Namma Metro: ನಮ್ಮ ಮೆಟ್ರೋ ಹಳದಿ ಮಾರ್ಗ, ಹೊಸ ವರ್ಷಕ್ಕೆ ಟೆಕ್ಕಿಗಳಿಗೆ ಗುಡ್‌ನ್ಯೂಸ್

ಬೆಂಗಳೂರು, ನವೆಂಬರ್ 27: ಉದ್ಯಾನ ನಗರಿ ಬೆಂಗಳೂರಿನಲ್ಲಿ ಜನರು ಬಹಳ ಕಾತರದಿಂದ ಕಾಯುತ್ತಿರುವ ನಮ್ಮ ಮೆಟ್ರೋ ಮಾರ್ಗ ಬೊಮ್ಮಸಂದ್ರ-ಆರ್‌.ವಿ. ರಸ್ತೆ. ನಮ್ಮ ಮೆಟ್ರೋ ಯೋಜನೆಯ ಹಳದಿ ಮಾರ್ಗವಾದ ಇದು 2025ರ ಆರಂಭದಲ್ಲಿ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ಈ ಮಾರ್ಗ ಆರಂಭವಾದರೆ ನಗರದ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಸಹಾಯಕವಾಗಲಿದ್ದು, ನಗರದ ಸಂಚಾರ ದಟ್ಟಣೆ ನಿವಾರಣೆಗೆ ಕೊಡುಗೆ ನೀಡಲಿದೆ ಎಂದು ಅಂದಾಜಿಸಲಾಗಿದೆ.

ಬೊಮ್ಮಸಂದ್ರ-ಆರ್‌.ವಿ. ರಸ್ತೆ ನಡುವಿನ 18.82 ಕಿ. ಮೀ. ಮಾರ್ಗದಲ್ಲಿ ಕಾಮಗಾರಿ ಮುಕ್ತಾಯಗೊಳ್ಳುತ್ತಿದ್ದು, ರೈಲುಗಳ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಈ ಮಾರ್ಗದಲ್ಲಿ ಬಿಎಂಆರ್‌ಸಿಎಲ್ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಓಡಿಸಲಿದೆ. ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ಸಹ ಇದ್ದು, ಈಗಾಗಲೇ ಫ್ಲೈ ಓವರ್‌ನ ಒಂದು ಬದಿ ವಾಹನ ಸಂಚಾರ ಆರಂಭವಾಗಿದೆ.

BMRCL To Run Three Trains In Yellow Line With Limited Capacity

ಓಡಲಿವೆ ಮೂರು ರೈಲು: ಸದ್ಯದ ಮಾಹಿತಿ ಪ್ರಕಾರ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ 2025ರ ಜನವರಿ ಅಂತ್ಯಕ್ಕೆ ಮೂರು ರೈಲುಗಳ ಮೂಲಕ ಬಿಎಂಆರ್‌ಸಿಎಲ್ ಸಂಚಾರವನ್ನು ಆರಂಭಿಸಲಿದೆ. ಈ ಮಾರ್ಗದಲ್ಲಿ ಸಂಚಾರಕ್ಕೆ ಸದ್ಯ ರೈಲುಗಳ ಕೊರತೆ ಇದ್ದು, ಮುಂದಿನ ವರ್ಷ ರೈಲುಗಳು ಬಿಎಂಆರ್‌ಸಿಎಲ್ ಕೈ ಸೇರಲಿವೆ.

ಡಿಸೆಂಬರ್‌ನಲ್ಲಿ ಒಂದು ರೈಲು, ಜನವರಿಯಲ್ಲಿ ಒಂದು ರೈಲು ಬೆಂಗಳೂರಿಗೆ ಬರಲಿದೆ ಎಂದು ಭರವಸೆ ಸಿಕ್ಕಿದೆ. ಆರು ಬೋಗಿಯ ಒಂದು ರೈಲು ಮೂಲಕ ಈಗ ಬೊಮ್ಮಸಂದ್ರ-ಆರ್‌.ವಿ. ರಸ್ತೆ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗುತ್ತಿದೆ. ಟಿಟಾಗರ್‌ನಿಂದ ಇನ್ನೂ ಎರಡು ಸೆಟ್ ರೈಲು ಬಂದ ಬಳಿಕ ಮಾರ್ಗದಲ್ಲಿ ಪರಿಶೀಲನೆಗೆ ರೈಲ್ವೆ ಸುರಕ್ಷತಾ ಆಯುಕ್ತರನ್ನು ಬಿಎಂಆರ್‌ಸಿಎಲ್ ಆಹ್ವಾನಿಸಲಿದೆ.

ಡಿಸೆಂಬರ್ ಅಂತ್ಯ ಅಥವ ಜನವರಿ ಮೊದಲ ವಾರದಲ್ಲಿ ಸುರಕ್ಷತಾ ಆಯುಕ್ತರ ಪರಿಶೀಲನೆ ಮುಗಿದು ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ. ಪ್ರಾಥಮಿಕ ಹಂತದಲ್ಲಿ ಪ್ರತಿ 30 ನಿಮಿಷಕ್ಕೆ ಒಂದು ರೈಲು ಓಡಿಸುವ ಮೂಲಕ ಬೊಮ್ಮಸಂದ್ರ-ಆರ್‌.ವಿ. ರಸ್ತೆ ಮಾರ್ಗದಲ್ಲಿ ಮೆಟ್ರೋ ಸೇವೆಗೆ ಚಾಲನೆ ನೀಡಲು ಬಿಎಂಆರ್‌ಸಿಎಲ್ ಮುಂದಾಗಿದೆ.

ರೈಲು ಬೋಗಿಗಳು ಬಂದ ಬಳಿಕ ಅಂದರೆ ಆಗಸ್ಟ್‌ ವೇಳೆಗೆ ಟ್ರಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಈ ಮಾರ್ಗದಲ್ಲಿ 16 ನಿಲ್ದಾಣಗಳಿದ್ದು, ಮೂರು ರೈಲುಗಳಲ್ಲಿ ಪ್ರಾಥಮಿಕವಾಗಿ ಸೀಮಿತ ಸಂಖ್ಯೆಯ ಪ್ರಯಾಣಿಕರಿಂದ ರೈಲು ಸೇವೆ ಆರಂಭಿಸಲು ಯೋಜನೆ ರೂಪಿಸಲಾಗಿದೆ.

ಈ ಮಾರ್ಗ ಹಸಿರು ಮಾರ್ಗದ ಮೆಟ್ರೋಗೆ ಸಹ ಸಂಪರ್ಕ ಕಲ್ಪಿಸುತ್ತದೆ. ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರ್ ರಸ್ತೆ, ಇನ್ಫೋಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬಿರಿಟೆನ ಅಗ್ರಹಾರ, ಸಿಂಗಸಂದ್ರ, ಕೂಡ್ಲುಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ, ರಾಗಿಗುಡ್ಡ, ಜಯದೇವ ಇಂಟರ್‌ ಚೇಂಜ್‌, ಆರ್. ವಿ. ರಸ್ತೆ ನಿಲ್ದಾಣಗಳಿವೆ.

ಬಿಎಂಆರ್‌ಸಿಎಲ್ ಈ ಮಾರ್ಗದ ಕಾಮಗಾರಿಯನ್ನು 2017ರಲ್ಲಿ ಆರಂಭಿಸಿತ್ತು. ಬಹುತೇಕ ಕಾಮಗಾರಿ ಮುಕ್ತಾಯಗೊಂಡಿದ್ದು, ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ರೈಲುಗಳ ಸಂಚಾರಕ್ಕೆ ಅನುಮತಿ ಸಿಕ್ಕರೂ ಸಹ ರೈಲು ಓಡಿಸಲು ಬಿಎಂಆರ್‌ಸಿಎಲ್ ಬಳಿಕ ರೈಲುಗಳ ಕೊರತೆ ಇದೆ.

ಕೋಲ್ಕತ್ತಾ ಸಮೀಪದ ಟಿಟಾಗರ್‌ನಿಂದ ಈ ಮಾರ್ಗದಲ್ಲಿ ಓಡಿಸಲು ರೈಲುಗಳು ಬರಬೇಕಿದೆ. 36 ಸೆಟ್ ರೈಲುಗಳನ್ನು ಒದಗಿಸಲು ಒಪ್ಪಂದವಾಗಿದೆ. ಇವುಗಳಲ್ಲಿ ಸದ್ಯ 6 ಬೋಗಿಯ ಒಂದು ಸೆಟ್ ಬಂದಿದೆ. ಚೀನಾ ಮತ್ತು ಟಿಟಾಗರ್‌ನಿಂದ ಉಳಿದ ರೈಲುಗಳು ಬರಬೇಕಿದೆ. ಹಂತ ಹಂತವಾಗಿ ನಗರಕ್ಕೆ ಒಟ್ಟು 216 ರೈಲುಗಳು ಬರಲಿದ್ದು, ಹಳದಿ ಮಾರ್ಗಕ್ಕಾಗಿಯೇ 90 ರೈಲು ನಿಗದಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+