ತೀವ್ರ ಸ್ವರೂಪ ಪಡೆದ ಸಾರಿಗೆ ನೌಕರರ ಮುಷ್ಕರ: ಕೆಲವೇ ಬಸ್‌ಗಳ ಸಂಚಾರ

ಬೆಂಗಳೂರು, ಡಿಸೆಂಬರ್ 12: ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರು ಹಮ್ಮಿಕೊಂಡಿದ್ದ, ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಮೆಜೆಸ್ಟಿಕ್‌ನಿಂದ ಕೆಲವು ಬಿಎಂಟಿಸಿ ಬಸ್‌ಗಳು ಸಂಚಾರ ಆರಂಭಿಸಿವೆ. ಆದರೂ ಬಹುತೇಕ ಕಡೆಗಳಲ್ಲಿ ಇಂದೂ ಕೂಡ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಬಸ್‌ಗಳನ್ನು ಡಿಪೋದಲ್ಲಿ ಇರಿಸಿರುವ ಚಾಲಕರು ಮತ್ತು ನಿರ್ವಾಹಕರು ಪ್ರತಿಭಟನೆ ಮುಂದುವರೆಸಿದ್ದಾರೆ. ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎನನ್ಉವುದರಿಂದ ಹಿಡಿದು ಬೇರೆ ಬೇರೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸಧ್ಯಕ್ಕೆ ಪ್ರತಿಭಟನಾ ನಿರತ ಸಿಬ್ಬಂದಿಯ ಪ್ರತಿನಿಧಿಗಳ ಜತೆಗೆ ಸಂಧಾನಕ್ಕೆ ಗಂಭೀರ ಪ್ರಯತ್ನ ಮಾಡಿದಂತಿಲ್ಲ.ಸಾರಿಗೆ ನಿಗಮಗಳ ಕೆಲ ನೌಕರರು ಕರ್ತವ್ಯಕ್ಕೆ ಹಾಜರಾಗುವ ಮನಸು ಮಾಡಿದ್ದಾರೆ. ನಿನ್ನೆ ಕೂಡ ಕೆಲ ಕಡೆ ಬಸ್ಸುಗಳ ಸಂಚಾರ ಇತ್ತಾದರೂ ಅದರು ವಿರಳವಾಗಿತ್ತು. ಇವತ್ತು 38 ಬಿಎಂಟಿಸಿ ಬಸ್ಸುಗಳು ರಸ್ತೆಗಳಿದಿವೆ.

BMTC, KSRTC Bus Employees Strike Enters Second Day

ಮಧ್ಯಾಹ್ನದಷ್ಟರಲ್ಲಿ ಇನ್ನೂ ಹೆಚ್ಚಿನ ಬಸ್ಸುಗಳನ್ನ ಓಡಿಸುವ ನಿರೀಕ್ಷೆಯಲ್ಲಿ ಬಿಎಂಟಿಸಿ ಇದೆ.ಮೊನ್ನೆ ಬೆಂಗಳೂರಿನಲ್ಲಿ ರೈತರ ಪ್ರತಿಭಟನೆಗಳ ಜೊತೆ ಸಾರಿಗೆ ನೌಕರರೂ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದರು. ಕೆಲವೇ ನೂರು ಸಂಖ್ಯೆಯಲ್ಲಿ ನೌಕರರು ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೋಗಿದ್ದರು.

ಈ ವೇಳೆ ನೌಕರರ ಸಂಘದ ಮುಖಂಡರನ್ನು ಪೊಲೀಸರು ಬಂಧಿಸಿದ್ದು ಸಾರಿಗೆ ನೌಕರರನ್ನು ರೊಚ್ಚಿಗೆಬ್ಬಿಸಿತು. ನಿನ್ನೆ ಮುಷ್ಕರಕ್ಕೆ ಕರೆಕೊಟ್ಟರು. ಆದರೂ ಸರ್ಕಾರ ನೌಕರರ ಬೇಡಿಕೆಗಳಿಗೆ ಕಿವಿಗೊಟ್ಟಿಲ್ಲ.

ಸರ್ಕಾರ ಎಸ್ಮಾ ಅಸ್ತ್ರ ಪ್ರಯೋಗಿಸಲು ಅಣಿಯಾಗಿದೆ. ನೌಕರರೂ ಕೂಡ ಎಸ್ಮಾಗೆ ಬಗ್ಗದಿರಲು ನಿರ್ಧರಿಸಿದ್ದಾರೆ. ಈ ಹಗ್ಗ-ಜಗ್ಗಾಟ ಇವತ್ತಿಗೆ ಅಂತ್ಯವಾಗುತ್ತಾ ಕಾದುನೋಡಬೇಕು.

ಕೆಲ ಆಟೋ ಮತ್ತು ಖಾಸಗಿ ಬಸ್ಸುಗಳು ಅಸಹಾಯಕ ಪ್ರಯಾಣಿಕರಿಂದ ಮನಸ್ಸಿಗೆ ಬಂದಂತೆ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಿಲೋಮೀಟರ್​ಗೆ 100 ರೂನಂತೆ ಆಟೋ ಚಾಲಕರು ದರ ನಿಗದಿ ಮಾಡಿಕೊಂಡಿದ್ದಾರೆ. ಹನುಮಂತನಗರಕ್ಕೆ 400 ರೂ, ಬನ್ನೇರುಘಟ್ಟ ರಸ್ತೆ 900 ರೂ, ಬನಶಂಕರಿ 500, ಯಶವಂತಪುರ 600, ಎಲೆಕ್ಟ್ರಾನಿಕ್ ಸಿಟಿಗೆ 2,000 ರೂ ಹಣ ವಸೂಲಿ ಮಾಡುತ್ತಿದ್ದಾರೆನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+