BMTC: ವಿದ್ಯಾರ್ಥಿಗಳಿಗೆ BMTCಯಿಂದ Big Good news,ಏನದು?, ಮಾಹಿತಿ ತಿಳಿಯಿರಿ
ಬೆಂಗಳೂರು, ಡಿಸೆಂಬರ್, 03: ಸಾರಿಗೆ ವಿಭಾಗಗಳಲ್ಲಿ ಬೆಂಗಳೂರಿನ ಜೀವನಾಡಿಯಾಗಿರುರುವ ಬಿಎಂಟಿಸಿ ಆಗಾಗ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತಲೇ ಇರುತ್ತದೆ. ಹಾಗಯೇ ಇದೀಗ ತಿಂಗಳಿಗೆ 1,200 ರೂಪಾಯಿಗೆ ವಿದ್ಯಾರ್ಥಿಗಳು ಈಗ ಬಿಎಂಟಿಸಿಯ ಸಾಮಾನ್ಯ ಹಾಗೂ ವಜ್ರ (ವಿಮಾನ ನಿಲ್ದಾಣವಲ್ಲದ, ಎಸಿ ವೋಲ್ವೋ) ಬಸ್ ಸೇವೆಗಳಲ್ಲಿ ಎಷ್ಟು ಬಾರಿ ಬೇಕಾದರೂ ಪ್ರಯಾಣ ಮಾಡಬಹುದಾಗಿದೆ.
ವಿದ್ಯಾರ್ಥಿಗಳು ವಜ್ರ ಪಾಸ್‌ಗಳನ್ನು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. www.mybmtc.karnataka.gov.inನಿಂದ ವಿದ್ಯಾರ್ಥಿ ಬಸ್ ಪಾಸ್ ಅರ್ಜಿಯನ್ನು ಮುದ್ರಿಸಿ ಅದನ್ನು ಭರ್ತಿ ಮಾಡಿ ಮತ್ತು ಅವರ ಶಾಲೆ/ಕಾಲೇಜು ಪ್ರಾಂಶುಪಾಲರಿಂದ ದೃಢೀಕರಿಸಿ ಪಡೆಯಬಹುದಾಗಿದೆ.

ವಿದ್ಯಾರ್ಥಿಗಳು ದೃಢೀಕರಿಸಿದ ಪಾಸ್ ಅರ್ಜಿಯನ್ನು ಸಲ್ಲಿಸಬೇಕು. ಮತ್ತು ಈ ಕೆಳಗಿನ ಯಾವುದೇ ಸ್ಥಳಗಳಲ್ಲಿ ಅಗತ್ಯವಿರುವ ಶುಲ್ಕವನ್ನು ಪಾವತಿಸಬೇಕು. ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಬನಶಂಕರಿ ಟಿಟಿಎಂಸಿ, ಶಿವಾಜಿನಗರ ಬಸ್ ನಿಲ್ದಾಣ, ಕೆಂಗೇರಿ ಬಸ್ ಟರ್ಮಿನಲ್, ವೈಟ್‌ಫೀಲ್ಡ್ ಟಿಟಿಎಂಸಿ, ಕಾಡುಗೋಡಿ ಬಸ್ ನಿಲ್ದಾಣ, ಶಾಂತಿನಗರ ಟಿಟಿಎಂಸಿ, ದೊಮ್ಮಲೂರು ಟಿಟಿಎಂಸಿ, ಹೆಬ್ಬಾಳ್, ಎಲೆಕ್ಟ್ರಾನಿಕ್ಸ್ ಸಿಟಿ (ಡಿಪೋ 19), ಯಲಹಂಕ ಹಳೆಯ ಬಸ್ ನಿಲ್ದಾಣ, ಮತ್ತು ಸರ್ಜಾಪುರ ಬಸ್ ನಿಲ್ದಾಣ ಗಳಲ್ಲಿ ಅಗತ್ಯವಿರುವ ಶುಲ್ಕ ಪಾವತಿಸಿ ಪಡೆಯಬಹುದು.
ಮೆಟ್ರೋ ರೈಲು ಸೇವೆ ವಿಸ್ತರಣೆ
ಬೆಂಗಳೂರು ನಗರ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಹಬ್ಬಗಳು ಸೇರಿದಂತೆ ವಿಶೇಷ ಕಾರ್ಯಕ್ರಮಗಳ ಸಮದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ತಡೆಯುವ ಉದ್ದೇಶದಿಂದ ಮೆಟ್ರೋ ರೈಲುಗಳ ಸೇವೆಯನ್ನು ವಿಸ್ತರಣೆ ಮಾಡುತ್ತಲೇ ಬಂದಿದೆ. ಇದೀಗ ಮತ್ತೆ ನಾಳೆ (ಡಿಸೆಂಬರ್ 03)ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ- 20 ಪಂದ್ಯ ಇರುವ ಹಿನ್ನೆಲೆ ಮೆಟ್ರೋ ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಿದೆ. ಸಮಯಗಳು ಹಾಗೂ ಮಾರ್ಗಗಳ ವಿವರವನ್ನು ಇಲ್ಲಿ ತಿಳಿಯಿರಿ.
ಭಾನುವಾರ (ಡಿಸೆಂಬರ್ 3) ನಗರದ ಚಿನ್ನಸ್ಚಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯ ನಡುವೆ ಅಂತಿಮ ಟಿ-20 ಕದನ ನಡೆಯಲಿದ್ದು, ಈ ಹಿನ್ನೆಲೆ ಪಂದ್ಯ ವೀಕ್ಷಣೆ ಮಾಡಲು ಕ್ರಿಕೆಟ್ ಅಭಿಮಾನಿ ದಂಡೇ ಆಗಮಿಸುವ ನಿರೀಕ್ಷೆಯಿದೆ. ಆದ್ದರಿಂದ ಬೆಂಗಳೂರು ಮೆಟ್ರೋ ರೈಲು ನಿಗಮವು ಮೆಟ್ರೋ ರೈಲುಗಳ ಸೇವೆಯನ್ನು ವಿಸ್ತರಿಸಿದೆ.
ನಗರದ ವಿವಿದೆಢೆಯಿಂದ ಪಂದ್ಯವನ್ನು ವೀಕ್ಷಿಸಲು ಸಾರ್ವಜನಿಕರು, ಕ್ರಿಕೆಟ್ ಪ್ರೇಮಿಗಳು ಆಗಮಿಸಲಿದ್ದು, ಅವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ತನ್ನ ಆದೇಶ ಪತ್ರದಲ್ಲು ಮಾಹಿತಿ ನೀಡಿದೆ. ಬೈಯ್ಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ಸಂಚಾರ ಸೇವೆಯಲ್ಲಿ ವಿಸ್ತರಣೆ ಮಾಡಲಾಗಿದೆ. ರಾತ್ರಿ ಪಂದ್ಯವನ್ನು ಮುಗಿಸಿಕೊಂಡು ಯಾವುದೇ ಭೀತಿಯಿಲ್ಲದೆ ಆರಾಮಾಗಿ ಕ್ರೀಡಾ ಅಭಿಮಾನಿಗಳು ಮೆಟ್ರೋದಲ್ಲಿ ಪ್ರಯಾಣ ಮಾಡಬಹುದಾಗಿದೆ.
ನೇರಳೆ ಮತ್ತು 8 ಹಸಿರು ಮಾರ್ಗದಲ್ಲಿರುವ ರೈಲುಗಳ ಸೇವೆಯನ್ನು ರಾತ್ರಿ 11:45ರ ವರೆಗೆ ವಿಸ್ತರನೆ ಮಾಡಲಾದೆ. ಡಿಸೆಂಬರ್ 3ರಂದು ಪೇಪರ್ ಟಿಕೆಟ್ಗಳನ್ನು ಹಂಚಲಾಗುತ್ತದೆ ಎಂದು ತಿಳಿಸಿದೆ. ಬರುವ ಮತ್ತು ಹೋಗುವ ಪ್ರಯಾಣಕ್ಕೆ 50 ರೂಪಾಯಿ ಟಿಕೆಟ್ ನಿಗದಿಪಡಿಸಿ ಬೆಂಗಳೂರು ಮೆಟ್ರೋ ರೈಲು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲೂ ಪೇಪರ್ ಟಿಕೆಟ್ ಸಿಗಲಿದೆ. ಕಾರ್ಡ್ಗಳ ಜೊತೆಗೆ ಸ್ಮಾರ್ಟ್ ಕಾರ್ಡ್ ಹಾಗೂ ಎನ್ಸಿಎಂಸಿ ವ್ಯವಸ್ಥೆಯನ್ನು ಕೂಡ ಪ್ರಯಾಣಿಕರು ಉಪಯೋಗಿಸಬಹುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications