Budget4bus : ಬಜೆಟ್ ಮಂಡನೆಗೆ ಬಿಎಂಟಿಸಿ ಬಸ್‌ನಲ್ಲಿ ಬನ್ನಿ, ಸಿಎಂ ಮುಂದೆ ಬೇಡಿಕೆ!

#budget4Bus ಎಂಬ ಹ್ಯಾಷ್‌ ಟ್ಯಾಗ್ ಬಳಕೆ ಮಾಡಿಕೊಂಡು ಇಂಟರ್‌ನೆಟ್‌ನಲ್ಲಿ ಅಭಿಯಾನ ಮಾಡಲಾಗುತ್ತಿದೆ. ಬಜೆಟ್ ಮಂಡನೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಎಂಟಿಸಿ ಬಸ್‌ನಲ್ಲಿ ಆಗಮಿಸಬೇಕು ಎಂದು ಬೇಡಿಕೆ ಇಡಲಾಗಿದೆ.

ಬೆಂಗಳೂರು, ಫೆಬ್ರವರಿ 15; ಬೆಂಗಳೂರು ನಗರಾಭಿವೃದ್ಧಿ, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆಬ್ರವರಿ 17ರಂದು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ.

ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ಇರುವ ಹಿನ್ನಲೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಹಲವಾರು ಕೊಡುಗೆಗಳನ್ನು ನಿರೀಕ್ಷೆ ಮಾಡಲಾಗಿದೆ. ಬಹೃತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯೂ ನಡೆಯುವ ಹಿನ್ನಲೆಯಲ್ಲಿ ಉದ್ಯಾನ ನಗರಿಗೆ ಹೆಚ್ಚಿನ ಕೊಡುಗೆ ಸಿಗಬಹುದೇ?.

ಫೆಬ್ರವರಿ 17ರ ಶುಕ್ರವಾರ ಬೆಳಗ್ಗೆ 10.15ಕ್ಕೆ ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್‌ನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಹೆಚ್ಚಿನ ಅನುದಾನ ಕೊಡಿ ಎಂದು ಇಂಟರ್‌ನೆಟ್‌ನಲ್ಲಿ ಅಭಿಯಾನ ನಡೆಯುತ್ತಿದೆ.

Budget4bus Netizens Urges CM Basavaraj Bommai to allocate more funds for BMTC in Budget 2023

#budget4Bus ಎಂಬ ಹ್ಯಾಷ್‌ ಟ್ಯಾಗ್ ಬಳಕೆ ಮಾಡಿಕೊಂಡು ನಡೆಸುತ್ತಿರುವ ಅಭಿಯಾನದಲ್ಲಿ ಬಜೆಟ್ ಮಂಡನೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಎಂಟಿಸಿ ಬಸ್‌ನಲ್ಲಿ ವಿಧಾನಸೌಧಕ್ಕೆ ಆಗಮಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಹಲವಾರು ಟ್ವೀಟ್‌ಗಳನ್ನು ಬಿಎಂಟಿಸಿ ಬಸ್ ಪರವಾಗಿ ಮಾಡಲಾಗುತ್ತಿದೆ.

ಬಿಎಂಟಿಸಿ ಬಸ್ ಬೆಂಗಳೂರು ಜನರ ಜೀವನಾಡಿ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರತಿದಿನ ಲಕ್ಷಾಂತರ ಜನರು ಬಸ್‌ನಲ್ಲಿ ಸಂಚಾರ ನಡೆಸುತ್ತಾರೆ. ಒಂದು ದಿನ ಬಸ್ ಇಲ್ಲವಾದರೆ ಜನ ಜೀವನ ಅಸ್ತವ್ಯಸ್ತವಾಗಲಿದೆ. ಆದರೆ ಬಿಎಂಟಿಸಿ ಬಸ್‌ಗಳ ಸಮಸ್ಯೆಗಳು ನೂರಾರು ಇವೆ, ಇದರ ನಡುವೆಯೇ ಜನರು ಬಸ್ ಬಳಕೆ ಮಾಡುತ್ತಿದ್ದಾರೆ.

ಹಲವಾರು ಟ್ವೀಟ್‌ಗಳು; @YathishKumarS5 ಟ್ವೀಟ್ ಮಾಡಿ, ಮುಖ್ಯಮಂತ್ರಿಗಳೆ, ಲಕ್ಷಾಂತರ ಜನರ ಜೋತೆ ಸ್ಪಂದಿಸುವುದಾದರು ಹೇಗೆ?. ಇಲ್ಲೊಂದು ಸುಲಭ ಉಪಯವಿದೆ bmtc ಬಸ್ನಲ್ಲಿ ಬಜೆಟ್ ಮಂಡಿಸಲು ವಿಧಾನಸಭೆ ಹೋಗಿ ಪ್ರಯಾಣಿಕರ ಮನ ಒಲಿಸಲು ಬಜೆಟ್ ನಲ್ಲಿ ಬಸ್‌ಗಳಿಗೆ ಹೆಚ್ಚು ಹಣ ನೀಡಿ ಎಂದು ಹೇಳಿದ್ದಾರೆ.

Budget4bus Netizens Urges CM Basavaraj Bommai to allocate more funds for BMTC in Budget 2023

@FriendsofBMTC ಖಾತೆಯಿಂದ ಟ್ವೀಟ್ ಮಾಡಿ, Asking CM to allocate more funds for @BMTC_BENGALURU and how? Here we are requesting him to take the bus on the budget day to go to Vidhana Soudha ಎಂದು ತಿಳಿಸಿದ್ದಾರೆ.

@FriendsofBMTC ಮೂಲಕ ಮತ್ತೊಂದು ಟ್ವೀಟ್ ಮಾಡಿ, ಮುಖ್ಯಮಂತ್ರಿಗಳೇ ಬಿಎಂಟಿಸಿಗೆ ಹೆಚ್ಚು ಅನುದಾನ ನೀಡಿ, 30 ಲಕ್ಷಕ್ಕೂ ಅಧಿಕ ಪ್ರಯಾಣಿಕರನ್ನು ನೀವು ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಹೇಳಲಾಗಿದೆ.

@kcherian480 ಟ್ವೀಟ್ ಮಾಡಿ ಮುಖ್ಯಮಂತ್ರಿಗಳೇ ಬಸ್‌ಗಳು ಯಾವಾಗಲೂ ರಾಜ್ಯದ ಜನರ ಜೀವನಾಡಿ. ಫ್ಲೈ ಓವರ್‌, ಮರಗಳನ್ನು ಕಡಿಯುವುದು, ರಸ್ತೆ ಅಗಲೀಕರಣದಿಂದ ಬೆಂಗಳೂರು ನಗರದ ಸಂಚಾರಿ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಭವಿಷ್ಯವನ್ನು ಆಲೋಚಿಸಿ, ಬಸ್‌ಗಳಿಗೆ ಆದ್ಯತೆ ನೀಡಿ ಎಂದು ಸಲಹೆ ನೀಡಲಾಗಿದೆ.

Shivanand Khyadad ಟ್ವೀಟ್ ಮಾಡಿ, ಬಿಎಂಟಿಸಿ ಅಂದರೆ ಇವರಿಗೆಲ್ಲ ಅಸಡ್ಡೆ, ಮತ್ತೆ ಮೇಲಿನ ಮಾತಿಗೆ ಸುಮ್ನೇ ಸಾರ್ವಜನಿಕ ಸಾರಿಗೆ ಬಳಸಿ ಟ್ರಾಫಿಕ್ ಕಡಿಮೆ ಮಾಡಿ, ಪರಿಸರ ಉಳಿಸಿ ಏನೇನೊ ದೊಡ್ಡದಾಗಿ ಭಾಷಣ ಮಾಡ್ತಾರೆ, ಆದರೆ ಬಿಎಂಟಿಸಿಗೆ ಮತ್ತೆ ಅಲ್ಲಿ ಕೆಲಸ ಮಾಡ್ತಾ ಇರುವ ನೌಕರರಿಗೆ ಒಂದೇ ಒಂದು ಬಿಡಿಗಾಸು ಬಜೆಟ್ ನಲ್ಲಿ ಮೀಸಲು ಇಡಲ್ಲ ಆದು ಹೇಗೆ ಬಿಎಂಟಿಸಿ ಉದ್ದರ ಆಗಬೇಕು ಹೇಳಿ ಎಂದು ಕೇಳಿದ್ದಾರೆ.

@srinualavilli ಟ್ವೀಟ್ ಮಾಡಿ, ಕಾರು ಇದ್ದವರಿಗೆ ಇನ್ನಷ್ಟು ರೋಡ್, ಮೆಟ್ರೊ ರೈಲಿಗೆ ಮತ್ತಷ್ಟು ಆರ್ಥಿಕ ನೆರವು, ಆದರೆ ಬೆಂಗಳೂರಿನ ಜೀವನಾಡಿ BMTC ಬಸ್ಗಳಿಗೆ ಯಾಕೆ ಇಷ್ಟು ನಿರ್ಲಕ್ಷ್ಯೆ? ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+