ಬಸ್ ಬಿಡಲು ಜ್ಯೋತಿಷ್ಯ ಕೇಳಿದ ಬಿಎಂಟಿಸಿ ಚಾಲಕ: ಬಂದೊದಗಿದೆ ಸಂಕಷ್ಟ
Recommended Video

ಬೆಂಗಳೂರು, ಅಕ್ಟೋಬರ್ 9: ಬಸ್ ಬಿಡಲು ಜ್ಯೋತಿಷ್ಯ ಕೇಳಿದ ಬಿಎಂಟಿಸಿ ಚಾಲಕನಿಗೆ ಸಂಕಷ್ಟ ಬಂದೊದಗಿದೆ. ಮುಖ್ಯಮಂತ್ರಿಗಳು ಪ್ರಮಾಣ ವಚನ ಮಾಡುವಾಗ, ಬಜೆಟ್ ಮಂಡನೆಗೆ, ಸಂಪುಟ ವಿಸ್ತರಣೆಗೆ ಒಳ್ಳೆಯ ಗಳಿಗೆ ನೋಡಿದಂತೆ ಬಸ್ ಚಾಲನೆಗೂ ಗಳಿಗೆ ನೋಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜ್ಯೋತಿಷಿ ಮಾತು ಕೇಳಿ ಒಂದು ತಾಸಿಗೂ ಮೀರಿ ವಿಳಂಬವಾದ ಬಸ್ ಚಾಲನೆ ಮಾಡಿದ್ದರಿಂದ 15 ಜನರ ಜೀವ ಉಳಿಸಿದ್ದೇನೆ ಎನ್ನುವುದು ಚಾಲಕನ ಮಾತು. ಇದರಿಂದ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಂಸ್ಥೆಗೆ ನಷ್ಟ, ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಡಿಪೋ ಮ್ಯಾನೇಜರ್ ಚಾಲಕ ಯೋಗೀಶ್ಗೆ ನೋಟಿಸ್ ನೀಡಿದ್ದಾರೆ.
ಮೆಜೆಸ್ಟಿಕ್ನಿಂದ ಚನ್ನಮ್ಮ ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ತೆರಳಬೇಕಾಗಿದ್ದ ಪೂರ್ಣಪ್ರಜ್ಞ ಲೇಔಟ್ ಡಿಪೋ ಬಸ್ ಚಾಲಕ ಯೋಗೀಶ್ ಹೀಗೆ ಅವಾಂತರ ಮಾಡಿಕೊಂಡವರು. ಜ್ಯೋತಿಷಿಯನ್ನು ಕೇಳಿದಾಗ ಅವರು ರಾಹುಕಾಲ ಎಂದಿದ್ದಕ್ಕೆ ಸರಿಯಾದ ಸಮಯಕ್ಕೆ ಬಸ್ ಬಿಡದೆ ಒಂದು ಗಂಟೆ 20 ನಿಮಿಷ ತಡವಾಗಿ ಚಲಾಯಿಸಿದ್ದಾರೆ.

ಜ್ಯೋತಿಷ್ಯ ನಂಬುವ ಯೋಗೇಶ್ ಗೌಡ ಚಾಲನೆ ಮಾಡುವ ಬಸ್ ಬೆಳಗ್ಗೆ 6.15ಕ್ಕೆ ಬಸ್ ಘಟಕದಿಂದ ಹೊರಬೇಕಿತ್ತು. ಆದರೆ 1 ಗಂಟೆ 20 ನಿಮಿಷಕ್ಕೆ ಹೊರಟಿದೆ. ಪ್ರಯಾಣಿಕರಿಗೆ ತೊಂದರೆಯಾಗುವುದರ ಜತೆಗೆ ಬಿಎಂಟಿಸಿಗೆ ಸಹಜವಾಗಿಯೇ ನಷ್ ಉಂಟಾಗಿದೆ. ಇದರ ಪರಿಣಾಮ ಯೋಗೇಶ್ ಗೆ ನೋಟಿಸ್ ನೀಡಲಾಗಿದೆ.
ಈ ನೋಟಿಸ್ ಗೆ ಯೋಗೇಶ್ ನೀಡಿದ ಉತ್ತರ ನೋಡಿ ಹಿರಿಯ ಅಧಿಕಾರಿ ಹೌಹಾರುವಂತಾಗಿದೆ. ಜ್ಯೋತಿಷಿಯೊಬ್ಬರನ್ನು ಭೇಟಿ ಮಾಡಿದ್ದೆ ಅವರು ಬೆಳಗ್ಗೆ ಒಂದು ಗಂಟೆ ತಡವಾಗಿ ಹೊರಡಿ ರಾಹುಕಾಲ ಎಂದಿದ್ದರು. ಒಂದು ವೇಳೆ ಆ ಸಮಯಕ್ಕೆ ಬಸ್ ಡಿಪೋದಿಂದ ಹೊರ ತೆಗೆದರೆ ಅಪಘಾತವಾಗ 15 ಮಂದಿ ಮೃತಪಡುತ್ತಾರೆ ಎಂದು ಹೇಳಿದ್ದರು. ಹಾಗಾಗಿ ಒಂದು ಗಂಟೆ ತಡವಾಗಿದೆ ಇದರ ಹಿಂದೆ ಯಾವುದೇ ದುರುದ್ದೇಶ ಇಲ್ಲ ಎಂದಿದ್ದಾರೆ.












Click it and Unblock the Notifications