Get Updates
Get notified of breaking news, exclusive insights, and must-see stories!

ಆಮೆಗತಿಯಲ್ಲಿ ಬೆಂಗಳೂರಿನ ಗಾಂಧಿ ಬಜಾರ್ ರಸ್ತೆ ಕಾಮಗಾರಿ: ವ್ಯಾಪಾರಸ್ಥರ ಆಕ್ರೋಶ

ಬೆಂಗಳೂರು ಮೇ 3: ದಕ್ಷಿಣ ಬೆಂಗಳೂರಿನ ಬಸವನಗುಡಿಯ ಜೀವನಾಡಿ ಗಾಂಧಿಬಜಾರ್ ಮುಖ್ಯರಸ್ತೆ, ಪುನರಾಭಿವೃದ್ಧಿ ಕಾಮಗಾರಿಯನ್ನು ವಿರೋಧಿಸಿ ನೂರಾರು ವ್ಯಾಪಾರಿಗಳು ಮಂಗಳವಾರ ಶಟರ್‌ಗಳನ್ನು ಇಳಿಸಿ ಪ್ರತಿಭಟನೆ ನಡೆಸಿದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯ ಗಾಂಧಿಬಜಾರ್ ಮುಖ್ಯರಸ್ತೆ ಕಾಮಗಾರಿಯನ್ನು ಶುರುಮಾಡಿದೆ. ಶತಮಾನಗಳಷ್ಟು ಹಳೆಯ ಶಾಪಿಂಗ್ ಸ್ಟ್ರೀಟ್ ಗಾಂಧಿಬಜಾರ್ ಅನ್ನು ಚರ್ಚ್ ಸ್ಟ್ರೀಟ್‌ನಂತಹ ಶಾಪಿಂಗ್ ಹಬ್ ಆಗಿ ಪರಿವರ್ತಿಸಲು ರಸ್ತೆಯ ನವೀಕರಣವನ್ನು ಪ್ರಾರಂಭಿಸಲಾಗಿದೆ. ಆದರೆ ತಿಂಗಳು ಕಳೆದರು ರಸ್ತೆ ಕಾಮಗಾರಿ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಹೀಗಾಗಿ ಹೂ, ಹಣ್ಣು, ಯಂತ್ರೋಪಕರಣಗಳ ಅಂಗಡಿಗಳು, ಚಿಲ್ಲರೆ ವ್ಯಾಪಾರ ನೆಲಕ್ಕಚ್ಚಿ ಹೋಗಿದೆ. ಇದರಿಂದಾಗಿ ಬ್ಯಾಂಕ್, ಹೋಟೆಲ್, ರೆಸಾರ್ಟ್ ಮಾಲೀಕರು ತಮ್ಮ ಸ್ಥಳಗಳನ್ನೇ ಬದಲಿಸುವ ನಿರ್ಧಾರ ಮಾಡಿದ್ದಾರೆ.

Businessmen protest against Gandhi Bazar road work in Bengaluru

ಹಲವು ತಿಂಗಳಾದರೂ ಕಾಮಗಾರಿ ಇನ್ನೂ ಶೇ.50ರಷ್ಟು ಪೂರ್ಣಗೊಂಡಿಲ್ಲ. ಹೀಗಾಗಿ ವ್ಯಾಪಾರಸ್ಥರು ಹಾಗೂ ನಿವಾಸಿಗಳು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ನಾನಾ ಸಮಸ್ಯೆಗಳನ್ನು ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿರುವ 120 ವಸತಿ ಗೃಹಗಳ ಪೈಕಿ 40 ಮಾಲೀಕರು ಅವ್ಯವಸ್ಥೆಯಿಂದ ಸ್ಥಳಾಂತರಗೊಂಡಿದ್ದಾರೆ ಎಂದು ಬಸವನಗುಡಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗುರುಪ್ರಸಾದ್ ತಿಳಿಸಿದರು.

ಮಾತ್ರವಲ್ಲದೆ ಕಾಮಗಾರಿಗಾಗಿ ಅವರು ಬಳಸುತ್ತಿರುವ ರಾಸಾಯನಿಕಗಳು ಮತ್ತು ನಿರ್ಮಾಣ ಸಾಮಗ್ರಿಗಳಿಂದ ಹತ್ತಾರು ಮರಗಳು ಹಾಳಾಗಿವೆ. ಇತರವುಗಳ ಬೇರುಗಳು ದುರ್ಬಲಗೊಂಡಿವೆ. ನಾವು ಕರ್ನಾಟಕ ಮರಗಳ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಕುರಿತು ಬಿಬಿಎಂಪಿ ಅರಣ್ಯ ಕೋಶಕ್ಕೆ ದೂರು ನೀಡಿದ್ದೇವೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

Businessmen protest against Gandhi Bazar road work in Bengaluru

ವ್ಯಾಪಾರಕ್ಕಾಗಿ ಅಂಗಡಿಗಳನ್ನು ಹೊಂದಿರುವ ಅಥವಾ ಬಾಡಿಗೆಗೆ ಪಡೆದಿರುವ 700 ವ್ಯಾಪಾರಿಗಳಲ್ಲಿ ಕೆಲವರು ತಮ್ಮ ಅಸಮ್ಮತಿಯನ್ನು ನೋಂದಾಯಿಸಲು BNS ಪಾರ್ಟಿ ಹಾಲ್‌ನಲ್ಲಿ ಜಮಾಯಿಸಿದರು. ಇಂಡಿಯನ್ ಬ್ಯಾಂಕ್ (ಬಸವನಗುಡಿ ಶಾಖೆ) ವ್ಯವಸ್ಥಾಪಕ ಸುರೇಂದ್ರ ಪ್ರಕಾಶ್ ಮಾತನಾಡಿ, ಕಳೆದ ಆರು ತಿಂಗಳಲ್ಲಿ ಅವರು 100 ಕೋಟಿ ರೂಪಾಯಿ ಮೌಲ್ಯದ ವ್ಯವಹಾರವನ್ನು ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಅವರು ತಮ್ಮ ಬ್ಯಾಂಕ್ ಇರುವ ಸ್ಥಳವನ್ನೇ ಬದಲಾಯಿಸಲು ಯೋಚಿಸಿರುವುದಾಗಿ ಹೇಳಿದ್ದಾರೆ.

"ಹಲವು ಗ್ರಾಹಕರು ಹಿರಿಯ ನಾಗರಿಕರಾಗಿದ್ದು, ತೆರೆದ ಮ್ಯಾನ್‌ಹೋಲ್‌ಗಳಿಂದ ಈ ಅರ್ಧ ಅಗೆದ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಿಲ್ಲ. ಅವರು ತಮ್ಮ ಪಿಂಚಣಿ ಪಡೆಯಲು, ಹಣವನ್ನು ಪಡೆಯಲು ಅಥವಾ ಹಣವನ್ನು ಠೇವಣಿ ಮಾಡಲು ಬರುತ್ತಾರೆ. ಆದರೆ ಅನೇಕರು ಈಗ ತಮ್ಮ ಖಾತೆಯನ್ನು ಇಲ್ಲಿಂದ ಬದಲಾಯಿಸಿದ್ದಾರೆ" ಎಂದು ಸುರೇಂದ್ರ ಪ್ರಕಾಶ್ ಅವರು ಹೇಳಿದರು. ಕೆಲಸ ಪ್ರಾರಂಭವಾದಾಗಿನಿಂದ ವ್ಯಾಪಾರ ಶೇ.80 ನಷ್ಟು ಕುಸಿದಿದೆ ಎಂದು ಗಾರ್ಮೆಂಟ್ಸ್ ವ್ಯಾಪಾರಿಗಳು, ದಿನಸಿ ಅಂಗಡಿ ಮಾಲೀಕರು ಮತ್ತು ರೆಸ್ಟೋರೆಂಟ್‌ ಮಾಲೀಕರು ಹೇಳಿಕೊಂಡಿದ್ದಾರೆ.

Businessmen protest against Gandhi Bazar road work in Bengaluru

ಬಸವನಗುಡಿ ವರ್ತಕರ ಮತ್ತು ನಿವಾಸಿಗಳ ಸಂಘದ ಸಲಹೆಗಾರ ಎಸ್‌ ನಟರಾಜ್‌ ಶರ್ಮಾ ಈ ಕಾಮಗಾರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. "ಅವರು ಏನು ಮಾಡುತ್ತಿದ್ದಾರೆ ಮತ್ತು ಹೇಗೆ ಮಾಡುತ್ತಿದ್ದಾರೆಂದು ನಮಗೆ ತಿಳಿದಿಲ್ಲ. ಕಳೆದ ವಾರಾಂತ್ಯದಲ್ಲಿ ನಾವು ಪೊಲೀಸ್ ಠಾಣೆಗೆ ದೂರು ನೀಡಿದ್ದೆವು ಮತ್ತು ಬಿಬಿಎಂಪಿ ಇಂಜಿನಿಯರ್ ಒಂದು ದಿನದಲ್ಲಿ ಯೋಜನೆಯ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದರು. ಎರಡು ದಿನಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಅವರ ಮಾತಿಲ್ಲ,'' ಎಂದು ತಿಳಿಸಿದ್ದಾರೆ. ಸ್ಥಳೀಯರು ತಮ್ಮ ಸಮಸ್ಯೆಗಳಿಗೆ ತಮ್ಮ ಪ್ರತಿನಿಧಿಗಳ ಪ್ರತಿಕ್ರಿಯೆಯಿಂದ ಅಸಮಾಧಾನಗೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+