ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದ್ಯದಲ್ಲೇ ಅಂಗವಿಕಲರಿಗಾಗಿ ಬಿಎಂಟಿಸಿಯಿಂದ ವಿಶೇಷ ಬಸ್ ಸೇವೆ ಆರಂಭ

|
Google Oneindia Kannada News

ಬೆಂಗಳೂರು, ಜೂ.13: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿಶೇಷಚೇತನರು ಇನ್ನು ಮುಂದೆ ಬಿಎಂಟಿಸಿ ಬಸ್ ಗಳಲ್ಲಿ ಯಾರ ಸಹಾಯವಿಲ್ಲದೇ ಓಡಾಡಬಹುದಾಗಿದೆ. ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಿಶೇಷ ಚೇತನರಿಗೆ ಪ್ರಯಾಣವನ್ನು ಸುಲಭವಾಗಿಸಲು ಗಾಲಿಕುರ್ಚಿಗಳನ್ನು ಮೇಲೆತ್ತಬಹುದಾದ (ವ್ಹೀಲ್ ಚೇರ್ ಲಿಫ್ಟಿಂಗ್) ಸೌಲಭ್ಯವುಳ್ಳ 300 ಎಸಿ ರಹಿತ ಎಲೆಕ್ಟ್ರಿಕ್ ಬಸ್‌ಗಳ ಸೌಲಭ್ಯ ನೀಡಲು ನಿರ್ಧರಿಸಿದೆ.

ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆ (ಎಫ್‌ಎಎಂಇ) ಎರಡನೇ ಯೋಜನೆಯಡಿ ಬಿಎಂಟಿಸಿ ಉದ್ದೇಶದಂತೆ ನಾನ್ ಎಸಿ 300 ಬಸ್ ಪೈಕಿ ಒಂದಷ್ಟು ಬಸ್ ಗಳನ್ನು ಈಗಾಗಲೇ ಖರೀದಿಸಿದ್ದು, ಸದ್ಯದಲ್ಲೇ ಬಸ್‌ಗಳು ನಗರದ ರಸ್ತೆಗೆ ಇಳಿಯಲಿವೆ. ಈ ಬಸ್‌ಗಳಲ್ಲಿನ ವ್ಹೀಲ್ ಚೇರ್ ಲಿಫ್ಟಿಂಗ್ ವ್ಯವಸ್ಥೆಯ ನಿರ್ವಹಣೆಯನ್ನು ಬಿಎಂಟಿಸಿ ಸಿಬ್ಬಂದಿಯೇ ನಿರ್ವಹಸಲಿದ್ದಾರೆ ಎಂದು ಸಂಸ್ಥೆ ಮೂಲಗಳು ತಿಳಿಸಿದೆ.

ವಿಶೇಷ ವ್ಯವಸ್ಥೆಯ ಬಸ್ ಸೇವೆಗೆ ಸಿಎಂ ಚಾಲನೆ:
ಈ ಕುರಿತು ಪ್ರತಿಕ್ರಿಯಿಸಿರುವ ಬಿಎಂಟಿಸಿ ನಿರ್ದೇಶಕ (ಐಟಿ ವಿಭಾಗ) ಎ.ವಿ.ಸೂರ್ಯ ಸೇನ್ ಅವರು, ವ್ಹೀಲ್ ಚೇರ್ ಲಿಫ್ಟಿಂಗ್ ವೈಶಿಷ್ಟ್ಯ ಹೊಂದಿರುವ ಸುಮಾರು 100 ಬಸ್‌ಗಳು ಆಗಸ್ಟ್ 1ರೊಳಗೆ ನಗರದಲ್ಲಿ ಸೇವೆ ನೀಡಲಿವೆ. ಇವುಗಳ ಕಾರ್ಯಾರಂಭಕ್ಕೆ ಆದಷ್ಟು ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದರು.

BMTC to operate 300 non ac bus with wheelchair lifting facility very soon

ಮಾರ್ಗ- ಬಸ್ ವಿಶೇಷತೆ:
ಮೆಜೆಸ್ಟಿಕ್‌ನಿಂದ ಹೆಬ್ಬಾಳ, ಸಿಲ್ಕ್‌ ಬೋರ್ಡ ರಸ್ತೆ, ಹೊರ ವರ್ತುಲ ರಸ್ತೆ ಸೇರಿದಂತೆ ನಿಗಮ ಸೂಚಿಸುವ ಮಾರ್ಗಗಳಲ್ಲಿ ಸೇವೆ ಒದಗಿಸಲಿವೆ. ಈಗಾಗಲೇ ಅತ್ತಿಬೇಲೆ, ಯಲಹಂಕ ಮತ್ತು ಬಿಡದಿ ಸೇರಿದಂತೆ ಹಲವು ಮಾರ್ಗಗಳನ್ನು ಗುರುತಿಸಲಾಗಿದೆ. ಸಂಸ್ಥೆಯು ವಜ್ರ ಮತ್ತು ವಾಯು ವಜ್ರ ಹೆಸರಿನ ನೆಲ ಮತ್ತು ಬಸ್ಸಿಗೆ ಕಡಿಮೆ ಅಂತರವುಳ್ಳ (ಲೋಫ್ಲೋರ್) ಬಸ್ ಗಳನ್ನು ಚಲಾಯಿಸುತ್ತಿದೆ. ವ್ಹೀಲ್ ಚೇರ್ ಲಿಫ್ಟಿಂಗ್ ವ್ಯವಸ್ಥೆಯನ್ನು ಕೇವಲ ಖಾಸಗಿ ವಾಹನಗಳಲ್ಲಿ ಮಾತ್ರವೇ ಬಳಕೆಯಾಗುತ್ತಿತ್ತು.

ಇದೀಗ ಬಿಎಂಟಿಸಿ ಸಹ ಅಂತಹ ವ್ಯವಸ್ಥೆವುಳ್ಳ ಹೊಸ ಬಸ್ ಖರೀದಿಸುತ್ತಿದೆ. ಇದರಲ್ಲಿ ವ್ಹೀಲ್ ಚೇರ್ ಮೇಲೆತ್ತುವ ಸೌಲಭ್ಯವನ್ನು ಬಸ್‌ನ ಮಧ್ಯಭಾಗದಲ್ಲಿ ಕಲ್ಪಿಸಲಾಗಿದೆ. ನಿಗದಿತ ಗುಂಡಿಯನ್ನು ಒತ್ತಿದರೆ ಪ್ರಯಾಣಿಕರು ಹೊರಗೆ ಇಳಿಯಲು, ಒಳಗೆ ಬಂದು ಕೂರುವಂತೆ ನಿರ್ಮಿಸಲಳಾಗಿದೆ. ಬದು ಕೂತ ನಂತರ ಗಾಲಿಕುರ್ಚಿಯನ್ನು ಗೊತ್ತುಪಡಿಸಿದ ಸ್ಥಳದಲ್ಲಿ ಇರಿಸಲಾಗುತ್ತದೆ. ವಿಕಲಚೇತನರನ್ನು ಗಮನದಲ್ಲಿಟ್ಟುಕೊಂಡೆ ಈ ಬಸ್ ಗಳನ್ನು ತಯಾರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹೊಸ ಸೌಲಭ್ಯ ಸ್ವಾಗತಾರ್ಹ:
ಹಿಂದಿನಿಂದಲೂ ವಿಲಚೇತನ ಸ್ನೇಹಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ ಮಾಡುತ್ತಲೇ ಬಂದಿದ್ದೆವು. ಇದೀಗ ಆ ಬೇಡಿಕೆ ಈಡೇರುತ್ತಿದ್ದು, ಬಿಎಂಟಿಸಿಯ 300 ಹೊಸ ಬಸ್ ಖರೀದಿ ನಿರ್ಧಾರ ಸ್ವಾಗತಾರ್ಹ. ಜತೆಗೆ ಬಿಎಂಟಿಸಿ ಆಡಳಿತ ಮಂಡಳಿ, ಸಿಬ್ಬಂದಿಯು ಅಂಗವಿಕಲ ಮಕ್ಕಳ ಜತೆಗೆ ಹೇಗೆ ನಡೆದುಕೊಳ್ಳಬೇಕು ಎಂಬ ಜಾಗೃತಿ ಮೂಡಬೇಕು. ಹಿರಿಯ ನಾಗರಿಕರು, ಮಕ್ಕಳು ಹಾಗೂ ಮಹಿಳೆಯರ ಹಿತದೃಷ್ಟಿಯಿಂದ ಬಿಎಂಟಿಸಿಯಲ್ಲಿ ಪ್ರಯಾಣಿಕ ಸ್ನೇಹಿ ಇನ್ನಷ್ಟು ಬದಲಾವಣೆಗಳು ಆಗಬೇಕು ಎಂದು ವಿಕಲಚೇತನರ ಸಂಘ ಸದಸ್ಯರೊಬ್ಬರು ತಿಳಿಸಿದ್ದಾರೆ.

ವಿಕಲಚೇತನರ ಕಾನೂನು ಘಟಕದ ದಕ್ಷಿಣ ಪ್ರಾದೇಶಿಕದ ಸಂಯೋಜಕ ಎಸ್. ಬಾಬು ಅವರು, ನಗರದಲ್ಲಿ ವಿಶೇಷ ಚೇತನರು ಒಂದಿಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ, ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರಲು, ಇಲ್ಲವೇ ಮೆಟ್ರೋ ನಿಲ್ದಾಣಕ್ಕೆ ತೆರಳಲು ವಿಶೇಷ ಮಾರ್ಗ ಇಲ್ಲ. ಇರುವ ಹಾಲಿ ಮಾರ್ಗದಲ್ಲಿ ವಿಶೇಷಚೇತನರಿಗೆ ಕಷ್ಟವಾಗತ್ತಿದೆ. ಈ ಸಮಸ್ಯೆ ಕುರಿತು ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕಿದೆ ಎಂದು ಮನವಿ ಮಾಡಿದ್ದಾರೆ.

English summary
BMTC will operating special buses for disability communities, already started receiving buses under fame project,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X