ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲು ನಿಲ್ದಾಣದಿಂದ ಬಿಎಂಟಿಸಿ ಬಸ್ ಎಲ್ಲಿಗೆ?; ವೇಳಾಪಟ್ಟಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 16 : ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸೋಮವಾರದಿಂದ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬಸ್ ಸೇವೆ ಆರಂಭಿಸಿದೆ. ಬಿಎಂಟಿಸಿ ಬಸ್ ಸಂಚಾರ ನಡೆಸುವ ಪ್ರದೇಶಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ. ಸಿ. ಮೋಹನ್, ಬಿಎಂಟಿಸಿ ಎಂಟಿ ಸಿ. ಶಿಖಾ ಬಿಎಂಟಿಸಿ ಬಸ್‌ ಸಂಚಾರಕ್ಕೆ ಸೋಮವಾರ ಚಾಲನೆ ನೀಡಿದರು. ಮೆಜೆಸ್ಟಿಕ್ ರೈಲು ನಿಲ್ದಾಣದ 3ನೇ ಗೇಟ್‌ನಿಂದ ಬಸ್ ಸಚಾರ ನಡೆಸಲಿದೆ.

ರೈಲ್ವೆ ನಿಲ್ದಾಣದಿಂದ ಬಿಎಂಟಿಸಿ ಬಸ್ ಸಂಚಾರ ಆರಂಭ ರೈಲ್ವೆ ನಿಲ್ದಾಣದಿಂದ ಬಿಎಂಟಿಸಿ ಬಸ್ ಸಂಚಾರ ಆರಂಭ

ಮೊದಲ ಹಂತದಲ್ಲಿ ಕಾಡುಗೋಡಿ, ಹೊಸಕೋಟೆ, ಅತ್ತಿಬೆಲೆ, ಸರ್ಜಾಪುರ, ಯಲಹಂಕ ಮತ್ತು ನಾಗವಾರಕ್ಕೆ ತಲಾ 9 ಬಸ್‌ಗಳಂತೆ 54 ಬಸ್‌ಗಳು ರೈಲು ನಿಲ್ದಾಣದಿಂದ ಸಂಚಾರ ನಡೆಸಲಿವೆ. ಬೆಳಗ್ಗೆ 6 ರಿಂದ ರಾತ್ರಿ 10.30ರ ತನಕ ಬಸ್‌ ಸಂಚಾರವಿರುತ್ತದೆ.

ದೆಹಲಿಯಲ್ಲಿ ಪೌರತ್ವ ಕಾಯ್ದೆಯ ಬೆಂಕಿಗೆ ಹೊತ್ತಿ ಉರಿದ ಬಸ್ ದೆಹಲಿಯಲ್ಲಿ ಪೌರತ್ವ ಕಾಯ್ದೆಯ ಬೆಂಕಿಗೆ ಹೊತ್ತಿ ಉರಿದ ಬಸ್

BMTC

ಬಿಎಂಟಿಸಿ ಬಸ್ ಸಂಚಾರಕ್ಕೆ ಜನರಿಂದ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಉಳಿದ ಪ್ರದೇಶಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಬಿಎಂಟಿಸಿ ಹೇಳಿದೆ. ಸೋಮವಾರದಿಂದಲೇ ರೈಲ್ವೆ ನಿಲ್ದಾಣದಿಂದ ಬಸ್ ಸೇವೆಯನ್ನು ಆರಂಭಿಸಲಾಗಿದೆ.

ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ ಕೊಟ್ಟ ಬಿಎಂಟಿಸಿ ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ ಕೊಟ್ಟ ಬಿಎಂಟಿಸಿ

ಇದೇ ಮೊದಲ ಬಾರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಸ್ಥಳಾವಕಾರದ ಕೊರತೆ ಕಾರಣ ಇಷ್ಟು ದಿನ ಬಸ್ ಸಂಚಾರವಿರಲಿಲ್ಲ. ಈಗ ನಿಲ್ದಾಣದ 3ನೇ ದ್ವಾರದ ಮೂಲಕ ಬಸ್‌ಗಳು ಸಂಚಾರ ನಡೆಸಲಿವೆ.

ರೈಲು ನಿಲ್ದಾಣದ 3ನೇ ದ್ವಾರ ಫ್ಲಾಟ್ ಫಾರ್ಮ್ ನಂಬರ್ 1ಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುತ್ತದೆ. ಅಲ್ಲಿಯೇ ರೈಲ್ವೆ ಇಲಾಖೆ ಟಿಕೆಟ್ ಕೌಂಟರ್ ಆರಂಭಿಸಿದ್ದು, ಜನರು ರೈಲ್ವೆ ಟಿಕೆಟ್ ಪಡೆಯಲು ಅನುಕೂಲ ಮಾಡಿಕೊಟ್ಟಿದೆ.

English summary
Bangalore Metropolitan Transport Corporation (BMTC) on December 16, 2019 began bus service from Krantiveera Sangolli Rayanna Railway station. Here are the routes and timings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X