ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೌನ್ಸ್ ಬೈಕ್‌ಗೆ ಬೆಂಕಿ ಇಟ್ಟು ಪರಾರಿಯಾದ ಫಟಿಂಗ..!

|
Google Oneindia Kannada News

ಬೆಂಗಳೂರು, ಜನವರಿ 11: ಮಹಾನಗರ ಬೆಂಗಳೂರು ಬೆಳೆದಂತೆ ಇಲ್ಲಿನ ಜನರ ಅವಶ್ಯಕತೆಗಳು, ಹೊಸ ಹೊಸ ಸೇವೆಗಳೂ ಸಹ ಬೆಳೆಯುತ್ತಿವೆ. ಹಾಗೆಯೇ ಹೊಸ ಹೊಸ ಅಪರಾಧಗಳೂ ತಲೆ ಎತ್ತುತ್ತಿವೆ.

ಸ್ವಂತ ಬೈಕ್‌ ಇಲ್ಲದವರಿಗೆ ಅಥವಾ ತಮ್ಮ ತುರ್ತು ಕೆಲಸಗಳಿಗೆ ಬೈಕ್ ಅವಶ್ಯಕತೆ ಇದ್ದವರಿಗೆ ನಗರದಲ್ಲಿ ಸಂಚರಿಸಲು ಅನುಕೂಲ ಆಗಲಿ ಎಂದು ಬಂದಿರುವ ಬೌನ್ಸ್ ಬೈಕ್ ಸೇವೆ ಈಗ ಬೆಂಗಳೂರು ನಗರದಲ್ಲಿ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಇದರ ಬಳಕೆದಾರರು ಹೆಚ್ಚಾಗುತ್ತಿದ್ದಾರೆ. ಆದರೆ, ಬೌನ್ಸ್ ಮೇಲೆ ಕುತಂತ್ರಿಗಳ ಕಣ್ಣು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವ್ಯಕ್ತಿಯೊಬ್ಬ ಬೌನ್ಸ್ ಸ್ಕೂಟರ್ ಒಂದನ್ನು ಬಾಡಿಗೆಗೆ ಪಡೆದು, ಆ ಗಾಡಿಗೆ ಬೆಂಕಿ ಇಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ರ್‍ಯಾಪಿಡೋ ಬಳಸುವ ಯುವತಿಯರೇ ಎಚ್ಚರ: ಬೆಂಗಳೂರಲ್ಲಿ ಹೀಗೊಂದು ಘಟನೆರ್‍ಯಾಪಿಡೋ ಬಳಸುವ ಯುವತಿಯರೇ ಎಚ್ಚರ: ಬೆಂಗಳೂರಲ್ಲಿ ಹೀಗೊಂದು ಘಟನೆ

ಬೌನ್ಸ್‌ಗೆ ಬೆಂಕಿ!

ಬೌನ್ಸ್‌ಗೆ ಬೆಂಕಿ!

ಕಳೆದ ಮಂಗಳವಾರ ಬೆಂಗಳೂರಿನ ಯಲಹಂಕ ಬಳಿಯ ಮಿಟ್ಟಿಗಾನಹಳ್ಳಿಯಿಂದ ವಿಜಯ್ ಎನ್ನುವ ವ್ಯಕ್ತಿ ಬೆಳಿಗ್ಗೆ 10:45ಕ್ಕೆ ಬೌನ್ಸ್ ಸ್ಕೂಟರ್ ಬಾಡಿಗೆ ಪಡೆದು, 100 ಮೀಟರ್ ದೂರ ಹೋಗಿದ್ದಾನೆ. ಗಾಡಿ ಅಲ್ಲಿಯೇ ನಿಂತು ಜಿಪಿಎಸ್ ಕಡಿತಗೊಂಡಿದೆ. ಇದರಿಂದ ಬೌನ್ಸ್ ಜಿಪಿಎಸ್ ಕಂಟ್ರೋಲ್ ರೂಮ್‌ನಲ್ಲಿ ಅಲ್ಲಿನ ನಿರ್ವಾಹಕರಿಗೆ ಅನುಮಾನ ಬಂದಿದೆ. ತಕ್ಷಣವೇ ಬೌನ್ಸ್ ಪ್ರತಿನಿಧಿ ಮಿಟ್ಟಿಗಾನಹಳ್ಳಿ ನಿರ್ಜನ ಪ್ರದೇಶವೊಂದಕ್ಕೆ ಹೋಗಿ ನೋಡಿದಾಗ ಬೌನ್ಸ್ ಸ್ಕೂಟರ್ ಉರಿದು ಬೂದಿಯಾಗಿದೆ.

ಟ್ರಾಫಿಕ್ ಪೊಲೀಸ್ ಕೊಟ್ಟ ಚಲನ್ ಹರಿದು ಬೈಕ್ ಸವಾರ ಮಾಡಿದ್ದೇನು?ಟ್ರಾಫಿಕ್ ಪೊಲೀಸ್ ಕೊಟ್ಟ ಚಲನ್ ಹರಿದು ಬೈಕ್ ಸವಾರ ಮಾಡಿದ್ದೇನು?

ಬೇರೆಯವರ ದಾಖಲೆ ನೀಡಿ ಮೋಸ

ಬೇರೆಯವರ ದಾಖಲೆ ನೀಡಿ ಮೋಸ

ಈ ಸ್ಕೂಟರ್ ಬಾಡಿಗೆಗೆ ಪಡೆದಿದ್ದ ವ್ಯಕ್ತಿ ಉದ್ದೇಶಪೂರ್ವಕವಾಗಿಯೇ ಸ್ಕೂಟರ್‌ಗೆ ಬೆಂಕಿ ಇಟ್ಟು ಪರಾರಿಯಾಗಿದ್ದಾನೆ. ಸ್ಕೂಟರ್‌ನಲ್ಲಿನ ಬೆಲೆಬಾಳುವ ವಸ್ತುಗಳನ್ನು ಬಿಚ್ಚಿಕೊಂಡು ಬೆಂಕಿ ಇಟ್ಟು ಪರಾರಿಯಾಗಿರುವುದನ್ನು ಬೌನ್ಸ್ ಪ್ರತಿನಿಧಿ ಖಚಿತಪಡಿಸಿಕೊಂಡಿದ್ದಾರೆ. ಇದಕ್ಕಾಗಿ ಆ ವ್ಯಕ್ತಿ ವಾಹನವನ್ನು ಪಡೆಯುವಾಗ ಮಹಮ್ಮದ್ ಸುಹೇಲ್ ಎನ್ನುವ ಬೇರೊಬ್ಬ ವ್ಯಕ್ತಿಯ ವಾಹನ ಚಾಲನಾ ಪರವಾನಗಿ ಪತ್ರದ ಜೆರಾಕ್ಸ್ ಅಪ್ಲೋಡ್ ಮಾಡಿ, ಬಾಡಿಗೆಗೆ ಪಡೆದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ದಾಖಲು

ದೂರು ದಾಖಲು

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬೌನ್ಸ್ ಪ್ರತಿನಿಧಿಗಳು, ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡಿರುವ ಪೊಲೀಸರು, 'ವಿಜಯ್ ಎಂಬುವವನು ಈ ಕೃತ್ಯ ಮಾಡಿದ್ದಾನೆ. ಒಬ್ಬನೇ ಈ ಕೃತ್ಯ ಮಾಡಿಲ್ಲ. ಇವನ ಹಿಂದೆ ಇನ್ನೂ ಮೂರ್ನಾಲ್ಕು ಜನ ಇರಬಹುದ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು. ವಿಜಯ್ ಎನ್ನುವ ಕಲಬುರಗಿ ಮೂಲದ ಕೂಲಿ ಕಾರ್ಮಿಕನಾಗಿದ್ದು, ಬೈಕ್ ಕಳ್ಳನಿರಬಹುದು' ಎಂದು ಹೇಳಿದ್ದಾರೆ.

ಬೌನ್ಸ್ ದುರುಪಯೋಗ

ಬೌನ್ಸ್ ದುರುಪಯೋಗ

ಬೈಕ್‌ ಇಲ್ಲದವರಿಗೆ, ಬೈಕ್‌ನಿಂದ ತುರ್ತು ಪ್ರಯಾಣಕ್ಕೆ ಅನುಕೂಲ ಆಗಲಿ ಎಂದು ಸೇವೆಗೆ ಬಂದಿರುವ ಬೌನ್ಸ್ ಸ್ಕೂಟರ್‌ಗಳನ್ನು ದುರುಳರು ದುರುಪಯೋಗ ಪಡಿಸಿಕೊಳ್ಳುತ್ತಿರುವ ಘಟನೆಗಳು ಬೆಂಗಳೂರಿನಲ್ಲಿ ಹೆಚ್ಚುತ್ತಿವೆ. ಇದನ್ನು ತಡೆಗಟ್ಟಲು ಬೌನ್ಸ್ ಕಡೆಯವರು ತಂತ್ರಜ್ಞಾನದ ಮೂಲಕ ಎಷ್ಟೇ ಪ್ರಯತ್ನ ಮಾಡಿದರೂ ದುರುಳರು ಮಾತ್ರ ಒಂದಲ್ಲ ಒಂದು ಕುತಂತ್ರ ಮಾಡಿ ಬೌನ್ಸ್‌ಗೆ ಕಂಟಕವಾಗಿದ್ದಾರೆ.

ಇ ಸಿಟಿಯಲ್ಲಿ ಯೂಲೂ ಬೈಕ್ ನಿಂದ ನಿಲ್ದಾಣರಹಿತ ಸೈಕಲ್ ಯೋಜನೆಇ ಸಿಟಿಯಲ್ಲಿ ಯೂಲೂ ಬೈಕ್ ನಿಂದ ನಿಲ್ದಾಣರಹಿತ ಸೈಕಲ್ ಯೋಜನೆ

ಸೆಲ್ಪಿ ಫೋಟೊ ಅಪ್ಲೋಡ್ ಮಾಡಬೇಕು

ಸೆಲ್ಪಿ ಫೋಟೊ ಅಪ್ಲೋಡ್ ಮಾಡಬೇಕು

ಬೌನ್ಸ್ ಸ್ಕೂಟರ್ ಪಡೆಯುವ ಗ್ರಾಹಕರು ತಮ್ಮ ಚಾಲನಾ ಪರವಾನಗಿಯನ್ನು (ಡಿಎಲ್) ಹಾಗೂ ವ್ಯಕ್ತಿ ಗುರುತಿಗೆ ಮುಖ ಚಹರೆಯ ಸೆಲ್ಪಿ ಫೋಟೊವನ್ನು ಬೌನ್ಸ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಪ್ಲೋಡ್ ಮಾಡಬೇಕು. ಅದು ಸ್ವೀಕೃತವಾದ ನಂತರವಷ್ಟೇ ಗ್ರಾಹಕ ಸ್ಕೂಟರ್ ಬಳಸಬಹುದು. ಆದರೆ, ಕೆಲ ಕುತಂತ್ರಿಗಳು ಬೇರೆಯವರ ಡಿಎಲ್‌ನ್ನು ಹಾಗೂ ಡಿಎಲ್‌ನಲ್ಲಿ ಇರುವ ಭಾವಚಿತ್ರವನ್ನೇ ಅಪ್ಲೋಡ್ ಮಾಡಿ ಬೌನ್ಸ್‌ಗೆ ಮೋಸ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ.

English summary
Bounce Scooter Burnt By A User in Bengaluru On January 7th. FIR Lodged in Yalahanka Police Station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X