ಬಿಜೆಪಿ ಟಿಕೆಟ್ ಅಂತಿಮ ಚರ್ಚೆ, ನಾಳೆ ಯಡಿಯೂರಪ್ಪ ನವದೆಹಲಿಗೆ

Recommended Video

      ಬಿಜೆಪಿ ಟಿಕೆಟ್ ಅಂತಿಮ ಚರ್ಚೆ, ನಾಳೆ ಯಡಿಯೂರಪ್ಪ ನವದೆಹಲಿಗೆ..!

      ಬೆಂಗಳೂರು, ಮಾರ್ಚ್ 7: ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಟಿಕೆಟ್ ಹಂಚಿಕೆ ಕುರಿತು ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಾಳೆ(ಫೆ.8)ರಂದು ನವದೆಹಲಿಗೆ ತೆರಳಲಿದ್ದಾರೆ.

      ಟಿಕೆಟ್ ಹಂಚಿಕೆ ಕುರಿತು ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರ ಜೊತೆ ಸಭೆ ನಡೆಸಲಿದ್ದಾರೆ.

      ಈಗಾಗಲೇ ಎಲ್ಲಾ ಘಟಕದಿಂದ ಲೋಕಸಭೆ ಪ್ರಭಾರಿಗಳಿಂದ ಸಂಭಾವ್ಯರ ಹಾಗೂ ಆಕಾಂಕ್ಷಿಗಳ ಪಟ್ಟಿಯನ್ನು ರಾಷ್ಟ್ರೀಯ ವರಿಷ್ಠರು ತರಿಸಿಕೊಂಡಿದ್ದಾರೆ. 7 ಖಾಸಗಿ ಏಜೆನ್ಸಿಗಳಿಂದ ತಂಡ ಸಿದ್ಧಪಡಿಸಿರುವ ಸಮೀಕ್ಷೆಗಳು ಸಿದ್ಧವಾಗಿವೆ. ಕೇಂದ್ರ ಗುಪ್ತಚರ ಇಲಾಖೆಯ ವರದಿಯೂ ಇರಲಿದೆ. ಇದೆಲ್ಲದರ ಜೊತೆಗೆ ನಮೋ ಅಪ್ಲಿಕೇಷನ್ ಬಿಡುಗಡೆ ಕಾರ್ಯಕ್ರಮವೂ ಕೂಡ ನಡೆಯಲಿದೆ.

      BSY meeting with party national leaders over Parliament ticket

      ಇದೀಗ ರಾಜ್ಯ ಘಟಕದಿಂದ ಸಿದ್ಧಪಡಿಸಲಾಗಿರುವ ಪಟ್ಟಿಯನ್ನು ಯಡಿಯೂರಪ್ಪ ಕೊಂಡೊಯ್ಯಲಿದ್ದು, ಎಲ್ಲ ವರದಿ ಇಟ್ಟುಕೊಂಡು ಸಾಮಾಜಿಕ ಸಂರಚನೆ ಹಾಗೂ ಗೆಲ್ಲುವ ಮಾನದಂಡ ಇನ್ನಿತರೆ ವಿಚಾರಗಳಲ್ಲಿ ವಿಚಾರ ಮಂಥನ ನಡೆಯಲಿದೆ ಈಗಿರುವ ಸಂಸದರನ್ನು ಬದಲಾಯಿಸುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತಿಲ್ಲ ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+