ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಳಿ, ನೀಲಿ ಬಣ್ಣದಲ್ಲಿ ಕಂಗೊಳಿಸಲಿವೆ ಬಿಎಂಟಿಸಿ ಬಸ್?

|
Google Oneindia Kannada News

ಬೆಂಗಳೂರು, ಜ. 5 : ಪ್ರಯಾಣ ದರ ಕಡಿಮೆ ಮಾಡುವ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಬಿಎಂಟಿಸಿ ತನ್ನ ಬಸ್ಸುಗಳ ಬಣ್ಣದ ಬಗ್ಗೆ ಚಿಂತನೆ ನಡೆಸುತ್ತಿದೆ. ಸಂಸ್ಥೆಯ ಎಲ್ಲಾ ಬಸ್ಸುಗಳಿಗೂ ಒಂದೇ ಬಣ್ಣ ಬಳಿಯುವ ಪ್ರಸ್ತಾವಪನ್ನು ಸಂಸ್ಥೆ ಸಿದ್ಧಪಡಿಸಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ)ಯ ಎಲ್ಲಾ ಬಸ್ಸುಗಳು ಬಿಳಿ ಮತ್ತು ನೀಲಿ ಬಣ್ಣದಲ್ಲಿ ಕಂಗೊಳಿಸಲಿವೆ. ಈಗಿರುವ ಕೆಂಪು, ಹಸಿರು ಮುಂತಾದ ಬಣ್ಣದ ಬಸ್ಸುಗಳಿಗೂ ಬಿಳಿ ಮತ್ತು ನೀಲಿ ಬಣ್ಣ ಬಳಿಯಲಾಗುತ್ತದೆ. [ಕರ್ನಾಟಕದ ಸಾರಿಗೆ ಸಂಸ್ಥೆಗಳ ನಷ್ಟ ಏನೂ ಅಲ್ಲಾ ಸ್ವಾಮಿ!]

BMTC

ಸಂಸ್ಥೆಯ ಎಲ್ಲಾ ಬಸ್ಸುಗಳು ಒಂದೇ ಬಣ್ಣದಲ್ಲಿರಲಿ ಎಂಬ ಕಾರಣಕ್ಕೆ ಬಿಎಂಟಿಸಿ ಇಂತಹ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿದ್ದು, ಇದು ಇನ್ನೂ ಮೊದಲ ಹಂತದಲ್ಲಿದೆ. ಪ್ರಸ್ತಾವನೆ ಅನ್ವಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಯು ವಜ್ರ ಬಸ್ ಹೊರತು ಪಡಿಸಿ ಉಳಿದ ಬಸ್ಸುಗಳು ಒಂದೇ ಬಣ್ಣದಲ್ಲಿ ಕಂಗೊಳಿಸಲಿವೆ. [ಆಹಾ ಬರುತಿದೆ ಬೆಂಗಳೂರು ದರ್ಶಿನಿ]

ಪ್ರಯಾಣಿಕರ ಬೇಡಿಕೆ : ಬಿಎಂಟಿಸಿ ಪ್ರಯಾಣಿಕರ ಬೇಡಿಕೆ ಅನ್ವಯ ಇಂತಹ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ ಎಂದು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಕೆಂಪು, ಹಸಿರು, ಬಿಳಿ ಮತ್ತು ನೀಲಿ ಹೀಗೆ ವಿವಿಧ ಬಣ್ಣದ ಬಸ್ಸುಗಳು ಸಂಚರಿಸುತ್ತಿವೆ. [ಈಡೇರಿಲ್ಲ ಪ್ರಯಾಣ ದರ ಇಳಿಕೆ ಭರವಸೆ]

ಇದರಿಂದ ಪ್ರಯಾಣಿಕರಿಗೆ ಗೊಂದಲ ಉಂಟಾಗುತ್ತಿದೆ. ಕೆಂಪು ಬಣ್ಣದ ಬಸ್ಸಿನಲ್ಲಿ ಹೆಚ್ಚು ದರವಿರಬೇಕು ಎಂದು ಪ್ರಯಾಣಿಕರು ಅದರಲ್ಲಿ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ವೋಲ್ವೋ ಬಸ್ಸುಗಳನ್ನು ಹೊರತು ಪಡಿಸಿ ಉಳಿದ ಬಸ್ಸುಗಳಿಗೆ ಬಿಳಿ ಮತ್ತು ನೀಲಿ ಬಣ್ಣ ಬಳಿಯಲು ನಿರ್ಧರಿಸಲಾಗಿದೆ.

ಈ ಪ್ರಸ್ತಾಪವಿನ್ನೂ ಮೊದಲ ಹಂತದಲ್ಲಿದ್ದು, ಸುಮಾರು 6,500 ಬಸ್ಸುಗಳನ್ನು ಹೊಂದಿರುವ ಸಂಸ್ಥೆಯಲ್ಲಿ ಇದಕ್ಕಾಗಿ ಎಷ್ಟು ಖರ್ಚಾಗಲಿದೆ. ಈ ಯೋಜನೆಯನ್ನು ಜಾರಿಗೆ ತರುವುದು ಹೇಗೆ? ಮುಂತಾದ ಲೆಕ್ಕಾಚಾರಗಳು ನಡೆಯುತ್ತಿವೆ. ಎಲ್ಲವೂ ಅಂತಿಮವಾದರೆ ಬಿಎಂಟಿಸಿ ಬಿಳಿ ಮತ್ತು ನೀಲಿ ಬಣ್ಣದೊಂದಿಗೆ ರಸ್ತೆಗಿಳಿಯಲಿದೆ.

English summary
Bangalore Metropolitan Transport Corporation (BMTC) may soon sport a single color if a proposal being worked out by the corporation is implemented. The proposal is bringing back the blue and white color for the all buses to create a uniformity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X