• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಲೆಕ್ಟ್ರಿಕ್ ಬಸ್‌ ಗುತ್ತಿಗೆ ಬದಲು ಖರೀದಿಗೆ ಮುಂದಾದ ಬಿಎಂಟಿಸಿ

|

ಬೆಂಗಳೂರು, ಮಾರ್ಚ್ 4: ಬಿಎಂಟಿಸಿಯು ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್‌ ಪಡೆಯುವ ಯೋಜನೆಗೆ ಕೈಬಿಡಲಾಗಿದೆ. ಗುತ್ತಿಗೆ ಬದಲು ನಿಗಮದಿಂದಲೇ ಬಸ್ ಖರೀದಿಸುವ ಕುರಿತು ಚರ್ಚೆ ನಡೆದಿದೆ.

ಪ್ರಮುಖ ಹೆದ್ದಾರಿಗಳಲ್ಲಿ ಶೀಘ್ರ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಕೇಂದ್ರ

ಇತ್ತೀಚೆಗಷ್ಟೇ ಬಿಎಂಟಿಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಶಾಸಕ ಎನ್ ಎ ಹ್ಯಾರಿಸ್ ಕೂಡ ಸಾರಿಗೆ ಸಚಿವರ ಅಭಿಲಾಷೆಯನ್ನೇ ಹೊಂದಿದ್ದಾರೆ. ಹಾಗಾಗಿ ಇತ್ತೀಚೆಗೆ ನಡೆದ ನಿಗಮದ ಮಂಡಳಿ ಸಭೆಯಲ್ಲಿ ಗುತ್ತಿಗೆ ಆಧಾರದಡಿ ಎಲೆಕ್ಟ್ರಿಕ್ ಬಸ್ ಪಡೆಯುವ ಟೆಂಡರ್ ರದ್ದುಗೊಳಿಸಿ, ಬಸ್ ಖರೀದಿಗೆ ಹೊಸ ಟೆಂಡರ್ ರದ್ದುಗೊಳಿಸಿ, ಬಸ್ ಖೃಇದಿಗೆ ಮುಂದಾಗಿದೆ.

ಮೆಟ್ರೋ ನಿಲ್ದಾಣದಲ್ಲಿ ಶೀಘ್ರ ಎಲೆಕ್ಟ್ರಿಕ್‌ ವಾಹನ ಚಾರ್ಜಿಂಗ್‌ ಕೇಂದ್ರ ಆರಂಭ

ಗುತ್ತಿಗೆ ಯೋಜನೆ ಟೆಂಡರ್‌ನಲ್ಲಿ ಹಲವು ಗೊಂದಲಗಳು ಕಂಡು ಬಂದಿದ್ದರಿಂದ ಸಾರಿಗೆ ಸಚಿವರು ಹಾಗೂ ನಿಗಮದ ಅಧ್ಯಕ್ಷರು ಈ ಯೋಜನೆ ಕೈಬಿಡುವ ನಿರ್ಧಾರಕ್ಕೆ ಬಂದಿದ್ದಾರೆ. ದಿನಕ್ಕೆ ಎಷ್ಟು ಕಿ.ಮೀ ಓಡಿಸಬೇಕು. ಬ್ಯಾಟರಿ ಬಾಳಿಕೆ, ಬಸ್ ಕೆಟ್ಟರೆ ಅವುಗಳ ದುರಸ್ತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸ್ಪಷ್ಟನೆ ಇರಲಿಲ್ಲ.

ಈ ಗೊಂದಲಗಳ ನಡುವೆ ಗುತ್ತಿಗೆ ಆಧಾರದ ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಗೆ ಕೈ ಹಾಕುವುದು ಸರಿಯೇ ಎಂದು ಮಂಡಳಿ ಸಭೆಯಲ್ಲಿ ಚರ್ಚಿಸಲಾಯಿತು. ಕೊನೆಗೆ ನಿಗಮದಿಂದಲೇ ಬಸ್ ಖರೀದಿಸಿ, ನಿಗಮದ ಸಿಬ್ಬಂದಿಗಳಿಗೆ ಬಸ್‌ಗಳ ಚಾಲನೆ ಮತ್ತು ನಿರ್ವಹಣೆ ಕುರಿತು ಸೂಕ್ತ ತರಬೇತಿ ನೀಡುವ ಕುರಿತು ಚರ್ಚಿಸಲಾಯಿತು.

English summary
Earlier BMTC was thinking to give contract for electric bus. Now its decided to purchase it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X