ಲೋಕಲ್ ವಾರ್: ಮೈತ್ರಿ ಸರ್ಕಾರದ ಹಣಬಲಕ್ಕೆ ಗೆಲುವು ಎಂದ ಯಡಿಯೂರಪ್ಪ

Recommended Video

      ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಬಿ ಎಸ್ ಯಡಿಯೂರಪ್ಪ ಹೇಳಿದ್ದು ಹೀಗೆ

      ಬೆಂಗಳೂರು, ಸೆಪ್ಟೆಂಬರ್ 3: ಬಿಜೆಪಿ ನಿರೀಕ್ಷಿಸಿದ ಸ್ಥಾನಗಳನ್ನು ಪಡೆಯಲು ಸಾಧ್ಯವಾಗಿಲ್ಲ, ಆದರೂ ಉತ್ತಮ ಸಾಧನೆ ಮಾಡಿದೆ, ಜೆಡಿಎಸ್ , ಕಾಂಗ್ರೆಸ್‌ ಮೈತ್ರಿಯು ಈ ಚುನಾವಣೆಗೆ ಸ್ವಲ್ಪ ಪ್ರಮಾಣದ ಪರಿಣಾಮವನ್ನು ಬೀರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

      ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್, ಕಾಂಗ್ರೆಸ್‌ನ ಮೈತ್ರಿ ಹಾಗೂ ಹಣದ ಬಲದಿಂದಾಗಿ ನಮಗೆ ನಿರೀಕ್ಷಿಸಿದ ಫಲಿತಾಂಶ ಬಂದಿಲ್ಲಮ ಆದರೆ ಕೆಲವೆಡೆ ಬಹುಮತವನ್ನು ಗಳಿಸಿದ್ದೇವೆ, ಶಿವಮೊಗ್ಗ, ತುಮಕೂರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಇನ್ನುಳಿದಂತೆ 15ಪುರಸಭೆ, 8 ಪಟ್ಟಣ ಪಂಚಾಯ್ತಿಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತವನ್ನು ಪಡೆದಿದೆ ಎಂದರು.

      ಲೋಕಸಭೆ ಚುನಾವಣೆಯ ಮೇಲೆ ಈ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪರಿಣಾಮ ಬೀರಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಹಿಡಿತವಿರುವ ಪ್ರದೇಶದಲ್ಲಿ ಉತ್ತಮ ಸ್ಥಾನಗಳನ್ನೇ ಪಡೆದುಕೊಂಡಿದ್ದೇವೆ, ಮೈಸೂರು, ಮಂಡ್ಯ, ರಾಮನಗರದಲ್ಲಿ ನಮಗೆ ಹಿನ್ನೆಡೆಯಾಗಿದೆ. ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಪಡೆಯುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

      BSY opines BJP has done enough in ULB poll

      ಮಾಜಿ ಉಪ ಮುಖ್ಯಮಂತ್ರಿ ಆರ್​. ಆಶೋಕ್​ ಮಾತನಾಡಿ, ಕಾಂಗ್ರೆಸ್​ ಮೊದಲಿಗಿಂತ ಕಡಿಮೆ ಸ್ಥಾನ ಗೆದ್ದಿದೆ. ಹಲವೆಡೆ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನ ಈ ಬಾರಿ ನಮಗೆ ಸಿಕ್ಕಿದೆ. ಕಾಂಗ್ರೆಸ್​-ಜೆಡಿಎಸ್​ ಸರ್ಕಾರದ ಕೌಂಟ್​ಡೌನ್​ ಶುರುವಾಗಿದೆ ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+