ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

75ನೇ ಸ್ವಾತಂತ್ರ್ಯ ಸಂಭ್ರಮ: 75 ನೂತನ ನಾನ್‌ ಎಸಿ ಎಲೆಕ್ಟ್ರಿಕ್ ಬಸ್‌ ಸೇವೆ ಆರಂಭಿಸಲಿರುವ ಬಿಎಂಟಿಸಿ

|
Google Oneindia Kannada News

ಬೆಂಗಳೂರು, ಆಗಸ್ಟ್ 7 : ಭಾರತದ ಸ್ವಾತಂತ್ರ್ಯದ 75ನೇ ವರ್ಷದ ಸ್ಮರಣಾರ್ಥ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆಗಸ್ಟ್ 15 ರೊಳಗೆ 75 ನಾನ್-ಎಸಿ ಎಲೆಕ್ಟ್ರಿಕ್ ಬಸ್‌ ಸೇವೆಯನ್ನು ಆರಂಭಿಸಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೋಮವಾರ ನೂತನ ಬಸ್‌ ಸೇವೆಗೆ ಚಾಲನೆ ನೀಡಬೇಕಿತ್ತು, ಆದರೆ ಶನಿವಾರ ಅವರಿಗೆ ಕೋವಿಡ್‌ ಸೋಂಕು ತಗುಲಿರುವುದರಿಂದ ಕಾರ್ಯಕ್ರಮ ಮುಂದೂಡಲಾಗಿದೆ. "ನಾವು ಆಗಸ್ಟ್ 15 ರೊಳಗೆ ಬಸ್‌ಗಳನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೇವೆ. ಆದರೆ ಸಿಎಂ ಬಸವರಾಜ ಬೊಮ್ಮಾಯಿಯವರ ಕಾರ್ಯಕ್ರಮದ ದಿನಾಂಕವನ್ನು ಅಂತಿಮಗೊಳಿಸಲಾಗಿಲ್ಲ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಬ್ಬಂದಿ ಕೊರತೆ: ಕಂಡಕ್ಟರ್ ರಹಿತ ಬಸ್‌ ಸೇವೆಗೆ ಮಾರ್ಗ ಗುರುತಿಸುತ್ತಿರುವ ಬಿಎಂಟಿಸಿಸಿಬ್ಬಂದಿ ಕೊರತೆ: ಕಂಡಕ್ಟರ್ ರಹಿತ ಬಸ್‌ ಸೇವೆಗೆ ಮಾರ್ಗ ಗುರುತಿಸುತ್ತಿರುವ ಬಿಎಂಟಿಸಿ

ಅಶೋಕ ಲೇಲ್ಯಾಂಡ್‌ನ ಅಂಗಸಂಸ್ಥೆಯಾದ ಸ್ವಿಚ್ ಮೊಬಿಲಿಟಿ ಲಿಮಿಟೆಡ್‌ನಿಂದ 12-ಮೀಟರ್ ಉದ್ದದ ನಾನ್-ಎಸಿ ಇ-ಬಸ್‌ಗಳನ್ನು ಮುಖ್ಯವಾಗಿ ದೂರದ ಮಾರ್ಗಗಳಲ್ಲಿ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಯಲಹಂಕ ಡಿಪೋದಿಂದ ಈ ಇ-ಬಸ್‌ಗಳನ್ನು ಓಡಿಸಲು ಯೋಜನೆ ರೂಪಿಸಲಾಗಿದೆ. ಈ ಇ-ಬಸ್‌ಗಳನ್ನು ಚಲಾಯಿಸಲು ಯಲಹಂಕ ಡಿಪೋದಿಂದ 290ಇ ಶಿವಾಜಿನಗರ ಯಲಹಂಕ, 401ಕೆ ಯಲಹಂಕ-ಕೆಂಗೇರಿ, 402ಬಿ, 402ಡಿ ಕೆಂಪೇಗೌಡ ಬಸ್ ನಿಲ್ದಾಣ-ಯಲಹಂಕ ಸ್ಯಾಟಲೈಟ್ ಟೌನ್‌ನಂತಹ ಮಾರ್ಗಗಳನ್ನು ಬಿಎಂಟಿಸಿ ಗುರುತಿಸಿದೆ.

 300 ಇ-ಬಸ್‌ ಪೂರೈಸಲಿರುವ ಸ್ವಿಚ್ ಮೊಬಿಲಿಟಿ

300 ಇ-ಬಸ್‌ ಪೂರೈಸಲಿರುವ ಸ್ವಿಚ್ ಮೊಬಿಲಿಟಿ

ಸೆಪ್ಟೆಂಬರ್ 2021 ರಲ್ಲಿ, ಫೇಮ್‌ 2 (FAME II) ಯೋಜನೆಯಡಿಯಲ್ಲಿ 300 ಇ-ಬಸ್ ಟೆಂಡರ್‌ಗೆ ಸ್ವಿಚ್ ಮೊಬಿಲಿಟಿ ಪ್ರತಿ ಕಿಲೋ ಮೀಟರ್ ಗೆ 48.9 ರುಪಾಯಿ ಬಿಡ್‌ ಮಾಡುವ ಮೂಲಕ ಕಡಿಮೆ ಬಿಡ್‌ದಾರರಾಗಿ ಹೊರಹೊಮ್ಮಿತು. ಉಳಿದ ಬಸ್‌ಗಳು ಅಕ್ಟೋಬರ್ ವೇಳೆಗೆ ಸೇರ್ಪಡೆಯಾಗಲಿವೆ.

ಗಗನಕ್ಕೇರುತ್ತಿರುವ ಡೀಸೆಲ್ ಬೆಲೆ ಮತ್ತು ಸಿಬ್ಬಂದಿ ಕೊರತೆಯಿಂದ ಸಂಕಷ್ಟದಲ್ಲಿರುವ ಬಿಎಂಟಿಸಿಗೆ ಈ ಇ-ಬಸ್‌ಗಳು ದೊಡ್ಡ ಪರಿಹಾರವಾಗಲಿದೆ. ಸ್ವಿಚ್ ಮೊಬಿಲಿಟಿಯು ಚಾಲಕರನ್ನು ಸಹ ಒದಗಿಸುತ್ತದೆ ಮತ್ತು ಚಾರ್ಜ್ ಮಾಡುವ ಮೂಲಸೌಕರ್ಯ ಮತ್ತು ಬಸ್‌ಗಳ ನಿರ್ವಹಣೆಯನ್ನು ಸಹ ನೋಡಿಕೊಳ್ಳುತ್ತದೆ ಆದ್ದರಿಂದ ಬಿಎಂಟಿಸಿ ಕೇವಲ ಕಂಡಕ್ಟರ್‌ಗಳನ್ನು ನಿಯೋಜಿಸಬೇಕಾಗುತ್ತದೆ.

ಬಿಎಂಟಿಸಿಯಿಂದ ಇನ್ನು ಪ್ರಯಾಣಿಕರಿಗೆ ಡಿಜಿಟಲ್‌ ಪಾಸ್‌ಬಿಎಂಟಿಸಿಯಿಂದ ಇನ್ನು ಪ್ರಯಾಣಿಕರಿಗೆ ಡಿಜಿಟಲ್‌ ಪಾಸ್‌

 ಬಸ್‌ ನಿಲ್ದಾಣಗಳಲ್ಲಿ ಚಾರ್ಜಿಂಗ್ ಪಾಯಿಂಟ್‌

ಬಸ್‌ ನಿಲ್ದಾಣಗಳಲ್ಲಿ ಚಾರ್ಜಿಂಗ್ ಪಾಯಿಂಟ್‌

41 ಆಸನಗಳ (ಚಾಲಕ ಸೇರಿದಂತೆ) ಬಸ್‌ಗಳು ಒಂದೇ ಚಾರ್ಜ್‌ನಲ್ಲಿ 150 ಕಿಲೋ ಮೀ ಟರ್ ಓಡುತ್ತವೆ. ಬಸ್ಸುಗಳು 45 ನಿಮಿಷಗಳ ಕಾಲ ಅವಕಾಶವನ್ನು ಚಾರ್ಜ್ ಮಾಡಿದ ನಂತರ (ಅನುಕೂಲವಾದಾಗ ಸ್ವಲ್ಪ ಸಮಯದವರೆಗೆ ಬ್ಯಾಟರಿಯನ್ನು ಚಾರ್ಜ್ ಮಾಡುವುದು) ಮತ್ತೊಂದು 75 ಕಿಮೀ ಓಡುತ್ತವೆ. ಅಂದರೆ ಪ್ರತಿ ಬಸ್ಸು 225 ಕಿ. ಮೀ. ಕ್ರಮಿಸಬಹುದಾಗಿದೆ.

ಕೆಬಿಎಸ್, ಕೆಂಗೇರಿ, ಯಶವಂತಪುರ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣದ ಡಿಪೋಗಳಲ್ಲಿ 300 ಇ-ಬಸ್‌ಗಳಿಗೆ ಅವಕಾಶ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಬಿಎಂಟಿಸಿ 90 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಹೊಂದಿದೆ.

 ಲೋ-ಫ್ಲೋರ್ ಎಲೆಕ್ಟ್ರಿಕ್ ಬಸ್‌ ಸೇವೆ ಆರಂಭಿಸಿ

ಲೋ-ಫ್ಲೋರ್ ಎಲೆಕ್ಟ್ರಿಕ್ ಬಸ್‌ ಸೇವೆ ಆರಂಭಿಸಿ

ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಸೂಕ್ತವಾದ ಲೋ-ಫ್ಲೋರ್ ಎಲೆಕ್ಟ್ರಿಕ್ ಬಸ್‌ಗಳನ್ನು ಅಳವಡಿಸಬೇಕೆಂದು ಅನೇಕ ಪ್ರಯಾಣಿಕರು ಬಿಎಂಟಿಸಿಯನ್ನು ಒತ್ತಾಯಿಸಿದ್ದಾರೆ.

"ಈ 12 ಮೀಟರ್ ಉದ್ದದ ನಾನ್-ಎಸಿ ಸ್ವಿಚ್ ಮೊಬಿಲಿಟಿ ಇ-ಬಸ್‌ಗಳು 900 ಎಂಎಂ ನೆಲದ ಎತ್ತರ (ಗ್ರೌಂಡ್ ಕ್ಲಿಯರೆನ್ಸ್) ಹೊಂದಿವೆ. ಅವುಗಳಲ್ಲಿ ಪ್ರತಿಯೊಂದೂ ವೀಲ್-ಚೇರ್ ಲಿಫ್ಟಿಂಗ್ ಸೌಲಭ್ಯವನ್ನು ಹೊಂದಿರುತ್ತದೆ. ನಾನ್-ಎಸಿ ಬಸ್ ವಿಭಾಗದಲ್ಲಿ ಕೆಲವೇ ತಯಾರಕರು ಇದ್ದಾರೆ" ಎಂದು ಅಧಿಕಾರಿಯೊಬ್ಬರು ಹೇಳಿದರು.

 ವೀಲ್-ಚೇರ್ ಲಿಫ್ಟಿಂಗ್ ಸೌಲಭ್ಯ ನಮ್ಮ ರಸ್ತೆಗಳಿಗೆ ಹೊಂದಲ್ಲ

ವೀಲ್-ಚೇರ್ ಲಿಫ್ಟಿಂಗ್ ಸೌಲಭ್ಯ ನಮ್ಮ ರಸ್ತೆಗಳಿಗೆ ಹೊಂದಲ್ಲ

ಪ್ರಯಾಣಿಕರ ಪ್ರಕಾರ, ವೀಲ್-ಚೇರ್ ಲಿಫ್ಟಿಂಗ್ ಸೌಲಭ್ಯವು ಭಾರತೀಯ ರಸ್ತೆ ಪರಿಸ್ಥಿತಿಗಳಿಗೆ ಸೂಕ್ತವಲ್ಲ. "ಹೆಚ್ಚಿನ ಬಸ್‌ಗಳು ಗೊತ್ತುಪಡಿಸಿದ ಆಶ್ರಯ ಬಸ್ ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ. ಈ ವೀಲ್-ಚೇರ್ ಲಿಫ್ಟಿಂಗ್ ಸೌಲಭ್ಯಗಳ ಬದಲಿಗೆ ನಮಗೆ ಹೆಚ್ಚಿನ ಲೋ ಫ್ಲೋರ್ ನಾನ್-ಎಸಿ ಬಸ್‌ಗಳ ಅಗತ್ಯವಿದೆ. ಲೋ ಫ್ಲೋರ್ ಬಸ್‌ಗಳು ಅಂಗವಿಕಲರು, ಮಕ್ಕಳು ಮತ್ತು ವೃದ್ಧರಿಗೆ ಪ್ರವೇಶಿಸಲು ಸುಲಭವಾಗುತ್ತದೆ" ಎಂದು ಹೇಳಿದ್ದಾರೆ.

"ಪ್ರಸ್ತುತ, ಗಾಲಿಕುರ್ಚಿಗಳು, ತಳ್ಳುಗಾಡಿಗಳು ಸರಾಗವಾಗಿ ಚಲಿಸಲು ಬೇಕಾದಂತಹ ನಮ್ಮಲ್ಲಿ ಸರಿಯಾದ ಫುಟ್‌ಪಾತ್‌ಗಳಿಲ್ಲ. ಗಾಲಿಕುರ್ಚಿ-ಎತ್ತುವ ಸೌಲಭ್ಯವಿರವ ಬಸ್‌ಗಳಲ್ಲಿ ಒಬ್ಬ ವ್ಯಕ್ತಿ ಬಸ್ ಒಳಗೆ ಬರಲು ಕನಿಷ್ಠ ಐದು ನಿಮಿಷ ಬೇಕಾಗುತ್ತದೆ. ವಿಶೇಷವಾಗಿ ಹೆಚ್ಚು ಸಂಚಾರ ಇರುವ ಸಮಯದಲ್ಲಿ ಇದು ಕಷ್ಟವಾಗುತ್ತದೆ" ಎಂದು ಬಿಎಂಟಿಸಿ ಬಸ್‌ ಪ್ರಯಾಣಿಕರಾದ ಲಕ್ಷ್ಮಿ ಗೋಪಾಲ್ ತಿಳಿಸಿದ್ದಾರೆ.

"ಯಲಹಂಕದಲ್ಲಿ ಚಾರ್ಜಿಂಗ್ ಸ್ಟೇಷನ್ ಈಗಾಗಲೇ ಸಿದ್ಧವಾಗಿದೆ. ಇನ್ನೆರಡು ಡಿಪೋಗಳಾದ ಬಿಡದಿ ಮತ್ತು ಅತ್ತಿಬೆಲೆಯಲ್ಲಿ ಚಾರ್ಜಿಂಗ್ ಪಾಯಿಂಟ್‌ ಸ್ಥಾಪನೆ ಮಾಡುವ ಕೆಲಸ ಪ್ರಗತಿಯಲ್ಲಿದೆ" ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
During 75th Independence Day Bangalore Metropolitan Transport Corporation (BMTC) will start 75 non-AC electric buses by August 15. E-Bus launch has been postponed after Chief minister Basavaraj Bommai tested positive for Covid on Saturday. BMTC planning to launch the buses by August 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X