ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಲಾರಿ ಮಾಲೀಕರ ಮುಷ್ಕರ- ಬೆಂಗಳೂರಿನಲ್ಲಿ ಸಿಗುವುದಿಲ್ಲ ನಂದಿನಿ ಹಾಲು, ಮೊಸರು- ಎಷ್ಟು ದಿನ ವ್ಯತ್ಯಯ? ತಿಳಿಯಿರಿ

|
Google Oneindia Kannada News

ಬೆಂಗಳೂರು, ಜನವರಿ 21: ದೇಶದಾದ್ಯಂತ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಲಾರಿ ಮಾಲೀಕರು ಮುಷ್ಕರ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಾದ್ಯಂತ ನಂದಿನಿ ಹಾಲು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

ಇಂಧನ ತೈಲಗಳಾದ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲಗಳ ಬೆಲೆ ಇಳಿಕೆ, ಜಿಎಸ್‌ಟಿ ಕಡಿತಗೊಳಿಸುವಂತೆ ಆಗ್ರಹಿಸಿ ಲಾರಿ ಮಾಲೀಕರು ಮುಷ್ಕರ ಹಮ್ಮಿಕೊಂಡಿದ್ದಾರೆ.

ಲಾರಿ ಮಾಲೀಕರ ಸಂಘ ಲಾರಿ ಮುಷ್ಕರಕ್ಕೆ ಕರೆ ನೀಡಿದ್ದು, ಲಾರಿಗಳು, ಸರಕು ಸಾಗಣೆ ವಾಹನಗಳು ಸಂಚರಿಸುತ್ತಿಲ್ಲ. ಮುಷ್ಕರಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನಂದಿನ ಹಾಲು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಗ್ರಾಹಕರು ಪರದಾಡುವಂತಾಗಿದೆ.

Breaking: Lorry owners strike - Nandini milk, curd not available in Bengaluru - How long will it last? know

'ಎರಡು ದಿನಗಳ ಕಾಲ ಮುಷ್ಕರ ಮುಂದುವರಿಯಲಿದೆ. ಈ ಕಾರಣ ನಂದಿನಿ ಹಾಲಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಗ್ರಾಹಕರು ಸಹಕರಿಸಬೇಕು. ಈ ವ್ಯತ್ಯಯವು ಬೆಂಗಳೂರಿನಲ್ಲಿ ಹೆಚ್ಚಾಗಿದೆ' ಎಂದು ನಂದಿನಿ ಹಾಲು ವ್ಯಾಪಾರಿಯೊಬ್ಬರು ತಿಳಿಸಿದರು.

ಲಾರಿ ಮಾಲೀಕರ ಹಲವು ಬೇಡಿಕೆಗಳು

-ತೈಲ ಬೆಲೆ ಏರಿಕೆಗೆ ವಿರೋಧ
-ಜಿಎಸ್‌ಟಿ ದರ ಏರಿಕೆ ವಿರೋಧ
-ಸರಕು ಸಾಗಾಣಿಕೆ ವಾಹನಗಳಲ್ಲಿ ಎಸಿ ಅಳವಡಿಕೆಗೆ ವಿರೋಧ
-ಪ್ರವಾಸಿ ವಾಹನಗಳಿಗೆ ನ್ಯಾಷನಲ್ ಪರವಾನಿಗೆ ನೀಡುವುದಕ್ಕೆ ವಿರೋಧ
-ಇನ್ಶೂರೆನ್ಸ್ ಕಂಪನಿಗಳ ಥರ್ಡ್​ ಪಾರ್ಟಿ ಪ್ರೀಮಿಯಂ ಏರಿಕೆಗೆ ವಿರೋಧ
-15 ವರ್ಷದ ಹಳೆಯ ವಾಹನಗಳ ತಡೆಗೆ ಬ್ರೇಕ್​ ನೀಡಬೇಕು
-ಸಮರ್ಪಕ ಮರಳು ನೀತಿ ಜಾರಿಯಾಗಬೇಕು
-ಸಾರಿಗೆ ಶುಲ್ಕ ಹೆಚ್ಚಳಕ್ಕೆ ವಿರೋಧ

ಬೆಂಗಳೂರು ನಗರದಲ್ಲಿ ನಂದಿನಿ ಹಾಲು ಸರಬರಾಜು ಎಷ್ಟು?

ಐದು ದಶಕಗಳ ಹಿಂದೆ ಯೂನಿಸೆಫ್ ನೆರವಿನೊಂದಿಗೆ ಪ್ರಾರಂಭಗೊಂಡು ಪ್ರತಿದಿನ 50,000ಲೀಟರ್ ಹಾಲು ಸಂಸ್ಕರಣೆ ಮಾಡುತ್ತಿದ್ದ ಡೇರಿಯು ಇಂದು ಅತ್ಯಾಧುನಿಕ ಘಟಕವಾಗಿದ್ದು ಪ್ರತಿದಿನ 8.00 ಲಕ್ಷ ಲೀಟರ್ ಹಾಲು ಸಂಸ್ಕರಣೆಯಿಂದ ಈಗ ಇದರ ಸಾಮರ್ಥ್ಯವನ್ನು 10.00 ಲಕ್ಷ ಲೀಟರಿಗೆ ವಿಸ್ತರಿಸಲಾಗಿದೆ. ಈ ಹಾಲು ಒಕ್ಕೂಟವು 12 ತಾಲ್ಲೂಕುಗಳ ವ್ಯಾಪ್ತಿಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿರುವ 2,202 ಸಹಕಾರ ಸಂಘಗಳನ್ನು ಒಳಗೊಂಡಿದೆ.

Breaking: Lorry owners strike - Nandini milk, curd not available in Bengaluru - How long will it last? know

ನಗರದ ಹೊರವಲಯದಲ್ಲಿರುವ ಹೊಸಕೋಟೆಯಲ್ಲಿನ 1.5 ಲಕ್ಷ ಲೀಟರ್ ಸಾಮರ್ಥ್ಯದ ಶೀತಲಕೇಂದ್ರವನ್ನು ಪ್ರತಿದಿನ 2.00 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯದ ನೂತನ ಡೇರಿಯಾಗಿ ಪರಿವರ್ತಿಸಲಾಗಿದ್ದು, ಕಾರ್ಯಾಚರಣೆಯಲ್ಲಿದೆ.

ಆನೇಕಲ್ಲಿನಲ್ಲಿ 100ಸಾವಿರ ​ಲೀಟರ್, ಬೈರಾಪಟ್ನದಲ್ಲಿ 100ಸಾವಿರ ಲೀಟರ್, ದೊಡ್ಡಬಳ್ಳಾಪುರದಲ್ಲಿ 160ಸಾವಿರ ಲೀಟರ್, ವಿಜಯಪುರದಲ್ಲಿ 100ಸಾವಿರ ಲೀಟರ್, ಸೋಲೂರಿನಲ್ಲಿ 160ಸಾವಿರ ಲೀಟರ್, ಕನಕಪುರದಲ್ಲಿ 600ಸಾವಿರ ಲೀಟರ್ ಸಾಮರ್ಥ್ಯಗಳ ಶೀತಲಕೇಂದ್ರಗಳನ್ನು ಹೊಂದಿದ್ದು, ಒಟ್ಟಾರೆ ದಿನಂಪ್ರತಿ 12,20,000 ಲೀಟರ್ ಹಾಲನ್ನು ಶೀತಲೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸಕೋಟೆಯಲ್ಲಿ 200ಸಾವಿರ ಲೀಟರ್ ಸಂಸ್ಕರಣಾ ಸಾಮರ್ಥ್ಯ ಹೊಂದಿದೆ. 212 ಬಲ್ಕ್ ಮಿಲ್ಕ್ ಕೂಲರ್, 1993 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಮತ್ತು 23 ಸಮುದಾಯ ಹಾಲು ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ.

ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 17.02 ಲಕ್ಷ ಕೇಜಿ ಹಾಲನ್ನು ಶೇಖರಣೆ ಮಾಡುತ್ತಲಿದ್ದು, ಸರಾಸರಿ 8.01 ಲಕ್ಷ ಲೀಟರ್ ಹಾಲು ಮತ್ತು 1.06 ಲಕ್ಷ ಕೇಜಿ ಮೊಸರನ್ನು ಮಾರಾಟ ಮಾಡುತ್ತಿದೆ.

English summary
The lorry owners have gone on strike demanding various demands across the country. In this background, there has been a discrepancy in the supply of Nandini milk across Bangalore city,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X