Bomb Threats: ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಿಗೆ ಬಾಂಬ್‌ ಬೆದರಿಕೆ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣವು ಎಲ್ಲರವನ್ನೂ ಬೆಚ್ಚಿಬೀಳಿಸಿತ್ತು. ಇದರ ಆರೋಪಿಗಳನ್ನು ಬೆನ್ನತ್ತಿದಾಗ ಬಿಜೆಪಿ ಕಚೇರಿ ಸ್ಫೋಟಿಸುವ ವಿಚಾರ ಕೂಡ ಬೆಳಕಿಗೆ ಬಂದಿತ್ತು. ಇದೀಗ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಿಗೂ ಕಿಡಿಗೇಡಿಗಳಿಂದ ಬಾಂಬ್‌ ಬೆದರಿಕೆ ಸಂದೇಶಗಳು ಬಂದಿವೆ ಎಂದು ವರದಿಯಾಗಿವೆ.

ಹೌದು, ಉದ್ಯಾನನಗರಿಯ ದಕ್ಷಿಣ ವಿಭಾಗದ ಮೂರು ಹೆಸರಾಂತ ಕಾಲೇಜುಗಳಿಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ಕೂಡಲೇ ಈ ವಿಚಾರ ಪೊಲೀಸರಿಗೆ ತಿಳಿಸಿದ್ದರಿಂದ ಕಾಲೇಜು ಆವರಣಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Bomb Threats Have Been Sent To Various Colleges In Bengaluru

ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಬಿಐಟಿ), ಬಿಎಂಎಸ್‌ಸಿಇ ಹಾಗೂ ಎಂಎಸ್‌ಆರ್‌ಐಟಿ ಕಾಲೇಜುಗಳಿಗೆ ಇ-ಮೇಲ್‌ನಲ್ಲಿ ಬಾಂಬ್‌ ಸ್ಫೋಟಿಸುವ ಬೆದರಿಕೆ ಮೆಸೇಜ್‌ ಬಂದಿದೆ. ಇನ್ನು ಕೂಡಲೇ ಸ್ಥಳಕ್ಕೆ ಬಾಂಬ್‌ ನಿಷ್ಕ್ರಿಯ ದಳ, ಬಾಂಬ್‌ ಪತ್ತೆದಳ ಹಾಗೂ ಹನುಮಂತನಗರ ಠಾಣೆ ಪೊಲೀಸರು ಜಮಾಯಿಸಿ, ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲೇ ಈ ರೀತಿ ಬಾಂಬ್‌ ಬೆದರಿಕೆ ಸಂದೇಶಗಳು ಬಂದಿದ್ದವು. ಕಳೆದ ವಾರ ಬೆಂಗಳೂರಿನ ಪ್ರತಿಷ್ಠಿತ ತಾಜ್ ವೆಸ್ಟ್ ಎಂಡ್ ​ಹೋಟೆಲ್​ಗೆ, ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಹೋಟೆಲ್‌ವೊಂದಕ್ಕೆ ಇದೇ ರೀತಿ ಇಮೇಲ್‌ನಲ್ಲಿ ಸಂದೇಶ ಬಂದಿತ್ತು. ಈಗ ಮತ್ತೆ ವಿವಿಧ ಕಾಲೇಜುಗಳಿಗೆ ಬಾಂಬ್‌ ಬೆದರಿಕೆ ಸಂದೇಶ ಬಂದಿರುವುದರಿಂದ ಜನ ಸಿಟಿ ಮಂದಿ ಬೆಚ್ಚಿಬೀಳುತ್ತಿದ್ದಾರೆ.

ಸತ್ತನಾಥಪುರಂ ಬಿ ಶೇಖರ್‌ ಎಂಬ ಇ-ಮೇಲ್‌ ವಿಳಾಸದಿಂದ ಈ ರೀತಿ ಸಂದೇಶ ಬಂದಿದೆ. ಕಾಲೇಜಿನಲ್ಲಿ ಐಇಡಿ ಸ್ಫೋಟಕಗಳನ್ನು ಇಟ್ಟಿದ್ದು, ಸಂಜೆ 5 ಗಂಟೆಯೊಳಗೆ ಎಲ್ಲರೂ ಕಾಲೇಜು ಬಿಟ್ಟು ಹೋಗಿ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

Bomb Threats Have Been Sent To Various Colleges In Bengaluru

ಬಿಎಂಎಸ್ ಕಾಲೇಜು ಮಾತ್ರವಲ್ಲದೆ, ಬಿಐಟಿ, ಎಂಎಸ್‌ಆರ್‌ಐಟಿ ಕಾಲೇಜುಗಳಿಗೂ ಇದೇ ಮಾದರಿಯಲ್ಲಿ ಬಾಂಬ್ ಬೆದರಿಕೆ ಹಾಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಎಲ್ಲ ಕಾಲೇಜುಗಳು ಬೆಂಗಳೂರು ದಕ್ಷಿಣ ಭಾಗದಲ್ಲೇ ಇದ್ದು, ಒಂದೇ ದಿನವೇ ಈ ರೀತಿ ಬೆದರಿಕೆ ಮೇಲ್‌ ಬಂದಿರುವುದರಿಂದ ಯಾರೋ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರತಿಷ್ಠಿತ ಎಂ.ಎಸ್.ರಾಮಯ್ಯ ಕಾಲೇಜಿಗೂ ಸಹ ಕಿಡಿಗೇಡಿಗಳು ಬಾಂಬ್ ಬೆದರಿಕೆ ಇ-ಮೇಲ್ ಕಳಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಲ್ಲಿಯೂ ಕಾಲೇಜಿನ ಸ್ಥಳಕ್ಕೆ ಸದಾಶಿವನಗರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇ-ಮೇಲ್‌ ಕಳುಹಿಸಿರುವ ದುಷ್ಕರ್ಮಿಗಳ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.

ಇತ್ತೀಚೆಗೆ ಈ ರೀತಿಯ ಬೆದರಿಕೆ ಕರೆಗಳು ಬೆಂಗಳೂರಿನ ಹಲವು ಭಾಗಗಳಲ್ಲಿ ವರದಿಯಾಗುತ್ತಿವೆ. ಇದರಿಂದ ಬೆಚ್ಚಿಬಿದ್ದಿರುವ ಸಿಲಿಕಾನ ಸಿಟಿ ಜನರು ಜೀವಭಯದಲ್ಲೇ ಹೊರಗಡೆ ಹೋಗುವಂತಾಗಿದೆ. ಪೊಲೀಸರು ಇಂತಹ ಕೃತ್ಯಗಳ ಬಗ್ಗೆ ತನಿಖೆ ಚುರುಕುಗೊಳಿಸಿ, ದುಷ್ಕರ್ಮಿಗಳನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+