ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ನೌಕರರಿಗೆ ಕೊನೆಗೂ ಅಂತರ್ ನಿಗಮ ವರ್ಗಾವಣೆ ಭಾಗ್ಯ

|
Google Oneindia Kannada News

ಬೆಂಗಳೂರು, ನವೆಂಬರ್ 6: ಬಿಎಂಟಿಸಿ ನೌಕರರು ಬೇರೆ ನಿಗಮಗಳಿಗೆ ವರ್ಗಾವಣೆ ಮಾಡುವಂತೆ ಹಲವಾರು ವರ್ಷಗಳಿಂದ ಮನವಿ ಮಾಡುತ್ತಾ ಇದ್ದರೂ ಯಾವುದೇ ಪ್ರಯೋಜನೆಯಾಗಿರಲಿಲ್ಲ. ಆದರೆ ಇದೀಗ ಬಿಎಂಟಿಸಿ ನೌಕರರು ಅಂತರ್ ನಿಗಮದಲ್ಲೂ ಕರ್ತವ್ಯ ನಿರ್ವಹಿಸಬಹುದು ಎಂದು ಆದೇಶ ಹೊರ ಬಿದ್ದಿದೆ.

ಬಿಎಂಟಿಸಿಯಲ್ಲಿನ 2,237 ಸಿಬ್ಬಂದಿ ಅಂತರ್ ನಿಗಮ ವರ್ಗಾವಣೆಯಗೆ ಕಾಯುತ್ತಿದ್ದು, ಮೊದಲ ಹಂತವಾಗಿ 375 ಸಿಬ್ಬಂದಿಯನ್ನು ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಉಳಿದವರನ್ನು ಹಂತ ಹಂತವಾಗಿ ವರ್ಗಾವಣೆ ಮಾಡಲು ನಿಗಮ ನಿರ್ಧರಿಸಿದೆ.

ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ

ಮೊದಲ ಹಂತದಲ್ಲಿ 100 ಚಾಲಕ, 76 ನಿರ್ವಾಹಕ, 99 ಚಾಲಕ ಕಂ ನಿರ್ವಾಹಕ ಮತ್ತು 100 ತಾಂತ್ರಿಕ ಸಹಾಯಕರನ್ನು ಅವರು ಕೇಳಿರುವ ಸಾರಿಗೆ ನಿಗಮಗಳಿಗೆ ವರ್ಗಾಯಿಸಲಾಗಿದೆ.

BMTC employees to get inter corporation transfer finally

ಬೆಂಗಳೂರು: ಕಾರು-ಬಿಎಂಟಿಸಿ ನಡುವೆ ಡಿಕ್ಕಿ 3 ಸಾವು, ಇಬ್ಬರು ಗಂಭೀರ ಬೆಂಗಳೂರು: ಕಾರು-ಬಿಎಂಟಿಸಿ ನಡುವೆ ಡಿಕ್ಕಿ 3 ಸಾವು, ಇಬ್ಬರು ಗಂಭೀರ

ಬಿಎಂಟಿಸಿಯಿಂದ ಒಮ್ಮೆಲೇ ಎಲ್ಲ ಸಿಬ್ಬಂದಿ ವರ್ಗಾವಣೆಗೊಂಡರೆ ಸಿಬ್ಬಂದಿ ಕೊರತೆ ಎದುರಾಗಲಿದೆ. ಹೀಗಾಗಿ ಹೊಸ ನೇಮಕಾತಿ ಪ್ರಕ್ರಿಯೆ ನಡೆಸಿ ಹಂತಹಂತವಾಗಿ ಸಿಬ್ಬಂದಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಇಷ್ಟು ವರ್ಷಗಳ ಕಾಲ ಬಿಎಂಟಿಸಿ ನೌಕರರು ಬೆಂಗಳೂರಿನಲ್ಲಿಯೇ ಕೆಲಸ ಮಾಡಬೇಕಿತ್ತು ಆದರೆ ಇದೀಗ ಯಾವ ನಿಗಮದಲ್ಲಾದರೂ ಕೆಲಸ ಮಾಡಬಹುದು ಎನ್ನುವ ಆದೇಶ ಸಿಬ್ಬಂದಿಗಳಲ್ಲಿ ಸಂತಸ ಮೂಡಿಸಿದೆ.

English summary
Around 2237 BMTC employees will get transfer to inter corporation as 375 employees have already ensured orders on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X