ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಿಎಂಟಿಸಿಯಿಂದ ಸಿಹಿಸುದ್ದಿ
ಬೆಂಗಳೂರು, ಜನವರಿ 16: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ವಾರ್ಷಿಕ ಉಚಿತ ಬಸ್ ಪಾಸ್ ವಿತರಿಸುತ್ತಿದೆ.
ಸಹಾಯ ಹಸ್ತ ಪಾಸುಗಳನ್ನು ಪಡೆಯಲು ಯಾರು ಅರ್ಹರು:
-ಕಟ್ಟಡ ನಿರ್ಮಾಣ, ಮಾರ್ಪಾಡು, ರಿಪೇರಿ ಮತ್ತು ನಿರ್ವಹಣೆ, ಕಟ್ಟಡಗಳನ್ನು ಕೆಡವುದರ ಕಾಮಗಾರಿಗಳು.
-ಫ್ಲೋರಿಂಗ್ , ಫಾಲ್ಸ್ ಸೀಲಿಂಗ್ , ವಾಲ್ ಪ್ಯಾನಲಿಂಗ್ ಮುಂತಾದವುಗಳನ್ನು ಒಳಗೊಂಡ ಒಳಾಂಗಣ ವಿನ್ಯಾಸ.
-ಜಲ ಕಾಮಗಾರಿಗಳು, ಒಳಚರಂಡಿ ನಿರ್ಮಾಣ ಕಾಮಗಾರಿಗಳು
-ಕೂಲಿಂಗ್ ಮತ್ತು ಹೀಟಿಂಗ್ ಸಿಸ್ಟಂಗಳ ಸ್ಥಾಪನೆ ಮತ್ತು ಅಳವಡಿಕೆ
-ಕಬ್ಬಿಣ/ಲೋಹದ ಗ್ರಿಲ್‌ಗಳು, ಕಿಟಕಿ, ಬಾಗಿಲುಗಳ ಸ್ಥಾಪನೆ
-ಫಿಲಂ ಸೆಟ್‌ಗಳ ನಿರ್ಮಾಣ ಮತ್ತು ಅಳವಡಿಕೆ
-ಲಿಫ್ಟ್ ಎಸ್ಕಲೇಟರ್ ಇತ್ಯಾದಿಗಳ ಸ್ಥಾಪನೆ
-ಸಿಗ್ನೇಜ್, ರಸ್ತೆ ಪೀಠೋಪಕರಣಗಳು, ಬಸ್ ಆಶ್ರಯಗಳು, ಸ್ಟ್ಯಾಂಡ್, ಸಿಗ್ನಲಿಂಗ್ ಸಿಸ್ಟಂ ಮುಂತಾದವುಗಳ ನಿರ್ಮಾಣ.
-ಫ್ರೀ-ಫ್ಯಾಬ್ರಿಕೇಟೆಡ್ ಕಾಂಕ್ರೀಟ್ ಮಾಡ್ಯೂಲ್ಸ್ , ಕಾಂಕ್ರೀಟ್ ಬ್ರಿಕ್ಸ್ ಬ್ಲಾಕ್ಸ್ , ಹಾಲೋ ಬಾಕ್ಸ್, ಟೈಲ್ಸ್ ಮುಂದತಾದವುಗಳ ಅಳವಡಿಕೆ.

ದಾಖಲೆಗಳೇನು ಬೇಕು:
-ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಗುರುತಿನ ಚೀಟಿ.
-ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಮಿಕ ಅಧಿಕಾರಿಗಳು ನೀಡುವ ಬಸ್ ಪಾಸ್ ಮಂಜೂರಾತಿ ಆದೇಶ ಪತ್ರ.
-ಎರಡು ಸ್ಟಾಂಪ್ ಸೈಜ್ ಅಳತೆಯ ಭಾವಚಿತ್ರವನ್ನು ನೀಡಬೇಕು.
ಪಾಸುಗಳು ದೊರೆಯುವ ಸ್ಥಳ
ಪಾಸುಗಳು ದೊರೆಯುವ ನಿಲ್ದಾಣಗಳು
-ಯಲಹಂಕ ಹಳೇ ಬಸ್ ನಿಲ್ದಾಣ
-ಕೆಂಪೇಗೌಡ ಬಸ್ ನಿಲ್ದಾಣ
-ಶಾಂತಿನಗರ ಟಿಟಿಎಂಸಿ
-ಬನಶಂಕರಿ ಟಿಟಿಎಂಸಿ
-ದೊಮ್ಮಲೂರು ಟಿಟಿಎಂಸಿ
-ವೈಟ್‌ಫೀಲ್ಡ್ ಟಿಟಿಎಂಸಿ
-ಶಿವಾಜಿನಗರ ಬಸ್ ನಿಲ್ದಾಣ
-ಯಶವಂತಪುರ ಟಿಟಿಎಂಸಿ
-ಜಯನಗರ ಟಿಟಿಎಂಸಿ
-ಕೋರಮಂಗಲ ಟಿಟಿಎಂಸಿ
-ಹೊಸಕೋಟೆ ಬಸ್ ನಿಲ್ದಾಣ
-ಕೆಂಗೇರಿ ಟಿಟಿಎಂಸಿ
-ವಿಜಯನಗರ ಟಿಟಿಎಂಸಿ












Click it and Unblock the Notifications