ಬೆಂಗಳೂರಿನ ವರ್ತೂರು ಬಳಿ ಭಾರಿ ಬೆಂಕಿ ಅವಘಡ
ಬೆಂಗಳೂರು, ಫೆಬ್ರವರಿ 18: ನಗರದ ವರ್ತೂರು ಬಳಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಆದರೆ ಯಾವುದೇ ಸಾವು-ನೋವು ವರದಿ ಆಗಿಲ್ಲ.
ಪ್ರೆಸ್ಟಿಜ್ ಲೇಕ್ ವ್ಯೂ ಅಪಾರ್ಟ್‌ಮೆಂಟ್ ಹಿಂಭಾಗ ಬೆಂಕಿ ಹೊತ್ತಿಕೊಂಡಿದ್ದು ಬೆಂಕಿ ತೀವ್ರವಾಗಿ ಹಬ್ಬಿದೆ. ಅಗ್ನಿಶಾಮಕ ದಳಗಳು ಸ್ಥಳದಲ್ಲಿದ್ದು, ಬೆಂಕಿ ಹತ್ತಿರುವ ಜಾಗಕ್ಕೆ ಸಮೀಪವಿರುವ ಅಪಾರ್ಟ್‌ಮೆಂಟ್‌ನಲ್ಲಿನ ಜನರನ್ನು ಹೊರಕ್ಕೆ ಕಳುಹಿಸಲಾಗಿದೆ.
ಪ್ರೆಸ್ಟಿಜ್ ಲೇಕ್ ವ್ಯೂ ನ ಹಿಂಭಾಗ ಮರಗಳು, ಗಿಡಗಳಿಂದ ಮತ್ತು ಕಸ ತುಂಬಿದ ಪ್ರದೇಶವಿದ್ದು ಅದಕ್ಕೆ ಬೆಂಕಿ ತಗುಲಿದೆ. ಬಿಸಿಲಿನ ಕಾರಣ ಬೆಂಕಿ ವೇಗವಾಗಿ ಹಬ್ಬಿದೆ. ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ತಹಬದಿಗೆ ತರುವ ಕಾರ್ಯ ಮಾಡಿದ್ದಾರೆ.

ಸ್ಥಳೀಯರು, ಪ್ರೆಸ್ಟಿಜ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ಒಟ್ಟು ಸೇರಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಯಾರೋ ಕಸಕ್ಕೆ ಬೆಂಕಿ ಹಾಕಿದ ಪರಿಣಾಮ ಅದು ದೊಡ್ಡದಾಗಿ ವ್ಯಾಪಿಸಿದೆ ಎನ್ನಲಾಗಿದೆ.












Click it and Unblock the Notifications