ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೌಕರರ ವರ್ಗಾವಣೆ ಖಂಡಿಸಿ ಮೇ 9ಕ್ಕೆ ಬಿಎಂಟಿಸಿ ನೌಕರರ ಧರಣಿ

By Nayana
|
Google Oneindia Kannada News

ಬೆಂಗಳೂರು, ಮೇ 7: ಅಧಿಕಾರಿಗಳಿಂದ ನೌಕರರ ಮೇಲಿನ ಕಿರುಕುಳ ತಡೆ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರ ವರ್ಗಾವಣೆ, ಹಬ್ಬದ ಮುಂಗಡ ಹಣ ಪಾವತಿ, ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 9ರಂದು ಬಿಎಂಟಿಸಿ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್‌ ಫೆಡರೇಷನ್ ತೀರ್ಮಾನಿಸಿದೆ.

ಮಾ.20ರಂದು ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ ನಡೆಸಲು ಸಂಘ ತೀರ್ಮಾನಿಸಿದ್ದಾಗ ಬಿಎಂಟಿಸಿವ್ಯವಸ್ಥಾಪಕ ನಿರ್ದೇಶಕರು ಸಂಧಾನ ಸಭೆ ನಡೆಸಿದ್ದರು. ಆ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಸೂಕ್ತ ನಡಾವಳುಇ ಹೊರಡಿಸದ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ವಿ. ಅನಂತಸುಬ್ಬರಾವ್ ತಿಳಿಸಿದ್ದಾರೆ.

ನಿರ್ಭಯಾ ನಿಧಿ: ಮಹಿಳೆಯರಿಗೆ ಬಿಎಂಟಿಸಿ ನಿಲ್ದಾಣಗಳಲ್ಲಿ ವಿಶ್ರಾಂತಿ ಕೊಠಡಿನಿರ್ಭಯಾ ನಿಧಿ: ಮಹಿಳೆಯರಿಗೆ ಬಿಎಂಟಿಸಿ ನಿಲ್ದಾಣಗಳಲ್ಲಿ ವಿಶ್ರಾಂತಿ ಕೊಠಡಿ

ಸಂಘದ ಸದಸ್ಯತ್ವ ಹೊಂದಿರುವ ನೌಕರರನ್ನು ಮಾತೃ ವಿಭಾಗದಿಂದ ಇತರೆ ವಿಭಾಗಗಳಿಗೆ ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಲಾಗಿದೆ. ಆದರೆ, ಕೆಎಸ್‌ಆರ್‌ಟಿಸಿ ಇತ್ತೀಚೆಗೆ ಹೊರಡಿಸಿರುವ ಆದೇಶದಲ್ಲಿ ಕೋರಿಗೆ ವರ್ಗಾವಣೆ ಎಂದು ಉಲ್ಲೇಖಿಸಲಾಗಿದೆ. ಇದರಿಂದಾಗಿ ನೌಕರರು ಜ್ಯೇಷ್ಠತೆ ಕಳೆದುಕೊಳ್ಳುತ್ತಿದ್ದಾರೆ.

BMTC employees will go on strike on May 9

ಮೈಸೂರು ಗ್ರಾಮಾಂತರ, ಹಾಸನ, ಮಂಗಳೂರು, ಪುತ್ತೂರು ವಿಭಾಗದಲ್ಲಿ ನೌಕರರು ವರ್ಗಾವಣೆಯಾದರೂ ಬಿಡುಗಡೆಗೊಳಿಸಲಾಗಿಲ್ಲ. ವರ್ಗಾವಣೆ ಗೊಂದಲಕ್ಕೆ ಶೀಘ್ರ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

English summary
Seeking amendment in transfer policy and other demands to be resolved, hundreds of BMTC employees will hold agitation on May 9 at in front of BMTC office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X