ರಾಜೀವ್ ಗೌಡರಿಂದ ಪರಿಸರ ಜಾಗೃತಿಗಾಗಿ ಶಿಬಿರ
ಬೆಂಗಳೂರು, ಮೇ 9 : ಬೆಂಗಳೂರಿನ ಯುವಕರದಲ್ಲಿ ಪರಿಸರ, ಅಭಿವೃದ್ಧಿ ಮುಂತಾದ ವಿಚಾರಗಳ ಕುರಿತು ಅರಿವು ಮೂಡಿಸಲು ಐಐಎಂ ಪ್ರೊ.ರಾಜೀವ್ ಗೌಡ ಅವರ ನೇತೃತ್ವದ ಬೆಂಗಳೂರು ನೀಡ್ಸ್ ಯೂ ಸಂಸ್ಥೆಯಿಂದ Environmental Action Internship ಹಮ್ಮಿಕೊಳ್ಳಲಾಗಿದೆ.ಎರಡು ವಾರಗಳ ಈ ತರಬೇತಿ ಶಿಬಿರಕ್ಕೆ ಮೇ 12ರಂದು ಚಾಲನೆ ದೊರೆಯಲಿದೆ.
ಎರಡು ವಾರಗಳ ಶಿಬಿರದಲ್ಲಿ ಸಂಪನ್ಮೂಲ ನಿರ್ವಹಣೆ, ಪರಿಸರ ನೀತಿ, ಜೀವವೈವಿದ್ಯ ಮುಂತಾದ ವಿಚಾರಗಳ ಕುರಿತು ಯುವಕರಿಗೆ ಮಾಹಿತಿ ನೀಡಲಾಗುತ್ತದೆ. ಬೆಂಗಳೂರಿನಂತಹ ಮಹಾನಗರಗಳು ಎದುರಿಸುತ್ತಿರುವ ಪರಿಸರ ಸಮಸ್ಯೆಗಳನ್ನು ಯುವಕರಿಗೆ ತಿಳಿಸಿಕೊಡುವುದು ಈ ಶಿಬಿರದ ಉದ್ದೇಶವಾಗಿದೆ. [ಬೆಂಗಳೂರಿನಲ್ಲಿರುವುದು 14 ಲಕ್ಷ ಮರಗಳು ಮಾತ್ರ]

Bengaluru Needs You ಇಂತಹ ಶಿಬಿರವನ್ನು ನಡೆಸುವ ಮೂಲಕ ಯುವಕರನ್ನು ಜಾಗೃತಗೊಳಿಸಿ, ನಗರದ ಪರಿಸರ ಸಂರಕ್ಷಿಸುವ ಹೋರಾಟದಲ್ಲಿ ಅವರನ್ನು ಸಕ್ರಿಯವಾಗಿ ತೊಡಗುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ಇದು ಕೇವಲ ಪರಿಸರ ಪ್ರಿಯರಿಗೆ ಮಾತ್ರ ಸೀಮಿತವಾಗಿಲ್ಲ. ನಗರದ ಬಗ್ಗೆ ಕಾಳಜಿ ಇರುವ ಇತರರು ಶಿಬಿರದಲ್ಲಿ ಭಾಗವಹಿಸಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ತರಬೇತಿ ಶಿಬಿರ ವಿವಿಧ ವಿಚಾರಗಳ ಚಿಂತನ-ಮಂಥನ ಮತ್ತು ಪ್ರಾಯೋಗಿಕ ಕಲಿಕೆಯಿಂದ ಕೂಡಿರುತ್ತದೆ. ಪ್ರಾಯೋಗಿಕ ಕಲಿಕೆಯಲ್ಲಿ ನಗರದ ತಾಜ್ಯ ವಿಲೇವಾರಿ, ಜೀವ ವೈವಿದ್ಯ, ಕೆರೆಗಳ ಸಂರಕ್ಷಣೆ ಮುಂತಾದ ಸಮಸ್ಯೆಗಳ ಬಗ್ಗೆ ಕಲಿಯಲು ಅವಕಾಶವಿದೆ.
ಈ ಶಿಬಿರಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, 17 ವರ್ಷ ಮೇಲ್ಪಟ್ಟ ಎಲ್ಲಾ ಆಸಕ್ತರು ಶಿಬಿರದಲ್ಲಿ ಭಾಗವಹಿಸಬುದಾಗಿದೆ. ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು http://bit.ly/PNtvnp. ಭೇಟಿ ನೀಡಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ ನೀಡಬಹುದಾಗಿದೆ. ಅರ್ಜಿ ಸಲ್ಲಿಸಿದವರಿಗೆ ಮಾಹಿತಿಯನ್ನು ಈ ಮೇಲ್ ಮೂಲಕ ಕಳಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ www.facebook.com/BengaluruNeedsYou ಅಥವ ಶೃತಿ ವಿನೋದ್ 9980156262 ನಂಬರ್ ಗೆ ಕರೆ ಮಾಡಬಹುದಾಗಿದೆ.












Click it and Unblock the Notifications