ಬಿಎಂಟಿಸಿ ಬಸ್‌ನಲ್ಲಿಯೇ ಸೈಕಲ್; 100 ಬಸ್‌ಗಳಲ್ಲಿ ಜಾರಿ
ಬೆಂಗಳೂರು, ಆಗಸ್ಟ್ 09: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಯಾಣಿಕರನ್ನು ಆಕರ್ಷಿಸಲು ಸೈಕಲ್ ಮೊರೆ ಹೋಗಿದೆ. ಹೌದು, 100 ಬಸ್‌ಗಳಿಗೆ ಪ್ರಾಯೋಗಿಕವಾಗಿ ಸೈಕಲ್ ಸ್ಟ್ಯಾಂಡ್ ಅಳವಡಿಕೆ ಮಾಡಲಾಗಿದೆ.
ಬಿಎಂಟಿಸಿ ಬಸ್ ಇಳಿಯುವ ಪ್ರಯಾಣಿಕರು ಸೈಕಲ್ ಮೂಲಕ ಸಂಚಾರ ನಡೆಸಬಹುದಾಗಿದೆ. 100 ಬಸ್‌ಗಳಲ್ಲಿ ಸ್ಟ್ಯಾಂಡ್ ಅಳವಡಿಕೆ ಮಾಡಲಾಗಿದ್ದು, ಒಂದು ಬಸ್‌ನಲ್ಲಿ 2 ಸೈಕಲ್ ಇರುತ್ತದೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಿಬ್ಬಂದಿಗಳಿಗೆ ಭರ್ಜರಿ ಗುಡ್ ನ್ಯೂಸ್
ಬೆಂಗಳೂರು ನಗರದಲ್ಲಿ ಸೈಕಲ್ ಮೂಲಕ ಸಂಚಾರ ನಡೆಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಕೋವಿಡ್ ಲಾಕ್ ಡೌನ್ ಜಾರಿಗೊಂಡ ಮೇಲೆ ಸೈಕಲ್ ಬಳಕೆ ಅಧಿಕವಾಗಿದೆ. ಆದ್ದರಿಂದ, ಬಿಎಂಟಿಸಿಯೂ ಸೈಕಲ್ ಮೊರೆ ಹೋಗಿದೆ.
ಲಾಕ್‌ಡೌನ್: ಬಿಎಂಟಿಸಿ ಸಿಬ್ಬಂದಿಗೆ ಸರ್ಕಾರದಿಂದ ಗಿಫ್ಟ್!
ಬಿಎಂಟಿಸಿ ಮೊದಲ ಹಂತದಲ್ಲಿ ರಿಂಗ್ ರಸ್ತೆಯಲ್ಲಿ ಸಂಚಾರ ನಡೆಸುವ ಬಸ್‌ಗಳಲ್ಲಿ ಸೈಕಲ್ ಸ್ಟ್ಯಾಂಡ್ ಅಳವಡಿಕೆ ಮಾಡಿದೆ. ಇದು ಪ್ರಾಯೋಗಿಕವಾಗಿದ್ದು, ಮುಂದಿನ ಹಂತದಲ್ಲಿ ಎಲ್ಲಾ ಬಸ್‌ಗಳಲ್ಲಿಯೂ ಸ್ಟ್ಯಾಂಡ್ ಅಳವಡಿಕೆ ಮಾಡಲು ತೀರ್ಮಾನ ಮಾಡಲಾಗಿದೆ.
ಕಾಂಗ್ರೆಸ್ ಕಚೇರಿಗೆ ಹೋಗಲು ಕಾರು ಬಿಟ್ಟು ಸೈಕಲ್ ಏರಿದ ಸಿದ್ದರಾಮಯ್ಯ!
ಮುಂದಿನ ಹಂತದಲ್ಲಿ 99 ಬಸ್‌ಗಳಿಗೆ ಸೈಕಲ್ ಸ್ಟ್ಯಾಂಡ್ ಆಳವಡಿಕೆ ಮಾಡುವ ಆಲೋಚನೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೈಕಲ್ ಪಡೆದುಕೊಳ್ಳುವುದು ಹೇಗೆ? ಎಂಬ ಮಾಹಿತಿಯನ್ನು ನಿರ್ವಾಹಕರು ಪ್ರಯಾಣಿಕರಿಗೆ ನೀಡುತ್ತಾರೆ.