SWAN: ಜಾಗತಿಕ ಸಲಹಾ ಸಮಿತಿಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಬೆಂಗಳೂರು ಜಲಮಂಡಳಿ ಅಧ್ಯಕ್ಷರು ಆಯ್ಕೆ
ಲಂಡನ್/ಬೆಂಗಳೂರು: ಸ್ಮಾರ್ಟ್ ವಾಟರ್ ವಲಯದ ಜಾಗತಿಕ ಸಂಸ್ಥೆಯಾದ 'ಸ್ಮಾರ್ಟ್ ವಾಟರ್ ನೆಟ್ವರ್ಕ್ಸ್ ಫೋರಮ್' (SWAN) ತನ್ನ 5ನೇ 'ಹಿರಿಯ ಯುಟಿಲಿಟಿ ಸಲಹಾ ಸಮಿತಿ'ಯನ್ನು ಪ್ರಕಟಿಸಿದೆ. ಈ ಜಾಗತಿಕ ಹಿರಿಯ ಸಲಹಾ ಸಮಿತಿಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಈ ಜಾಗತಿಕ ಗಣ್ಯರ ಸಮಿತಿಗೆ ಆಯ್ಕೆಯಾಗಿರುವುದು ಬೆಂಗಳೂರಿಗೆ ಮತ್ತೊಂದು ಹೆಮ್ಮೆಯ ವಿಷಯವಾಗಿದೆ.
ಈ ಪ್ರತಿಷ್ಠಿತ ಸಮಿತಿಗೆ ಆಯ್ಕೆಯಾದ ಭಾರತದ ಏಕೈಕ ಜಲಮಂಡಳಿ ಮುಖ್ಯಸ್ಥರು ಡಾ. ಮನೋಹರ್ ಆಗಿರುವುದು ವಿಶೇಷವಾಗಿದೆ. ಇವರೊಂದಿಗೆ ಆಸ್ಟ್ರೇಲಿಯಾ, ಕೆನಡಾ, ಪೋರ್ಚುಗಲ್, ಬ್ರೆಜಿಲ್ ಮತ್ತು ಅಮೆರಿಕದ ತಜ್ಞರು ಈ ಸಮಿತಿಯಲ್ಲಿದ್ದಾರೆ. ಆಯ್ಕೆಯಾದ ಸಮಿತಿ ಸದಸ್ಯರು ಜಾಗತಿಕ ಮಟ್ಟದಲ್ಲಿ ನೀರಿನ ಸವಾಲುಗಳು, ಪ್ರಾದೇಶಿಕ ಟ್ರೆಂಡ್ಗಳು ಮತ್ತು ಕಾರ್ಯತಂತ್ರದ ಸಂಶೋಧನಾ ಆದ್ಯತೆಗಳನ್ನು ಗುರುತಿಸಲು ಒಟ್ಟಾಗಿ ಕೆಲಸ ಮಾಡಲಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಅವರು ನೀಡಿದ ವ್ಯಾಪಕ ಕೊಡುಗೆಯ ಆಧಾರದ ಮೇಲೆ ರಾಮ್ ಪ್ರಸಾತ್ ಮನೋಹರ್ ಅವರನ್ನು ಆಯ್ಕೆ ಮಾಡಲಾಗಿದೆ. 'ಸ್ವಾನ್'ನ ಭವಿಷ್ಯದ ಯೋಜನೆಗಳು ಮತ್ತು ಜಾಗತಿಕ ಉಪಕ್ರಮಗಳನ್ನು ಪರಿಶೀಲಿಸಲಿದೆ. ಇತ್ತೀಚೆಗೆ ಬೆಂಗಳೂರು ಜಲಮಂಡಳಿಯಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ದತ್ತಾಂಶ-ಆಧಾರಿತ ಉಪಕ್ರಮಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಕ್ಕಾಗಿ ಡಾ. ಮನೋಹರ್ ಅವರಿಗೆ ಜಾಗತಿಕ ಮಟ್ಟದಲ್ಲಿ ಈ ನೇರ ಮನ್ನಣೆ ದೊರೆತಿದೆ.
ಜಲಮಂಡಳಿ ಅಧ್ಯಕ್ಷರ ಪ್ರಯತ್ನಗಳಿಂದಾಗಿ ಬೆಂಗಳೂರು ಸ್ಮಾರ್ಟ್ ನೀರು ನಿರ್ವಹಣೆಯ ಪ್ರಮುಖ ಸರ್ಕಾರಿ ಜಲ ನಿರ್ವಹಣಾ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಭಾರತ ದೇಶದ ನೀರಿನ ಸವಾಲುಗಳು ಮತ್ತು ತಾಂತ್ರಿಕ ಪರಿಹಾರಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರತಿನಿಧಿಸಲು ಇದು ಸಹಕಾರಿಯಾಗಿದೆ.
ಜಾಗತಿಕ ತಜ್ಞರ ಜತೆ ಕೆಲಸ ಮಾಡಲು ಉತ್ಸುಕ
ಸಮಿತಿಗೆ ಆಯ್ಕೆಯಾದ ಬಳಿಕ ಮಾತನಾಡಿದ ಡಾ. ರಾಮ್ ಪ್ರಸಾತ್ ಮನೋಹರ್ ಅವರು, 'ಬ್ರಾಂಡ್ ಬೆಂಗಳೂರು' (Brand Bengaluru) ಪರಿಕಲ್ಪನೆಗೆ ಪೂರಕವಾಗಿ, ಜಲಮಂಡಳಿಯು ನಗರದ ಮೂಲ ಸೌಕರ್ಯವನ್ನು ಉನ್ನತೀಕರಿಸಲು ವಿಶ್ವದರ್ಜೆಯ, ಎಐ-ಚಾಲಿತ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದೆ. ಬೆಂಗಳೂರಿನ ನಾಗರಿಕರಿಗೆ ಸೇವೆ ಸಲ್ಲಿಸಲು ಪ್ರತಿದಿನ ಈ ತಾಂತ್ರಿಕ ಯೋಜನೆಗಳನ್ನು ಕಾರ್ಯಗತಗೊಳಿಸುವ ಜಲಮಂಡಳಿಯ ತಾಂತ್ರಿಕ ತಂಡ ಮತ್ತು ಸಿಬ್ಬಂದಿಯ ಅವಿರತ ಶ್ರಮಕ್ಕೆ ನಾನು ಈ ಮೈಲಿಗಲ್ಲನ್ನು ಅರ್ಪಿಸುತ್ತೇನೆ.
ಜಾಗತಿಕವಾಗಿ ಸ್ಮಾರ್ಟ್ ವಾಟರ್ ವ್ಯವಸ್ಥೆಯನ್ನು ರೂಪಿಸುವಲ್ಲಿ 'ಸ್ವಾನ್' ಸಂಸ್ಥೆಯ ದೂರದೃಷ್ಟಿ ನನಗೆ ಅತ್ಯಂತ ಇಷ್ಟವಾಗಿದೆ. ನಾವು ಇಂದು ಎದುರಿಸುತ್ತಿರುವ ಸಂಕೀರ್ಣ ನೀರಿನ ಸವಾಲುಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳಲು ಜಾಗತಿಕ ತಜ್ಞರೊಂದಿಗೆ (UAG) ಕಾರ್ಯನಿರ್ವಹಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದರು.
SWAN ಸಲಹಾ ಸಮಿತಿಯ ಸದಸ್ಯರು ವಿವರ
1. ಡಾ. ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷರು - ಬೆಂಗಳೂರು ಜಲಮಂಡಳಿ (ಭಾರತ)
2. ಜೊನೆಟ್ಟಾ ಇ. ಇಂಗ್ಲಿಷ್ (Zonetta E. English) - ಲೂಯಿಸ್ವಿಲ್ಲೆ ಎಂಎಸ್ಡಿ (ಅಮೆರಿಕ)
3. ಡೇವಿಡ್ ಹ್ಯೂಸ್-ಓವನ್ (David Hughes-Owen), ಸಿಇಒ - ಬಸ್ಸೆಲ್ಟನ್ ವಾಟರ್ (ಆಸ್ಟ್ರೇಲಿಯಾ)
4. ಜೋವಾನಾ ಅರಾಜೊ (Joana Araújo) - ಅಗ್ವಾಸ್ ಇ ಎನರ್ಜಿಯಾ ದೋ ಪೋರ್ಟೊ (ಪೋರ್ಚುಗಲ್)
5. ಅರಾಶ್ ಫರಾಜಿಯಾನ್ (Arash Farajian) - ಟೊರೊಂಟೊ ವಾಟರ್ (ಕೆನಡಾ)
6. ಡೆನಿಸ್ ಮಾಯಾ (Denis Maia) - ಸಬೆಸ್ಪ್ (ಬ್ರೆಜಿಲ್)
ಈ ಘೋಷಣೆಯು 2026ರ ಜೂನ್ 2 ರಿಂದ 4 ರವರೆಗೆ ಅಮೆರಿಕದ ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆಯಲಿರುವ 'ಸ್ವಾನ್ 16ನೇ ವಾರ್ಷಿಕ ಸಮ್ಮೇಳನ'ದ ನಿರೀಕ್ಷೆಯನ್ನು ಹೆಚ್ಚಿಸಿದೆ. ಡಾ. ಮನೋಹರ್ ಸೇರಿದಂತೆ UAG ಸದಸ್ಯರು "ನಿಮ್ಮ ಡಿಜಿಟಲ್ ಪ್ರಯಾಣದ ಅಳವಡಿಕೆ" (Adapting your digital journey) ಎಂಬ ವಿಷಯದ ಮೇಲೆ ನಡೆಯಲಿರುವ ಈ ಸಮ್ಮೇಳನದ ರೂಪುರೇಷೆಗಳಿಗೆ ಕಾರ್ಯತಂತ್ರದ ಸಲಹೆಗಳನ್ನು ನೀಡಲಿದ್ದಾರೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications