂದ ಮಂಡಳಿಯ ಅಧಿಕಾರಿಗಳು ಪ್ರತಿ ಮನೆಮನೆಗೆ ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅಧಿಕೃತ ಸಂಪರ್ಕ ಇಲ್ಲದೆ ನೀರು ಬಳಸುತ್ತಿರುವುದು ಪತ್ತೆಯಾದರೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ.

ಜಲಮಂಡಳಿ ಕಾಯ್ದೆ ಸೆಕ್ಷನ್ 108ಎ ಪ್ರಕಾರ ಅನಧಿಕೃತ ನೀರಿನ ಸಂಪರ್ಕಪಡೆದಿದ್ದರೆ, ದಂಡ ಇಲ್ಲವೇ ಜೈಲು ಶಿಕ್ಷೆ ಅಥವಾ ಈ ಎರಡನ್ನೂ ವಿಧಿಸುವ ಅವಕಾಶವಿದೆ. ಗಡುವು ಮುಗಿದ ನಂತರ ಈ ಕಾನೂನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

English summary
Chief Minister Siddaramaiah instructed the Bangalore Water Supply and Sewerage Board (BWSSB) to crack down on unauthorized water connections in Bengaluru City. BWSSB fixed December 31 deadline for legalize water connections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X