ನಿಮಗೆ ತಾಕತ್ತಿದ್ರೆ ಚುನಾವಣೆ ಎದುರಿಸಿ: ಸಿದ್ದರಾಮಯ್ಯಗೆ ಬಿಎಸ್‌ವೈ ಸವಾಲು
ಬೆಂಗಳೂರು, ನವೆಂಬರ್ 4:ನಿಮಗೆ ತಾಕತ್ತಿದ್ದರೆ ಚುನಾವಣೆ ಎದುರಿಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.
ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿರುವುದಕ್ಕೂ ನಮಗೂ ಸಂಬಂಧ ಇಲ್ಲ, ರಾಜೀನಾಮೆ ನೀಡಿದ 17 ಜನ ಶಾಸಕರ ಜೊತೆ ಮಾತನಾಡಿ, ನೀವೆ ವಾಪಸ್ಸು ಕರೆದುಕೊಂಡು ಬನ್ನಿ ಎಂದು ಸಿದ್ದರಾಮಯ್ಯಗೆ ಯಡಿಯೂರಪ್ಪ ಸವಾಲು ಮುಂದಿರಿಸಿದ್ದಾರೆ.

ಶಾಸಕರ ಅನರ್ಹತೆಗೆ ಯಾರು ಕಾರಣ
ರಮೇಶ್ ಕುಮಾರ್, ಸಿದ್ದರಾಮಯ್ಯ ಜೊತೆ ಕೈ ಜೋಡಿಸಿ ಅವರನ್ನು ಅನರ್ಹರನ್ನು ಮಾಡಿರುವುದಕ್ಕೆ ಯಾರು ಕಾರಣ, ನೀವು ಮಾಡಿದ ಕುತಂತ್ರ ತಾನೆ, ಸುಪ್ರೀಂಕೋರ್ಟ್‌ನಲ್ಲಿ ಗೊಂದಲವಿದೆ. ಜನರಲ್ಲಿ ಗೊಂದಲ ಉಂಟು ಮಾಡುವುದು ಸರಿಯಲ್ಲ. ಅತಿವೃಷ್ಟಿ ಬಗ್ಗೆ ಅಂಕಿಅಂಶ ಕೂಡ ಸರಿಯಲ್ಲ ಅಂತೀರಾ, ನೀವೇ ಮುಖ್ಯ ಕಾರ್ಯದರ್ಶಿಗಳನ್ನು ಕೇಳಿ, ಒಬ್ಬ ಮಾಜಿ ಸಿಎಂ , ವಿಪಕ್ಷ ನಾಯಕನಾಗಿ ಜವಾಬ್ದಾರಿಯುತವಾಗಿ ಮಾತನಾಡಿ ಎಂದು ಖಾರವಾಗಿ ನುಡಿದಿದ್ದಾರೆ.

ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಶತಸಿದ್ಧ
ಮುಂಬರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಶತಸಿದ್ಧ , ಮತ್ತೆ ಸೋಲುವುದು ಖಚಿತ, ಮತ್ತೆ ನೀವು ವಿರೋಧಪಕ್ಷದಲ್ಲೇ ಕೂರೋದು ಸತ್ಯ.
ಆಡಿಯೋದಿಂದ ಡ್ಯಾಮೇಜ್ ಏನೂ ಆಗಲ್ಲ, ಈಗಾಗಲೇ ಕಾಂಗ್ರೆಸ್ ನೆಲ ಕಚ್ಚಿದೆ, ಸಿದ್ದರಾಮಯ್ಯ ಕಾಂಗ್ರೆಸ್ ಇರುವವರೆಗೂ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ.

ಶಾಸಕರ ರಾಜೀನಾಮೆಗೆ ಸಿದ್ದರಾಮಯ್ಯ ಕಾರಣ
ಶಾಸಕರ ರಾಜೀನಾಮೆಗೆ ಸಿದ್ದರಾಮಯ್ಯ ಅವರೇ ಕಾರಣ, 17 ಜನ ರಾಜೀನಾಮ ಕೊಟ್ಟು ಈಗ ಅನರ್ಹತೆಯನ್ನು ಎದುರಿಸುತ್ತಿರುವುದಕ್ಕೆ ನೀವೇ ಹೊಣೆ ಎಂದು ಸಿದ್ದರಾಮಯ್ಯ ಕಡೆ ಬೊಟ್ಟು ಮಾಡಿ ತೋರಿಸಿದ್ದಾರೆ. ನಾವು ಇಷ್ಟು ದಿನ ನಿಮ್ಮ ಮಾತನ್ನು ಸಂಯಮದಿಂದ ಕೇಳಿದ್ದೇವೆ.

ನಮ್ಮ ಬಳಿಯೂ ದಾಖಲೆ ಇದೆ
ನಮ್ ತಂಟೆಗೆ ಬರೋದಿಕ್ಕೆ ಹೋಗಬೇಡಿ,ಸಿದ್ದರಾಮಯ್ಯಗೆ ಅಶೋಕ್ ವಾರ್ನಿಂಗ್ ನೀಡಿದ್ದಾರೆ.ಕಾಂಗ್ರೆಸ್ ನವರು ಕೋರ್ಟ್ ಗೆ ದಾಖಲೆ ಕೊಡಲಿ, ನಮ್ಮ ಬಳಿಯೂ ದಾಖಲೆ ಇದೆ ಎಂದು ಹೇಳಿದ್ದಾರೆ.












Click it and Unblock the Notifications