ಆರ್ಥಿಕ ಸಂಕಷ್ಟ,ಬಸ್ ನಿಲ್ದಾಣವನ್ನೇ ಅಡವಿಟ್ಟ ಬಿಎಂಟಿಸಿ
ಬೆಂಗಳೂರು,ಫೆಬ್ರವರಿ 09: ಬಿಎಂಟಿಸಿಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಶಾಂತಿನಗರ ಟಿಟಿಎಂಸಿಯನ್ನು ಅಡವಿಟ್ಟಿದೆ.
ಹಾಗಾದರೆ ಬಿಎಂಟಿಸಿ ಮಾಡಿದ್ದ ಸಾಲವೆಷ್ಟು ಎಂದು ನೋಡುವುದಾದರೆ, 160 ಕೋಟಿ ರೂ. ಹೌದು 160 ಕೋಟಿ ರೂ ಸಾಲಕ್ಕೆ ಬಸ್ ನಿಲ್ದಾಣವನ್ನೇ ಅಡವಿಟ್ಟಿದೆ.
ಈಡೇರದ ಬೇಡಿಕೆ,ಫೆ.10ರಿಂದ ಮತ್ತೆ ಸಾರಿಗೆ ಮುಷ್ಕರ
ಪ್ರತಿ ತಿಂಗಳು 1.04 ಕೋಟಿ ರೂ ಹಣವನ್ನು ಬಡ್ಡಿಯಾಗಿ ಪಾವತಿಸುತ್ತಿದೆ.ಸಿಬ್ಬಂದಿಯ ಪಿಎಫ್, ವಿಮೆ ಹಾಗೂ ಇನ್ನಿತರೆ ಬಾಕಿ ಹಣ ಪಾವತಿಗೆ ಹಣವಿಲ್ಲದೆ ಬಿಎಂಟಿಸಿಯು ಸಂಕಷ್ಟಕ್ಕೆ ಸಿಲುಕಿತ್ತು.
ಹೀಗಾಗಿ 2019ರಲ್ಲಿ 160 ಕೋಟಿ ರೂ ಸಾಲ ಕೋರಿ ಟೆಂಡರ್ ಕರೆದಿತ್ತು. ಆದರೆ ಯಾವುದೇ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್ ಸಾಲ ನೀಡದ ಕಾರಣ ಟಿಟಿಎಂಸಿ ಕಟ್ಟಡವನ್ನು ಅಡವಿಟ್ಟು ಸಾಲ ಪಡೆದಿತ್ತು.
2019ರ ಅಕ್ಟೋಬರ್‌ನಿಂದ 2021ರ ಜನವರಿವರೆಗೆ ಬಿಎಂಟಿಸಿ ಎಷ್ಟು ಸಾಲ ಮಾಡಿದೆ ಎನ್ನುವುದರ ಕುರಿತು ಆನಂದ್ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿದ್ದರು.
ಅದಕ್ಕೆ ಉತ್ತರ ದೊರೆತಿದೆ. ಈ ಅರ್ಜಿಗೆ ಬಿಎಂಟಿಸಿ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಜ.28ರಂದು ಉತ್ತರ ನೀಡಿದ್ದಾರೆ. ಅದರಲ್ಲಿ ಕೇಳಿದ ಅವಧಿಯಲ್ಲಿ ಒಟ್ಟು 160 ಕೋಟಿ ರೂ ಸಾಲವನ್ನು ಕೆನರಾ ಬ್ಯಾಂಕ್‌ನಿಂದ ಪಡೆಯಲಾಗಿದೆ.
ಸಾಲಕ್ಕೆ 1.04 ಕೋಟಿ ರೂ ಪ್ರತಿ ತಿಂಗಳು ಬಡ್ಡಿ ಕಟ್ಟುತ್ತಿದ್ದಾರೆ, ಈ ಸಾಲಕ್ಕಾಗಿ ಶಾಂತಿನಗರ ಟಿಟಿಎಂಸಿಯನ್ನು ಅಡವಿಡಲಾಗಿದೆ ಎಂಬುದರ ಕುರಿತು ಮಾಹಿತಿ ದೊರೆತಿದೆ.
ಇದೀಗ ಕೊರೊನಾ ಸೋಂಕು, ಕೊರೊನಾ ಲಾಕ್‌ಡೌನ್‌ನಿಂದಾಗಿ ಬಿಎಂಟಿಸಿಗೆ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ. ಎಸಿ ಬಸ್‌ಗಳು ಹಾಗಿರಲಿ ಸಾಮಾನ್ಯ ಬಸ್‌ಗಳಲ್ಲಿಯೇ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.