Viral Video: ಬೆಂಗಳೂರಲ್ಲಿ ನಾನು ಕೇಳಿದ ಕಡೆ ಬಸ್ ನಿಲ್ಲಿಸಲಿಲ್ಲ ಎಂದ ನಾರ್ಥಿ: ಇಲ್ಲಿದೆ ವೈರಲ್ ವಿಡಿಯೋ!
Viral Video: ಬೆಂಗಳೂರಿನಲ್ಲಿ ವಲಸಿಗರ ಹಾವಳಿ ಮಿತಿ ಮೀರಿದೆ. ಇದೀಗ ಬೆಂಗಳೂರಿನಲ್ಲಿ ಪ್ರಯಾಣ ಮಾಡುವಾಗ ನಾನು ಕೇಳಿದ ಜಾಗದಲ್ಲಿ ಬಿಎಂಟಿಸಿ ಬಸ್ ಚಾಲಕ ಬಸ್ ನಿಲ್ಲಿಸಲಿಲ್ಲ ಹಾಗೂ ದೂರು ನೀಡುವುದಕ್ಕೆ ಪೊಲೀಸರು 2 ಕಿ. ಮೀ ದೂರದ ಪ್ರದೇಶಕ್ಕೆ ಅಥವಾ ನಾನು ಇರುವ ಪ್ರದೇಶದಿಂದ ಎರಡು ಕಿ.ಮೀ ದೂರದಲ್ಲಿರುವ ಪೊಲೀಸ್ ಠಾಣೆಗೆ ಕರೆಯುತ್ತಿದ್ದಾರೆ ಎಂದು ನಾರ್ಥಿಯೊಬ್ಬ ದೂರಿದ್ದು. ಬೆಂಗಳೂರಿನ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾನೆ. ನಾರ್ಥಿ ಮಾಡಿರುವ ಅವಾಂತರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ನಾರ್ಥಿಗಳ ಹಾವಳಿ ಹೆಚ್ಚಾಗುತ್ತಲ್ಲೇ ಇದೆ. ಇದೀಗ ಆದಿತ್ಯ ರಾಜ್ ಅಗರ್ವಾಲ್ ಎನ್ನುವ ವ್ಯಕ್ತಿ ಬಿಎಂಟಿಸಿ ಸಿಬ್ಬಂದಿಯೊಂದಿಗೆ ಅನವಶ್ಯಕವಾಗಿ ಜಗಳಕ್ಕೆ ಇಳಿದಿದ್ದು ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾನೆ. ಕನ್ನಡ ಗೊತ್ತಿಲ್ಲ ಎನ್ನುವ ಕಾರಣವನ್ನು ನೀಡಿ ಬೆಂಗಳೂರಿನ ಬಿಎಂಟಿಸಿ ಬಸ್‌ನಲ್ಲಿ ಸರಿಯಾದ ನಿಲುಗಡೆ ನೀಡಲಿಲ್ಲ. ಮಾನಸಿಕ ಹಾಗೂ ದೈಹಿಕವಾಗಿ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ನನಗೆ ಕನ್ನಡ ಬರಲ್ಲ ಎನ್ನುವುದೇ ಇದಕ್ಕೆ ಕಾರಣ ಎಂದು ನಾರ್ಥಿ ಟ್ವೀಟ್ ಮಾಡಿದ್ದಾನೆ. ಮಹದೇವಪುರ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್ ಸಂಖ್ಯೆ KA57F0323 ಯಲ್ಲಿ ಈ ಘಟನೆ ನಡೆದಿರುವುದಾಗಿ ಆದಿತ್ಯ ಎನ್ನುವವರು ಹೇಳಿಕೊಂಡಿದ್ದಾರೆ.

ಇವ್ನಿಗೆ ಕನ್ನಡದಲ್ಲಿ ತನ್ನ ಸಮಸ್ಯೆ ಹೇಳ್ಕೊಳ್ಳೋಕೆ ಬರ್ತಿಲ್ಲ.
— ಚೇತನ್ ಸೂರ್ಯ ಎಸ್ - Chethan Surya S (@Chethan_Surya_S) September 8, 2025
ಇವನಿಗಾಗಿ ನಮ್ಮ @BMTC_BENGALURU ಚಾಲಕರು ಹಿಂದಿ ಕಲಿಬೇಕಿತ್ತಾ..?
ಇವನ ಕಿತಾಪತಿ ಇದೇ ಮೊದಲೇನಲ್ಲ
ಅವ್ನ ಖಾತೆ ಪರಿಶೀಲಿಸಿ ನಮ್ಮ ಪೊಲೀಸರ ಮೇಲೂ ಟ್ವಿಟ್ ಮಾಡಿದ್ದಾನೆ.
ಬೇಕಂತಲೇ ಸಂಘರ್ಷ ಮಾಡುವ ಮನೋಭಾವನೆ ಇರೋದು ಕಾಣ್ತಿದೆ.@BlrCityPolice
ನಮ್ಮವರೊಂದಿಗೆ ನಾವು.. https://t.co/RcDdIlJyFt
ಈ ವ್ಯಕ್ತಿಯ ಪೋಸ್ಟ್‌ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಉದ್ದೇಶ ಪೂರ್ವಕವಾಗಿ ಬೆಂಗಳೂರು ಹಾಗೂ ಕನ್ನಡದ ಬಗ್ಗೆ ತಪ್ಪಾದ ಅಭಿಪ್ರಾಯವನ್ನು ಮೂಡಿಸುವುದಕ್ಕೆ ಉತ್ತರ ಭಾರತದ ಆದಿತ್ಯ ಎನ್ನುವ ವ್ಯಕ್ತಿ ಪ್ರಯತ್ನಿಸುತ್ತಿದ್ದಾನೆ ಎಂದು ಕನ್ನಡಿಗರು ದೂರಿದ್ದಾರೆ. ಚೇತನ್ ಸೂರ್ಯ ಎನ್ನುವವರು, ಇವನಿಗೆ ಕನ್ನಡದಲ್ಲಿ ತನ್ನ ಸಮಸ್ಯೆ ಹೇಳ್ಕೊಳ್ಳೋಕೆ ಬರ್ತಿಲ್ಲ ಇವನಿಗಾಗಿ ನಮ್ಮ ಬಿಎಂಟಿಸಿ ಚಾಲಕರು ಹಿಂದಿ ಕಲಿಬೇಕಿತ್ತಾ..? ಇವನ ಕಿತಾಪತಿ ಇದೇ ಮೊದಲೇನಲ್ಲ. ಇವನ ಖಾತೆ ಪರಿಶೀಲಿಸಿ ನಮ್ಮ ಪೊಲೀಸರ ಮೇಲೂ ಟ್ವಿಟ್ ಮಾಡಿದ್ದಾನೆ. ಬೇಕಂತಲೇ ಸಂಘರ್ಷ ಮಾಡುವ ಮನೋಭಾವನೆ ಇರೋದು ಕಾಣಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಈ ಬೆಳವಣಿಗೆಗಳು ನಡೆದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಮತ್ತೊಂದು ಟ್ವೀಟ್ ಮಾಡಿರುವ ನಾರ್ಥಿ ವಾಹ್, ಸರಿ! ನಾನು ಔಟರ್ ರಿಂಗ್ ರಸ್ತೆಯಲ್ಲಿ ಕೆಲವು ಸಮಸ್ಯೆಗಳಿವೆ. ಸುತ್ತಮುತ್ತಲಿನ ಸಾರ್ವಜನಿಕ ಅಧಿಕಾರಿಗಳಿಂದ ಸಹಾಯ ಸಿಗುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದೆ ಮತ್ತು ಅದು ವೈರಲ್ ಆಗಿದೆ ಅಥವಾ ದೊಡ್ಡದಾಗಿದೆ. ಈ ಪೋಸ್ಟ್‌ಗಳು ಈ ರೀತಿ ಆಕ್ರೋಶಕ್ಕೆ ಕಾರಣವಾಗಬಾರದು ಎಂದು ನಾನು ಬಯಸುತ್ತೇನೆ. ಅಧಿಕಾರಿಗಳಿಗೆ ವಿಷಯಗಳು ತಿಳಿಯಬೇಕೆಂದು ನಾನು ಬಯಸುತ್ತೇನೆ, ಆದರೆ X ಅದಕ್ಕೆ ಏಕೈಕ ಮಾರ್ಗವೆಂದು ತೋರುತ್ತದೆ ಎಂದು ಬರೆದುಕೊಂಡಿದ್ದಾನೆ. ಅಲ್ಲದೇ ಮೊದಲು ಮಾಡಿರುವ ವಿಡಿಯೋವನ್ನು ಸಹ ತನ್ನ ಎಕ್ಸ್ ಖಾತೆಯಿಂದ ಡಿಲೀಟ್ ಮಾಡಿದ್ದಾನೆ.












Click it and Unblock the Notifications