ಬಿಎಂಟಿಸಿ ಚಾಲಕ ವಿದ್ಯಾರ್ಥಿಗಳಿಂದ ತಪ್ಪಿಸಿಕೊಳ್ಳಬಹುದು ಆದರೆ ಕರ್ಮದಿಂದಲ್ಲ

ಬೆಂಗಳೂರು, ಮಾರ್ಚ್ 29: ರಾಜಾಜಿನಗರದ ಫ್ಲೈಓವರ್ ಬಳಿ ಒಂದು ದಿನದ ಹಿಂದಷ್ಟೇ ಬಿಎಂಟಿಸಿ ಬಸ್‌ ಒಂದು ಪಲ್ಟಿಯಾಗಿತ್ತು.

ಚಾಲಕ ತನ್ನ ಮಾರ್ಗ ಬಿಟ್ಟು ಪಾಸ್ ಇರುವ ವಿದ್ಯಾರ್ಥಿಗಳಿದ ತಪ್ಪಿಸಿಕೊಳ್ಳಲು ಬೇರೆ ಮಾರ್ಗವನ್ನು ಹಿಡಿದಿದ್ದರು ಎಂದು ತಿಳಿದುಬಂದಿದೆ. ಬಿಎಂಟಿಸಿ ಬಸ್ ಚಾಲಕರು ಫಾರಂ-4ಎಲ್ಲಿ ಸೂಚಿಸಿರುವ ಮಾರ್ಗದಲ್ಲಿಯೇ ಸಂಚರಿಸಬೇಕು. ನಿಯಮ ಉಲ್ಲಂಘಿಸಿ ಬೇರೆ ಮಾರ್ಗದಲ್ಲಿ ಸಂಚರಿಸಿದರೆ ಚಾಲಕರಿಗೆ ನೋಟಿಸ್ ನೀಡಲಾಗುತ್ತದೆ.

ಬಿಎಂಟಿಸಿಯು ಪ್ರತಿಯೊಂದು ಮಾರ್ಗಕ್ಕೂ ಫಾರಂ-4 ರೂಪಿಸಿದೆ. ಹಾಗಾಗಿ ಪ್ರತಿಯೊಬ್ಬ ಚಾಲಕನೂ ಫಾರಂ-4ರ ಪ್ರಕಾರವೇ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಬೇಕು. ಒಂದೊಮ್ಮೆ ಬೇರೆ ಮಾರ್ಗಗಳಲ್ಲಿ ತೆರಳಿದರೆ ನೋಟಿಸ್ ನೀಡಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

bmtc bus was not in proper route?

ರಾಜಾಜಿನಗರ ಒಂದನೇ ಹಂತದಲ್ಲಿ ನಡೆದ ಅಪಘಾತಕ್ಕೆ ಚಾಲಕನ ನಿರ್ಲಕ್ಷಯವೇ ಕಾರಣವೆಂಬುದು ಸಾಬೀತಾಗಿದೆ. ದುರಂತದಲ್ಲಿ ಚಾಲಕನಿಗೂ ಗಾಯವಾಗಿದ್ದು ಗುಣಮುಖನಾದ ಬಳಿಕ ವಿವರಣೆ ಪಡೆಯಲಾಗುವುದು. ನಿರ್ಲಕ್ಷಯ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು. ನಿಗದಿತ ಮಾರ್ಗದಲ್ಲಿ ತೆರಳದೆ ಬೇರೆ ಮಾರ್ಗದಲ್ಲಿ ಬಸ್ ಅನ್ನು ಕಾರ್ಯಾಚರಣೆಗೊಳಸಿರುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+