ಕೆಆರ್‌ ಮಾರ್ಕೆಟ್ ಬಳಿ, ವೃದ್ಧೆಯ ಕಾಲ ಮೇಲೆ ಹರಿದ ಬಿಎಂಟಿಸಿ ಬಸ್

ಬೆಂಗಳೂರು, ಜನವರಿ 9: ಬಿಎಂಟಿಸಿ ಚಾಲಕರ ಅವಾಂತರ ನಗರದಲ್ಲಿ ಮುಂದುವರೆದಿದೆ.ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಕಂಗಾಲಾಗಿರುವ ಬೆನ್ನಲ್ಲೇ ಕೆಆರ್‌ ಮಾರುಕಟ್ಟೆ ಬಿಎಂಟಿಸಿ ನಿಲ್ದಾಣದಲ್ಲಿ ಅವಗಢವೊಂದು ಸಂಭವಿಸಿದೆ.

ನಿಲ್ದಾಣದಿಂದ ಬಸ್‌ನ್ನು ಹೊರ ತೆಗೆಯುತ್ತಿರುವಾಗ ಅಲ್ಲೇ ಕುಳಿತಿದ್ದ ವೃದ್ಧೆಯ ಕಾಲಿನ ಮೇಲೆ ಬಸ್ ಹರಿದಿದೆ. ಇದರಿಂದ ವೃದ್ಧೆ ತೀವ್ರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೃದ್ಧೆಯ ಜೀವಕ್ಕೇ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ವೃದ್ಧೆ ತೀವ್ರ ಗಾಯಗೊಂಡಿರುವುದು ಖಚಿತವಾಗಿದೆ.

ನಿಲ್ದಾಣದಲ್ಲಿ ಹಾಜರಿದ್ದ ಇತರೆ ಪ್ರಯಾಣಿಕರು ಚಾಲಕನ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೃದ್ಧೆಯ ಕಾಲ ಮೇಲೆ ಬಸ್‌ ಹರಿಯುತ್ತಿದ್ದಂತೆ ಬಿಎಂಟಿಸಿ ಬಸ್ ಚಾಲಕ ಬಸ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದ, ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದಾರೆ.

BMTC rushed on Old woman in KR Market

ಇನ್ನು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ಮೇಲೆ ಕಲ್ಲು ತೂರಾಟ ನಡೆಸಿರುವ ಹಿನ್ನೆಲೆಯಲ್ಲಿ ಬಸ್‌ಗಳ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಮೆಜೆಸ್ಟಿಕ್‌ಗೆ ಬಂದ ಪ್ರಯಾಣಿಕರು ಪರದಾಡುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+