BMTC: ಬಿಎಂಟಿಸಿಯ ಇಂತಹ ಚಾಲಕರಿಗೆ ಶುಭಸುದ್ದಿ, ಏನದು?-ಇಲ್ಲಿದೆ ಮಾಹಿತಿ
ಬಿಎಂಟಿಸಿ ಬೆಂಗಳೂರು ಜನರ ಜೀವನಾಡಿ ಅಂತಲೇ ಹೆಸರುವಾಸಿಯಾಗಿದೆ. ಈ ಬಸ್‌ಗಳು ಪ್ರತಿನಿತ್ಯ ಲಕ್ಷಾಂತರ ಜನರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಕರೆದೊಯ್ಯುತ್ತವೆ. ಇದೀಗ ದಿನದ 24 ಗಂಟೆಯೂ ಸೇವೆ ಸಲ್ಲಿಸುವವರ ಸಾಲಿಗೆ ಈ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರೂ ಸೇರಲಿದ್ದು, ಇಂತಹ ಸೇವೆ ಸಲ್ಲಿಸಿದ ಚಾಲಕರಿಗೆ ನಿಗಮ ಗುಡ್ ನ್ಯೂಸ್‌ವೊಂದನ್ನು ನೀಡಿದೆ. ಆ ಶುಭಸುದ್ದಿ ಏನು ಅಂತೀರಾ ಇಲ್ಲಿದೆ ನೋಡಿ ಮಾಹಿತಿ.
ರಾಜ್ಯದ ರಾಜಧಾನಿ ಬೆಂಗಳೂರಿನ ಎಲ್ಲಾ ಕಡೆಗಳಿಗೂ ಸಂಚಾರ ಮಾಡುತ್ತಿರುವ ಬಿಎಂಟಿಸಿ ನಿಗಮ ಇಡೀ ದೇಶದಲ್ಲೇ ಒಂದೊಳ್ಳೆ ಸಾರಿಗೆ ಸೇವೆ ಎನ್ನುವ ಪ್ರಖ್ಯಾತಿ ಹೊಂದಿದೆ. ಈ ಪ್ರಖ್ಯಾತಿ ಗಳಿಸಲು ಪ್ರಮುಖ ಕಾರಣರಾದವರು ಬಸ್‌ನಲ್ಲಿ ಕಾರ್ಯ ನಿರ್ವಹಿಸುವ ಚಾಲಕರು ಹಾಗೂ ಕಾರ್ಯ ನಿರ್ವಾಹಕರು ಆಗಿದ್ದಾರೆ. ಬೆಂಗಳೂರಿನಂಹತ ಮಹನಗರದಲ್ಲಿನ ಟ್ರಾಫಿಕ್ ಜಂಜಾಟದಲ್ಲಿ ಬಸ್ ಈ ಬಸ್‌ಗಳನ್ನು ಓಡಿಸುವುದು ಸುಲಭದ ಮಾತಲ್ಲ.

ಅರ್ಜಿ ಸಲ್ಲಿಸಲು ಸೂಚನೆ: ತೀವ್ರ ಗತಿಯ ಟ್ರಾಫಿಕ್ ನಡುವೆಯೂ ಪ್ರಯಾಣಿಕರನ್ನು ಯಾವುದೇ ತೊಂದರೆ ಇಲ್ಲಿದ ತಮ್ಮ ಸ್ಥಳಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದ್ದರಿಂದ ಇಂತಹ ಚಾಲಕರನ್ನ ಗುರುತಿಸಿರುವ ಬಿಎಂಟಿಸಿ ಪ್ರಮೋಷನ್ ಭಾಗ್ಯವನ್ನು ಕಲ್ಪಿಸಿದೆ. 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಮುಂದುವರೆದಿರುವ 1,000 ಹೆಚ್ಚು ಚಾಲಕರಿಗೆ ಕೂಡಲೇ ಜಾರಿಯಾಗುವಂತೆ ಪ್ರಮೋಷನ್ ಕಲ್ಪಿಸಲಾಗಿದೆ. ಕೂಡಲೇ ಮುಂಬಡ್ತಿ ಅರ್ಜಿ ಸಲ್ಲಿಸುವಂತೆ ಬಿಎಂಟಿಸಿ ನಿಗಮ ಸುತ್ತೋಲೆಯಲ್ಲಿ ಬಿಎಂಟಿಸಿ ತಿಳಿಸಿದೆ.
ಹೆಚ್ಚುವರಿ ವೇತನದ ಬಗ್ಗೆ ಚರ್ಚೆ: ಬಿಎಂಟಿಸಿ ಹಿರಿಯ ಚಾಲಕರಿಗೆ ಮುಂಬಡ್ತಿ ಕುರಿತು ಈಗಾಗಲೇ ಬಿಎಂಟಿಸಿ ಅಧಿಕಾರಿಗಳು ಒಂದು ಸುತ್ತಿನ ಸಭೆ ನಡೆಸಿದ್ದು, ಸಭೆಯಲ್ಲಿ ಎಷ್ಟು ಚಾಲಕರಿದ್ದಾರೆ, ಅವರ ವೇತನ ಮತ್ತು ಕರ್ತವ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಮುಂಬಡ್ತಿದ ಪಡೆಯುವ ಚಾಲಕರಿಗೆ ಯಾವ ಯಾವ ಹುದ್ದೆ ನೀಡಬೇಕಾಬಹುದು, ಅವರಿಗೆ ಹೆಚ್ಚುವರಿ ವೇತನ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ಬಿಎಂಟಿಸಿ ಜನರಲ್ ಮ್ಯಾನೇಜರ್ ಸೇರಿ ಇನ್ನಿತರ ಹಿರಿಯ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಅಂತಿಮ ಆದೇಶ ಜಾರಿ ಮಾಡಿ ಸುತ್ತೋಲೆ ಹೊರಡಿಸಲಾಗಿದೆ. ಕೂಡಲೇ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಚಾಲಕರು ಕೂಡಲೇ ತಮ್ಮ ಹಾಜರಾತಿ ಮತ್ತು ಇತರೆ ಮಾಹಿತಿ ಜರೂರಾಗಿ ಸಲ್ಲಿಸುವಂತೆ ಕೋರಲಾಗಿದೆ.












Click it and Unblock the Notifications