BMTC: ಮತ್ತಷ್ಟು ಮೆಟ್ರೋ ಫಿಡರ್ ಬಸ್‌ಗಳ ಸಂಚಾರ ಆರಂಭ, 3 ಮಾರ್ಗಗಳ ವಿವರ
ಬೆಂಗಳೂರು: ಬೆಂಗಳೂರು ಪ್ರಯಾಣಿಕರು ಇನ್ನು ಮುಂದೆ ಸಕಾಲಕ್ಕೆ ಮೆಟ್ರೋ ನಿಲ್ದಾಣಕ್ಕೆ ತೆರಳಲು ಮತ್ತು ನಿಲ್ದಾಣಗಳಿಂದ ಮನೆಯತ್ತ ತೆರಳಲು ಮತ್ತಷ್ಟು ಸುಲಭವಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಹಕಾರದಲ್ಲಿ ಮತ್ತಷ್ಟು ಹೊಸ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಪ್ರಾರಂಭಿಸಿವೆ. ಅವುಗಳ ಮಾರ್ಗ, ಹೊಡುವ ಸಮಯ, ಮಾಹಿತಿ ಇಲ್ಲಿದೆ.
ಮೆಟ್ರೋ ಪ್ರಯಾಣಿಕರಿಗೆ ಸುಗಮ ಮತ್ತು ಪರಿಣಾಮಕಾರಿ ಕೊನೆಯ ಮೈಲಿ ಸಂಪರ್ಕವನ್ನು ಒದಗಿಸುವ ಉದ್ದೇಶದಿಂದ ಬಿಎಂಟಿಸಿ ಫಿಡರ್ ಬಸ್ ಸೇವೆಗಳು ಮೆಟ್ರೋ ನಿಲ್ದಾಣಗಳಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸಂಪರ್ಕ ಸುಧಾರಿಸಲಿವೆ. ಜನಸಾಮಾನ್ಯರಿಗೆ ಸಾರಿಗೆ ಅನುಕೂಲ ಒದಗಿಸಿವೆ. ಬಿಎಂಟಿಸಿ ವತಿಯಿಂದ ಆರಂಭಿಸಲಾದ ಮೆಟ್ರೋ ಫೀಡರ್ ಬಸ್ ಸೇವೆಗಳ ಮಾರ್ಗ ಹಾಗೂ ಸಮಯ ಇಲ್ಲಿದೆ.

ಬಿಎಂಟಿಸಿ ಮೆಟ್ರೋ ಫಿಡರ್ ಬಸ್‌ಗಳ ವಿವರ
1. ಜ್ಞಾನಭಾರತಿ ಮೆಟ್ರೋ ನಿಲ್ದಾಣ - ಭಾರತ್ ನಗರ 2ನೇ ಹಂತ: ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಮುದ್ದೆಯನಪಾಳ್ಯ ಜಂಕ್ಷನ್, ಭಾರತ್‌ನಗರ 1ನೇ ಹಂತ, ಬ್ಯಾಡರಹಳ್ಳಿ ಮಾರ್ಗದ ಮೂಲಕ ಸಂಚಾರ ಸೇವೆ ನೀಡಲಿವೆ.
* ಜ್ಞಾನಭಾರತಿ ಮೆಟ್ರೋ ನಿಲ್ದಾಣದಿಂದ ಹೊರಡುವ ಸಮಯ: ಬೆಳಗ್ಗೆ 06.25, 07.40, 08.50, 10.30 ಮಧ್ಯಾಹ್ನ 14.05, 15.05, 16.20, 18.10, 19.35, 20.55 ಗಂಟೆಗೆ ಬಸ್‌ಗಳು ಹೊರಡುತ್ತವೆ.
* ಭಾರತ್ ನಗರ ಎರಡನೇ ಹಂತದಿಂದ ಹೊರಡುವ ಸಮಯ: ಬೆಳಗ್ಗೆ 05.50, 07.00, 08.15, 09.30, 11.10, ಮಧ್ಯಾಹ್ನ 14.30, 15.40, 17.15, 18.50, 20.15.
2. ಕೆ.ಆರ್. ಪುರ ಮೆಟ್ರೋ ನಿಲ್ದಾಣ - ಸರ್ಜಾಪುರ ಸೇವೆ: ಮಹಾದೇವಪುರ ಜಂಕ್ಷನ್, ದೊಡ್ಡನೆಕ್ಕುಂದಿ ರೈಲು ನಿಲ್ದಾಣ, ಮಾರತ್ತಹಳ್ಳಿ ಸೇತುವೆ ಜಂಕ್ಷನ್, ಕಾಡುಬೀಸನಹಳ್ಳಿ, ದೇವರಬೀಸನಹಳ್ಳಿ, ದೊಡ್ಡಕನ್ನಳ್ಳಿ, ಕೊಡತಿ ಗೇಟ್, ಮುತ್ತನಲ್ಲೂರು ಕ್ರಾಸ್, ದೊಮ್ಮಸಂದ್ರ, ಯಮರೆ, ಸೋಂಪುರ ಗೇಟ್ ಮೂಲಕ ಫಿಡರ್ ಬಸ್ ಸೇವೆ ಪಡೆಯಬಹುದಾಗಿದೆ.
* ಕೆ.ಆರ್. ಪುರ ಮೆಟ್ರೋ ನಿಲ್ದಾಣದಿಂದ ಹೊರಡುವ ಸಮಯ: ಬೆಳಗ್ಗೆ 05.30, 06.50, 08:00, 08:40, 09.25, 10.10, 11.20, 11.35 ಮಧ್ಯಾಹ್ನ 13.15, 14.45, 15.25, 16.05, 16.50, 17.45, 19.10, 20.40 ಗಂಟೆಗೆ ಬಸ್‌ಗಳು ಹೊರಡುತ್ತವೆ.
* ಸರ್ಜಾಪುರದಿಂದ ಹೊರಡುವ ಸಮಯ: ಬೆಳಗ್ಗೆ 05.30, 06.50, 07.55, 08.40, 09.30, 10.10, 11.20, ಮಧ್ಯಾಹ್ನ 13.40, 14.25, 15.10, 16.00, 16.40, 17.40, 19.10, 20.40
3. ಟಿನ್ ಫ್ಯಾಕ್ಟರಿ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ) - ಬಿದರಹಳ್ಳಿ: ಈ ಮಾರ್ಗದ ಬಿಎಂಟಿಸಿ ಫಿಡರ್ ಬಸ್‌ಗಳು ಟಿ.ಟಿ.ಸಿ.ಪಾಳ್ಯ ಕ್ರಾಸ್, ಕಿತ್ತಗನೂರು, ಈಸ್ಟ್ ಪಾಯಿಂಟ್ ಕಾಲೇಜ್ ಬ್ಯಾಕ್ ಗೇಟ್ ಮೂಲಕ ಟಿನ್ ಫ್ಯಾಕ್ಟರಿಗೆ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ) ಸೇವೆ ನೀಡುತ್ತವೆ.
* ಟಿನ್ ಫ್ಯಾಕ್ಟರಿಯಿಂದ ಹೊರಡುವ ಸಮಯ: ಬೆಳಗ್ಗೆ 08.50, 10.50, ಮಧ್ಯಾಹ್ನ 12.25, 14.00, 16.00, 17.35
* ಬಿದರಹಳ್ಳಿಯಿಂದ ಹೊರಡುವ ಸಮಯ: ಬೆಳಗ್ಗೆ 08.00, 10.00, 11.35 ಮಧ್ಯಾಹ್ನ 13.10, 15.15, 16.45 ಗಂಟೆಗೆ ಬಸ್‌ಗಳು ಹೊರಡುತ್ತವೆ.
ಮೆಟ್ರೋ ಸಾರಿಗೆ ಪ್ರಯಾಣಿಕರು ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಈ ಮೆಟ್ರೋ ಫೀಡರ್ ಬಸ್ ಸೇವೆಗೆ ಸಿದ್ಧವಿರುತ್ತವೆ. ಇವುಗಳನ್ನು ಉಪಯೋಗಿಸಿ ಸುಲಭ, ಸುರಕ್ಷಿತ ಹಾಗೂ ಸಮಯಬದ್ಧ ಪ್ರಯಾಣವನ್ನು ಅನುಭವಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕೋರಿದೆ.












Click it and Unblock the Notifications