ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2 ಕಡೆ ಪಾದಚಾರಿ ಸುರಂಗ ಮಾರ್ಗ ಯೋಜನೆ ಕೈಬಿಟ್ಟ ಮೆಟ್ರೋ ನಿಗಮ

|
Google Oneindia Kannada News

ಬೆಂಗಳೂರು, ಮೇ 12: ನಗರದ ಎರಡು ಪ್ರತಿಷ್ಠಿತ ಮೆಟ್ರೋ ನಿಲ್ದಾಣದೆದುರು ಪಾದಚಾರಿ ಸುರಂಗ ಮಾರ್ಗ ನಿರ್ಮಿಸುವ ಕಾಮಗಾರಿಯನ್ನು ಕೈಬಿಟ್ಟು ಬದಲು ಸ್ಕೈವಾಕ್ ನಿರ್ಮಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.

ತುಮಕೂರು ರಸ್ತೆ ನಾಗಸಂದ್ರ ಹಾಗೂ ದಾಸರಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ಇಳಿಯುವವರು ರಸ್ತೆ ನಡುವಿನ ಬ್ಯಾರಿಕೇಡ್ ಹತ್ತಿ ದಾಟುತ್ತಿದ್ದಾರೆ. ಕಳೆದ ವರ್ಷ ಪಾದಚಾರಿಯೊಬ್ಬರು ಹೋಗೆ ರಸ್ತೆ ದಾಟಲು ಹೋಗಿ ಅಪಘಾತಕ್ಕೀಡಾಗಿದ್ದರು. ಈ ಘಟನೆ ಬಳಿಕ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಸ್ತೆ ದಾಟುವ ವ್ಯವಸ್ಥೆಯನ್ನು ಮಾಡಲು ಬಿಎಂಆರ್‌ಸಿಎಲ್ ಮುಂದಾಗಿತ್ತು.

ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್ ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್

ಮೊದಲು ಪಾದಚಾರಿ ಸುರಂಗ ಮಾರ್ಗವನ್ನು ನಿರ್ಮಾಣ ಮಾಡುವುದಾಗಿ ತಿಳಿಸಿತ್ತು. ಬಳಿಕ ಇದೀಗ ಸುರಂಗ ಮಾರ್ಗದ ಬದಲು ಸ್ಕೈವಾಕ್ ನಿರ್ಮಾಣಕ್ಕೆ ಮುಂದಾಗಿದೆ.

BMRCL will construct skywalks instead of padestrian tunnel

ದಾಸರಹಳ್ಳಿ, ನಾಗಸಂದ್ರ ನಿಲ್ದಾಣಗಳಲ್ಲಿ ಪ್ರತಿದಿನ ದುಮಾರು 30 ಸಾವಿರ ಪ್ರಯಾಣಿಕರು ಬಳಕೆ ಮಾಡುತ್ತಿದ್ದಾರೆ. ಎರಡು ಪಾದಚಾರಿ ಮಾರ್ಗಗಳನ್ನು 12.44 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು.

ಒಂದೊಮ್ಮೆ ಮೆಟ್ರೋ ಸ್ಮಾರ್ಟ್‌ಕಾರ್ಡ್ ವಾಪಸ್ ನೀಡಿದರೂ ಹಣ ಮಾತ್ರ ಸಿಗಲ್ಲ ಒಂದೊಮ್ಮೆ ಮೆಟ್ರೋ ಸ್ಮಾರ್ಟ್‌ಕಾರ್ಡ್ ವಾಪಸ್ ನೀಡಿದರೂ ಹಣ ಮಾತ್ರ ಸಿಗಲ್ಲ

ಪಾದಚಾರಿ ಸುರಂಗ ಮಾರ್ಗಕ್ಕಿಂತ ಸ್ಕೈವಾಕ್ ನಿರ್ಮಿಸುವುದು ಕಡಿಮೆ ವೆಚ್ಚದಾಯಕವೂ ಹೌದು ಸುರಕ್ಷತೆ ದೃಷ್ಟಿಯಿಂದಲೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮೆಟ್ರೋ ಹತ್ಬೇಕಾ ಹಾಗಾದರೆ ನಿಮ್ಮ ಸ್ಮಾರ್ಟ್‌ಕಾರ್ಡ್‌ನಲ್ಲಿ 50ರೂ ಇರ್ಲೇಬೇಕು ಮೆಟ್ರೋ ಹತ್ಬೇಕಾ ಹಾಗಾದರೆ ನಿಮ್ಮ ಸ್ಮಾರ್ಟ್‌ಕಾರ್ಡ್‌ನಲ್ಲಿ 50ರೂ ಇರ್ಲೇಬೇಕು

ಹಿಂದಿನಂತೆ ಸಿಮೆಂಟ್ ಸ್ಕೈವಾಕ್ ನಿರ್ಮಿಸುವ ಬದಲು ಕಬ್ಬಿಣದ ಹಲಗೆ ಆಧಾರ ಕಂಬಗಳನ್ನು ಜೋಡಿಸಿ ಬಿಬಿಎಂಪಿಯು ಸ್ಕೈವಾಕ್ ನಿರ್ಮಿಸುತ್ತಿದೆ ಅದೇ ಮಾದರಿಯಲ್ಲಿ ಬಿಎಂಆರ್‌ಸಿಎಲ್ ಕೂಡ ನಿರ್ಮಿಸಲು ಮುಂದಾಗಿದೆ.

English summary
BMRCL will construct skywalks instead of the padestrian tunnel in Nagavara and Dasara Halli metro station opposite.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X