ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರದಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್: ನಾಲ್ವರಿಗೆ ಗಾಯ

|
Google Oneindia Kannada News

ಬೆಂಗಳೂರು, ಡಿಸೆಂಬರ್ 7: ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ನಾಲ್ವರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.

ಅತಿ ಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶವಾದ ಜಯನಗರದಲ್ಲಿ ವೇಗದಲ್ಲಿ ಬಂದ ಬಿಎಂಟಿಸಿ ಬಸ್‌ ಒಂದು ಜಯನಗರದ 46ನೇ ಕ್ರಾಸ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಸಾಫ್ಟ್‌ವೇರ್ ಎಂಜಿನಿಯರ್ ಸ್ನೇಹ ಸೇರಿದಂತೆ ಹಲವರಿಗೆ ಗಾಯಗಳಾಗಿವೆ.

ಮೆಜೆಸ್ಟಿಕ್‌ನಲ್ಲಿ ಬಿಎಂಟಿಸಿ ಬಸ್‌ ಹರಿದು ವ್ಯಕ್ತಿ ಸಾವು ಮೆಜೆಸ್ಟಿಕ್‌ನಲ್ಲಿ ಬಿಎಂಟಿಸಿ ಬಸ್‌ ಹರಿದು ವ್ಯಕ್ತಿ ಸಾವು

ಬಸ್ ಎಲೆಕ್ಟ್ರಾನಿಕ್ ಸಿಟಿಯಿಂದ ಬನಶಂಕರಿಗೆ ಮರಳುತ್ತಿತ್ತು, ಬಸ್‌ನಲ್ಲಿ ನಿಂತಿದ್ದವರೆಲ್ಲರೂ ಬಸ್‌ನಲ್ಲಿಯೇ ಕೆಳಗೆ ಬಿದ್ದಿದ್ದಾರೆ, ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಿಎಂಟಿಸಿ ಚಾಲಕ ಕೇವಲ ಎರಡು ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೆಜೆಸ್ಟಿಕ್‌ನಲ್ಲಿ ಬಸ್‌ ಹರಿದು ವ್ಯಕ್ತಿ ಸಾವು

ಮೆಜೆಸ್ಟಿಕ್‌ನಲ್ಲಿ ಬಸ್‌ ಹರಿದು ವ್ಯಕ್ತಿ ಸಾವು

ಮೆಜೆಸ್ಟಿಕ್‌ನಲ್ಲಿ ಚಲಿಸುತ್ತಿರುವ ಬಸ್‌ ಹತ್ತಲು ಹೋಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಇದೇ ರೀತಿ ಹಲವು ಬಸ್‌ ನಿಲ್ದಾಣಗಳಲ್ಲೂ ಇಂತಹ ಸಮಸ್ಯೆಯಾಗಿದೆ. ಬಸ್‌ ರಷ್‌ ಇದ್ದಾಗ ಬಸ್‌ ಏರುವುದು, ಬಸ್ ಚಲಿಸುತ್ತಿದ್ದಾಗ ಓಡಿ ಬಂದು ಹತ್ತುವುದು ಇದೆಲ್ಲವೂ ಅಪಾಯವನ್ನು ತಂದೊಡ್ಡುತ್ತವೆ.

ಬಸ್‌ ಚಾಲಕರಿಗೆ ಹೆಚ್ಚಿನ ತರಬೇತಿ ಅಗತ್ಯ

ಬಸ್‌ ಚಾಲಕರಿಗೆ ಹೆಚ್ಚಿನ ತರಬೇತಿ ಅಗತ್ಯ

ಬಸ್‌ ಚಾಲಕರಿಗೆ ಕೆಲಸಕ್ಕೆ ಸೇರಿದ ಬಳಿಕ ತಿಂಗಳುಗಳ ಕಾಲ ತರಬೇತಿಯನ್ನು ನೀಡಲಾಗುತ್ತದೆ ಆದರೂ ಅವಗಢಗಳು ಸಂಭವಿಸುತ್ತಿವೆ ಹಾಹಾಗಿ ಈಗ ಪ್ರಸ್ತುತ ಇರುವ ತರಬೇತಿ ಅವಧಿಯನ್ನು ಹೆಚ್ಚಿಸಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಇತಿಹಾಸ ಸೇರಿದ ಬಿಎಂಟಿಸಿಯ ಅತೀ ಉದ್ದದ ಮಾರ್ಗ 600ಇತಿಹಾಸ ಸೇರಿದ ಬಿಎಂಟಿಸಿಯ ಅತೀ ಉದ್ದದ ಮಾರ್ಗ 600

ಬಿಎಂಟಿಸಿ ಚಾಲಕರು ಇನ್ನು ಮೊಬೈಲ್‌ನಿಂದ ನಾಟ್‌ ರೀಚಬಲ್ ಕಡ್ಡಾಯ

ಬಿಎಂಟಿಸಿ ಚಾಲಕರು ಇನ್ನು ಮೊಬೈಲ್‌ನಿಂದ ನಾಟ್‌ ರೀಚಬಲ್ ಕಡ್ಡಾಯ

ಬಿಎಂಟಿಸಿ ಚಾಲಕರು ನವೆಂಬರ್ 15ರಿಂದ ಕರ್ತವ್ಯಕ್ಕೆ ಹಾಜರಾಗುವ ವೇಳೆ ಮೊಬೈಲ್ ಜೊತೆ ಇಟ್ಟುಕೊಳ್ಳುವಂತಿಲ್ಲ ಎಂದು ಬಿಎಂಟಿಸಿ ಆದೇಶವನ್ನು ಜಾರಿಗೊಳಿಸಿದೆ.

ಬಸ್ ಚಾಲಕರು ಕರ್ತವ್ಯದ ವೇಳೆ ಮೊಬೈಲ್ ಬಳಸುವುದು ಮತ್ತು ತಮ್ಮ ಬಳಿ ಇಟ್ಟುಕೊಳ್ಳುವುದನ್ನು ಬಿಎಂಟಿಸಿ ನಿರ್ಬಂಧಿಸಿದ್ದು ನ,15ರಿಂದ ಈ ಆದೇಶ ಜಾರಿಗೆ ಬರಲಿದೆ. ಬಸ್ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡುವುದು, ಬಳಸುವುದು ಅಪಾಯಕಾರಿ ಎಂದು ತಿಳಿದಿದ್ದರೂ ಚಾಲಕರು ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.

ನವೆಂಬರ್ 15ರ ನಂತರ ಚಾಲಕರು ಕರ್ತವ್ಯದ ವೇಳೆ ಮೊಬೈಲ್ ಬಳಸುವುದು ಕಂಡುಬಂದಲ್ಲಿ ಸೇವೆಯಿಂದ ಅಮಾನತುಗೊಳಿಸುವ ಎಚ್ಚರಿಕೆಯನ್ನು ಬಿಎಂಟಿಸಿ ನೀಡಿದೆ. ನಿರ್ವಾಹಕರು ಕರ್ತವ್ಯದ ವೇಳೆ ಮೊಬೈಲ್ ಬಳಸುವಂತಿಲ್ಲ, ಆದರೆ ತಮ್ಮ ಬಳಿ ಮೊಬೈಲ್ ಇಟ್ಟುಕೊಳ್ಳಬಹುದು ಎಂದು ತಿಳಿಸಿದೆ.

ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ

ರಾತ್ರಿ ಹೊತ್ತು ಬಸ್‌ ವೇಗ ಕಡಿಮೆ

ರಾತ್ರಿ ಹೊತ್ತು ಬಸ್‌ ವೇಗ ಕಡಿಮೆ

ರಾತ್ರಿ ಹೊತ್ತು ಟ್ರಾಫಿಕ್ ಕಡಿಮೆಯಾದಂತೆ ಬಸ್‌ಗಳ ವೇಗ ಹೆಚ್ಚಾಗುತ್ತದೆ ಹಾಗಾಗಿ ರಾತ್ರಿ ಹೊತ್ತು ಬಸ್ ವೇಗವನ್ನು ಕಡಿಮೆ ಮಾಡಿ ನಿಧಾನವಾಗಿ ಸಂಚರಿಸಿದರೆ ಕೆಲವು ಅಪಾಯಗಳನ್ನು ತಪ್ಪಿಸಬಹುದಾಗಿದೆ.

English summary
Traffic was thrown out of gear for a while around Jayanagar after a speeding BMTC bus crashed into a tree on Thursday evening.A 22-year-old software engineer, Sneha, a resident of JP Nagar, was injured while four other passengers escaped with minor injuries in the mishap.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X