ರೈಲ್ವೆ ಗುಜರಿ ವಸ್ತುಗಳಿಂದ ನಿರ್ಮಾಣವಾಯ್ತು ಅಬ್ದುಲ್ ಕಲಾಂ ಮೂರ್ತಿ
ಬೆಂಗಳೂರು, ಜುಲೈ 22: ಯಶವಂಪುರ ರೈಲ್ವೆ ನಿಲ್ದಾಣದಲ್ಲಿ ಇದೀಗ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಮೂರ್ತಿ ತಲೆ ಎತ್ತಿದೆ. ಗುಜರಿ ವಸ್ತುಗಳನ್ನು ಬಳಸಿಕೊಂಡು ಈ ಮೂರ್ತಿ ಸಿದ್ಧಪಡಿಸಲಾಗಿದೆ, ಆರನೇ ಪ್ಲಾಟ್‌ಫಾರಂನ ರೈಲ್ವೆ ಹಳಿ ಪಕ್ಕದಲ್ಲಿ ಈ ಮೂರ್ತಿ ನಿಮಿಸಲಾಗಿದೆ.
800 ಕಿ.ಗ್ರಾಂನಷ್ಟು ಗುಜರಿ ವಸ್ತುಗಳನ್ನು ಬಳಸಿ ಇದನ್ನು ನಿರ್ಮಿಸಲಾಗಿದೆ. ಒಟ್ಟು ಇದಕ್ಕೆ 45 ದಿನಗಳನ್ನು ತೆಗೆದುಕೊಳ್ಳಲಾಗಿದೆ. ಯಶವಂತಪುರ ಕೋಚಿಂಗ್ ಡಿಪೋದ ಎಂಜಿನಿಯರ್‌ಗಳು ಇದನ್ನು ಸಿದ್ಧಪಡಿಸಿದ್ದಾರೆ. ಗುಜರಿಗೆ ಹಾಕಿದ್ದ ರೈಲಿನ ವಿವಿಧ ಭಾಗಗಳನ್ನು ಬಳಸಿಕೊಳ್ಳಲಾಗಿದೆ.
ಇದು 7.8 ಅಡಿ ಎತ್ತರವಿದೆ, ಯಶವಂಪುರಕ್ಕೆ ಬರುವ ಪ್ರಯಾಣಿಕರು ಇದನ್ನು ನೋಡಬಹುದಾಗಿದೆ. ನಿತ್ಯ ಯಶವಂಪುರ ಮಾರ್ಗದಲ್ಲಿ 200 ಪ್ಯಾಸೆಂಜರ್ ರೈಲುಗಳು ಓಡಾಡುತ್ತವೆ.

ನಟ್ಸ್, ಬೋಲ್ಟ್ಸ್, ಮೆಟಾಲಿಕ್ ರೋಪ್, ಡ್ಯಾಂಪರ್ ವಸ್ತುಗಳನ್ನು ಮೈಸೂರು ವರ್ಕ್‌ಶಾಪ್‌ನಿಂದ ತರಿಸಿಕೊಳ್ಳಲಾಗಿದೆ. ಮೊದಲು ಪ್ಲಾಸ್ಟರ್ ಪ್ಯಾರಿಸ್ ಬಳಸಿಕೊಂಡು ಮೂರ್ತಿ ಮಾಡಿಕೊಳ್ಳಲಾಗುತ್ತದೆ. ಬಳಿಕ ಅದರ ಮೇಲೆ ನಟ್ಸ್, ಬೋಲ್ಟ್‌ಗಳನ್ನು ಬಳಕೆ ಮಾಡಲಾಗಿದೆ.
''ನಮ್ಮ ಡಿಪೋ 20 ವರ್ಷಗಳಷ್ಟು ಹಳೆಯದು, ಇಲ್ಲಿರುವ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಕಲಾಕೃತಿಯನ್ನು ರಚನೆ ಮಾಡುವ ಕುರಿತು ಆಲೋಚಿಸುತ್ತಿದ್ದೆವು. ಈಗಾಗಲೇ ಕೆಂಪೇಗೌಡ ಹೆರಿಟೇಜ್ ಗಾರ್ಡನ್‌ನಲ್ಲಿ ಸ್ವಾಮಿ ವಿವೇಕಾನಂದರ 3ಡಿ ಮೂರ್ತಿಯನ್ನು ನಿರ್ಮಿಸಲಾಗಿದೆ'' ಎಂದು ಎಂಜಿನಿಯರ್ ಸಿಪಿ ಶ್ರೀಧರ್ ತಿಳಿಸಿದ್ದಾರೆ.












Click it and Unblock the Notifications