Namma Metro; ವೈಟ್‌ಫೀಲ್ಡ್‌, ಕೆ. ಆರ್. ಪುರ ಮಾರ್ಗ, ಓಡಲಿವೆ 7 ರೈಲು

ಬೆಂಗಳೂರು, ಜನವರಿ 17; ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ವೈಟ್‌ಫೀಲ್ಡ್‌-ಕೆ. ಆರ್. ಪುರ ಮಾರ್ಗದಲ್ಲಿ 7 ಮೆಟ್ರೋ ರೈಲುಗಳನ್ನು ಓಡಿಸಲು ಉದ್ದೇಶಿಸಿದೆ. ಮಾರ್ಚ್‌ ವೇಳಗೆ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

ಅಕ್ಟೋಬರ್ ತಿಂಗಳಿನಿಂದಲೇ ರೀಚ್-1 ವಿಸ್ತರಿತ ಮಾರ್ಗದಲ್ಲಿ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ ನಡೆಸುತ್ತಿದೆ. 13 ಕಿ. ಮೀ. ಮಾರ್ಗದಲ್ಲಿ ವಾಣಿಜ್ಯ ಸಂಚಾರಕ್ಕೆ ಅಗತ್ಯವಿರುವ ಅಂತಿಮ ಪರಿಶೀಲನೆ ನಡೆಸಲಾಗುತ್ತಿದೆ. ಐಟಿ ಉದ್ಯೋಗಿಗಳಿಗೆ ಅತಿ ಉಪಯುಕ್ತವಾದ ನಮ್ಮ ಮೆಟ್ರೋ ಮಾರ್ಗ ಇದಾಗಿದೆ.

ರೈಲ್ವೆ ಸುರಕ್ಷತಾ ಆಯುಕ್ತರು ಅಂತಿಮ ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದ ಬಳಿಕ ವಾಣಿಜ್ಯ ಸಂಚಾರದ ದಿನಾಂಕ ನಿಗದಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯಿಂದ ಮಾರ್ಗವನ್ನು ಉದ್ಘಾಟನೆ ಮಾಡಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಈಗ ಮಾರ್ಗದಲ್ಲಿ ಕೇವಲ ಒಂದು ರೈಲಿನ ಮೂಲಕ ವಾಣಿಜ್ಯ ಸಂಚಾರ ನಡೆಸಲಾಗುತ್ತಿದೆ. ಫೆಬ್ರವರಿ ತಿಂಗಳಿನಿಂದ 2 ರೈಲು ಓಡಿಸಲು ತೀರ್ಮಾನ ಮಾಡಲಾಗಿದೆ.

ಶುಕ್ರವಾರ ರಾತ್ರಿ ಬೈಯಪ್ಪನಹಳ್ಳಿ ಡಿಪೋದಿಂದ ಪ್ರಾಯೋಗಿಕ ಸಂಚಾರಕ್ಕಾಗಿ ಮತ್ತೊಂದು ರೈಲನ್ನು ವೈಟ್‌ಫೀಲ್ಡ್‌ಗೆ ತೆಗೆದುಕೊಂಡು ಹೋಗಲಾಗಿದೆ. ಫೆಬ್ರವರಿ 8ರಿಂದ ಹೋಗುವ ಮತ್ತು ವಾಪಸ್ ಬರುವ ಎರಡೂ ಮಾರ್ಗದಲ್ಲಿಯೂ ರೈಲುಗಳು ಪ್ರಾಯೋಗಿಕವಾಗಿ ಓಡಿಸಲು ಬಿಎಂಆರ್‌ಸಿಎಲ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ವಾಣಿಜ್ಯ ಸಂಚಾರ ಆರಂಭವಾದ ಬಳಿಕ ಮಾರ್ಗದಲ್ಲಿ ಒಟ್ಟು 7 ರೈಲುಗಳು ಸಂಚಾರ ನಡೆಸಲಿವೆ.

ನಿಲ್ದಾಣಗಳ ವಿವರಗಳು

ನಿಲ್ದಾಣಗಳ ವಿವರಗಳು

ಬೆಂಗಳೂರು ನಗರದ ನಮ್ಮ ಮೆಟ್ರೋ ಯೋಜನೆಯ ರೀಚ್-1 ವಿಸ್ತರಿತ ಮಾರ್ಗ ವೈಟ್‌ಫೀಲ್ಡ್‌-ಕೆ. ಆರ್. ಪುರ ಆಗಿದೆ. ಈ ಮಾರ್ಗದಲ್ಲಿ ಬೆನ್ನಿಗಾನಹಳ್ಳಿ, ಕೆ. ಆರ್. ಪುರ, ಮಹದೇವಪುರ, ಗರುಡಾಚಾರ್‌ಪಾಳ್ಯ, ಹೂಡಿ ಜಂಕ್ಷನ್, ಸೀತಾರಾಮಪಾಳ್ಯ, ಕುಂದಲಹಳ್ಳಿ, ನಲ್ಲೂರು ಹಳ್ಳಿ, ಸತ್ಯಸಾಯಿ ಆಸ್ಪತ್ರೆ, ಪಟ್ಟಂದೂರು, ಅಗ್ರಹಾರ, ಕಾಡುಗೋಡಿ, ಚನ್ನಸಂದ್ರ ಮತ್ತು ವೈಟ್‌ಫೀಲ್ಡ್‌ ನಿಲ್ದಾಣಗಳಿವೆ.

ನಮ್ಮ ಮೆಟ್ರೋ ನೇರಳೆ ಮಾರ್ಗವಿದು

ನಮ್ಮ ಮೆಟ್ರೋ ನೇರಳೆ ಮಾರ್ಗವಿದು

ಈ ಮಾರ್ಗ ಐಟಿ ಉದ್ಯೋಗಿಗಳಿಗೆ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ. ವೈಟ್‌ಫೀಲ್ಡ್‌ನಲ್ಲಿ ಮೆಟ್ರೋ ರೈಲು ಹತ್ತಿದರೆ ಕೆಂಗೇರಿ ತನಕ ಸಾಗಬಹುದಾಗಿದೆ. ಆದ್ದರಿಂದ ಈ ಮಾರ್ಗದಲ್ಲಿ ಹೆಚ್ಚಿನ ಜನರು ಸಂಚಾರ ನಡೆಸಲಿದ್ದಾರೆ, ಆದಾಯವೂ ಏರಿಕೆಯಾಗಲಿದೆ ಎಂದು ಬಿಎಂಆರ್‌ಸಿಎಲ್‌ ಅಂದಾಜಿಸಿದೆ.

ಮೊದಲು ಈ ಮಾರ್ಗದಲ್ಲಿ 7 ರೈಲುಗಳನ್ನು ಓಡಿಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ. ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಹೆಚ್ಚಿನ ರೈಲುಗಳನ್ನು ಈ ಮಾರ್ಗಕ್ಕೆ ನಿಗದಿ ಮಾಡಲಾಗುತ್ತದೆ.

ಪ್ರಾಯೋಗಿಕ ಸಂಚಾರದ ಮಾಹಿತಿ

ಪ್ರಾಯೋಗಿಕ ಸಂಚಾರದ ಮಾಹಿತಿ

ವೈಟ್‌ಫೀಲ್ಡ್‌-ಕೆ. ಆರ್. ಪುರ ಮಾರ್ಗದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಬಿಎಂಆರ್‌ಸಿಎಲ್ 3.5 ಕಿ. ಮೀ. ಉದ್ದದ ಪ್ರಾಯೋಗಿಕ ಸಂಚಾರ ಆರಂಭಿಸಿತ್ತು. ಒಂದೇ ರೈಲು ಸಂಚಾರ ನಡೆಸುತ್ತಿದೆ. ಫೆಬ್ರವರಿ 8ರ ಬಳಿಕ ಈ ಮಾರ್ಗದಲ್ಲಿ ಎರಡು ರೈಲುಗಳನ್ನು ಓಡಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. ಒಟ್ಟು 13 ಕಿ. ಮೀ. ಮಾರ್ಗವಿದಾಗಿದ್ದು, ಮಾರ್ಚ್ 10ರ ಬಳಿಕ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ಈ ಮಾರ್ಗದಲ್ಲಿ ಕೆಲವು ನಿಲ್ದಾಣಗಳ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹಳಿಗಳನ್ನು ಹಾಕುವ ಕಾಮಕಾರಿ ಪೂರ್ಣವಾಗಿದ್ದು, ಪ್ರಾಯೋಗಿಕವಾಗಿ ರೈಲುಗಳು ಓಡುತ್ತಿವೆ.

24 ನಿಮಿಷದಲ್ಲಿ ಸಂಚಾರ ನಿರೀಕ್ಷೆ

24 ನಿಮಿಷದಲ್ಲಿ ಸಂಚಾರ ನಿರೀಕ್ಷೆ

ವೈಟ್‌ಫೀಲ್ಡ್‌-ಕೆ. ಆರ್. ಪುರ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ಐಟಿ ಉದ್ಯೋಗಿಗಳು ಸಂಚಾರ ನಡೆಸುತ್ತಾರೆ. ಬಸ್, ಖಾಸಗಿ ವಾಹನದಲ್ಲಿ ಸಂಚಾರ ನಡೆಸಲು ಗಂಟೆಗಟ್ಟಲೇ ಬೇಕಾಗುತ್ತದೆ. ಆದರೆ ನಮ್ಮ ಮೆಟ್ರೋದಲ್ಲಿ ಕೇವಲ 24 ನಿಮಿಷದಲ್ಲಿ ಸಂಚಾರ ನಡೆಸಬಹುದು ಎಂಬುದು ನಿರೀಕ್ಷೆಯಾಗಿದೆ. ಬಿಎಂಟಿಸಿ ಎಲ್ಲಾ ನಿಲ್ದಾಣಗಳಿಂದ ಬಸ್ ಓಡಿಸಿ ಫೀಡರ್ ಸೇವೆ ನೀಡಲು ಸಹ ಚಿಂತನೆ ನಡೆಸಿದೆ. ವೈಟ್‌ಫೀಲ್ಡ್‌ನಿಂದ ಕೆಂಗೇರಿಗೆ ರಸ್ತೆ ಮೂಲಕ ಸಾಗಲು 2 ಗಂಟೆಗಳು ಬೇಕು ಎಂದು ಅಂದಾಜಿಸಲಾಗಿದೆ. ಮೆಟ್ರೋದಲ್ಲಿ 72 ನಿಮಿಷಗಳು ಸಾಕು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+