BMTC ಡಿಜಿಟಲ್‌ ಪಾಸ್ ಪಡೆಯುವುದು ಇದೀಗ ಇನ್ನೂ ಸುಲಭ-ಹೇಗೆ?-ಇಲ್ಲಿದೆ ಮಾಹಿತಿ

BMTC: ರಾಜ್ಯ ರಾಜಧಾನಿ ಜನರ ಜೀವನಾಡಿ ಸಾರಿಗೆಯಾಗಿರುವ ಬಿಎಂಟಿಸಿ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಆಗಾಗ ವಿಶೇಷ ಬಸ್‌ಗಳ ಸೌಲಭ್ಯ ಸೇರಿದಂತೆ ಇನ್ನಿತರೆ ಯೋಜನೆಗಖನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ ಅತೀ ಸುಲಭವಾಗಿ ಡಿಜಿಟಲ್‌ ಪಾಸ್‌ ಪಡೆಯುವುದು ಹೇಗೆ ಎಂದು ತಿಳಿಸಿದೆ. ಇಲ್ಲಿದೆ ನೋಡಿ ಮಾಹಿತಿ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಗರದ ಸಾರಿಗೆಯಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಾರೆ. ನುಸುಕಿನ ಜಾವದಿಂದಲೇ ಆರಂಭವಾದ ಬಿಎಂಟಿಸಿ ಬಸ್‌ಗಳು ನಿಲ್ಲುವುದು ರಾತ್ರಿ 12 ಆದರೂ ಆಗಬಹುದು. ಇನ್ನೂ ಚಾಲಕ, ನಿರ್ವಾಹಕರಂತೂ ಪ್ರತಿನಿತ್ಯ ಕೆಲವು ಪ್ರಯಾಣಿಕರು ಕೊಡುವ ಕಾಟದಿಂದ ಬೇಸತ್ತಿರುತ್ತಿರುತ್ತಾರೆ. ಆದರೂ ಕೊನೆಗೆ ಎಲ್ಲಾ ಮರೆತು ಹಾಸಿಗೆ ಸಿಕ್ಕರೆ ನಿದ್ದೆಗೆ ಜಾರಿಬಿಡುತ್ತಾರೆ.

BMTC Know how to get Digital Pass

ಇನ್ನು ಬಿಎಂಟಿಸಿಯಲ್ಲಿ ಸಾಮಾನ್ಯ ಬಸ್‌ಗಳಿಂದ ಹಿಡಿದು, ವೋಲ್ವೋ, ವಜ್ರ ಬಸ್‌ಗಳು ಕೂಡ ಲಭ್ಯ ಇವೆ. ಮೊದಲೆಲ್ಲ ದಿನದ ಪಾಸ್‌ ವಾರದ ಪಾಸ್‌ ಹಾಗೂ ಮಾಸಿಕ ಪಾಸ್‌ಗಳನ್ನು ಪಡೆಯಲು ಪ್ರಯಾಣಿಕರು ಕ್ಯೂನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ದಿನಕಳೆದಂತೆ ಪ್ರಯಾಣಿಕರು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಟಿಕೆಟ್‌ ಪಡೆಯುವಂತಹ ವ್ಯವಸ್ಥೆ ಜಾರಿಯಾಯಿತು.

ಡಿಜಿಟಲ್‌ ಪಾಸ್ ಯಾವಾಗಿನಿಂದ ಆರಂಭ.?: ಇದೀಗ ಬಿಎಂಟಿಸಿ ದಿನದ ಪಾಸ್, ವಾರದ ಪಾಸ್ ಹಾಗೂ ತಿಂಗಳಿನ ಪಾಸ್‌ಗಳು ಪ್ರಯಾಣಿಕರಿಗೆ ಸುಲಭವಾಗಿ ದೊರಕುವಂತೆ ಮಾಡಲು ಮತ್ತು ನಗದು ರಹಿತ, ಕಾಗದ ರಹಿತ ವಹಿವಾಟಿಗಾಗಿ ಸೆಪ್ಟೆಂಬರ್ 15ರಿಂದ ಡಿಜಿಟಲ್‌ ವ್ಯವಸ್ಥೆಯಲ್ಲಿ ಮೊಬೈಲ್‌ ಆಪ್‌ ಮೂಲಕ ಬಸ್ ಪಾಸ್ ವಿತರಣೆ ಮಾಡಲು ನಿರ್ಧರಿಸಿದೆ.

ಡಿಜಿಟಲ್‌ ಪಾಸ್‌ ಪಡೆಯುವುದೇಗೆ.?: ಡಿಜಿಟಲ್‌ ಪಾಸ್‌ ಪಡೆಯಲು ಮೊಬೈಲ್‌ ಪ್ಲೇ ಸ್ಟೋರ್‌ನಲ್ಲಿ "ಟುಮಾಕ್ ಆ್ಯಪ್‌" (Tummoc App) ಡೌನ್‌ಲೋಡ್‌ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ದಿನದ ಪಾಸ್‌, ವಾರದ ಪಾಸ್‌, ಮಾಸಿಕ ಪಾಸ್‌ ಅನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ, ಸೆಲ್ಫಿ ಭಾವಚಿತ್ರ ಆಯ್ಕೆಗೆ ಕ್ಲಿಕ್ಕಿಸಬೇಕು. ನಂತರ ನಿಗದಿತ ಶುಲ್ಕ ಪಾವತಿಸಿದರೆ, ಬಸ್ ಪಾಸ್‌ ಲಭ್ಯವಾಗಲಿದೆ.

ಮೊಬೈಲ್‌ನಲ್ಲಿ ಡಿಜಿಟಲ್ ಪಾಸ್ ಪಡೆಯುವುದೇಗೆ.?

1. ಪ್ಲೇ ಸ್ಟೋರ್‌ನಲ್ಲಿ ಟುಮಾಕ್ ಆಪ್ (Tummoc app) ಡೌನ್ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು.
2. ದೈನಿಕ, ಸಾಪ್ತಾಹಿಕ, ಮಾಸಿಕ ಪಾಸ್ ಆಯ್ಕೆ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ, ಸೇಲ್ಫಿ ಭಾವಚಿತ್ರವನ್ನು ಕ್ಲಿಕ್ಕಿಸಬೇಕು.
3. ಪಾಸ್ ಪಡೆಯಲು ದೃಢೀಕರಿಸಿ, ಪಾಸಿನ ಮೊತ್ತವನ್ನು ಪಾವತಿಸಿದ ನಂತರ ಡಿಜಿಟಲ್ ಬಸ್ ಪಾಸ್ ಲಭ್ಯವಾಗುತ್ತದೆ.
4. ಡಿಜಿಟಲ್ ಪಾಸ್‌ನೊಂದಿಗೆ ಆಯ್ಕೆ ಮಾಡಿದ ಗುರುತಿನ ಚೀಟಿಯನ್ನು ಇಟ್ಟುಕೊಂಡು ಪ್ರಯಾಣ ಮಾಡಬವುದು.
5. ಬಸ್‌ಗಳಲ್ಲಿ ಅಂಟಿಸಿರುವ ಕ್ಯೂಆರ್ ಕೋಡ್ ಅನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ, ಪಾಸ್‌ನ ಮಾನ್ಯತೆಯನ್ನು ನಿರ್ವಾಹಕ ಸಿಬ್ಬಂದಿಗೆ ತೋರಿಸುವುದು.
6. ಹೆಚ್ಚಿನ ಮಾಹಿತಿಗಾಗಿ https://mybmtc.karnataka.gov.inಗೆ ಭೇಟಿ ನೀಡಬಹುದಾಗಿದೆ.

ಇನ್ನು ಈ ಡಿಜಿಟಲ್‌ ಪಾಸ್‌ನೊಂದಿಗೆ ಪ್ರಯಾಣಿಕರು, ನಿಗದಿತ ಗುರುತಿನ ಚೀಟಿ ತೋರಿಸಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಬಹುದಾಗಿದೆ. ಬಸ್‌ಗಳಲ್ಲಿ ಅಂಟಿಸಿರುವ ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಿ, ಪಾಸ್‌ನ ಮಾನ್ಯತೆಯನ್ನು ನಿರ್ವಾಹಕರಿಗೆ ತೋರಿಸಬೇಕೆಂದು ಬಿಎಂಟಿಸಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+