ನಮ್ಮ ಮೆಟ್ರೋದಲ್ಲಿ ವೈಫೈ? ಆದಾಯ ಹೆಚ್ಚಾದರೆ ಆ ಭಾಗ್ಯವೂ ಇದೆ!

ಸದ್ಯದಲ್ಲೇ ನಮ್ಮ ಮೆಟ್ರೋದಲ್ಲಿ ವೈಫೈ ಸೌಲಭ್ಯ ಸಿಗಲಿದೆ?
ಬೆಂಗಳೂರು, ಜೂನ್ 20: ನಮ್ಮ ಮೆಟ್ರೋ ರೈಲಿನಲ್ಲಿ ವೈ ಫೈ ಸೌಲಭ್ಯ ದೊರಕಲಿದೆಯಾ? ಈ ಪ್ರಶ್ನೆಗೆ ಬಿಎಂಆರ್ ಸಿಎಲ್(ಬೆಂಗಳೂರು ಮೆಟ್ರೋ ರೈಲು ನಿಗಮ) ನೀಡಿದ ಉತ್ತರ, "ಹೌದು, ಆದರೆ ಅದಕ್ಕಿನ್ನೂ ಸ್ವಲ್ಪ ದಿನ ಕಾಯಬೇಕು!"
ನಮ್ಮ ಮೆಟ್ರೋ: ಜೂನ್ 22 ರಿಂದ 6 ಕೋಚ್, ಮಹಿಳೆಯರಿಗೆ ಪ್ರತ್ಯೇಕ ಬೋಗಿ!
ನಮ್ಮ ಮೆಟ್ರೋ ಆದಾಯ ಹೆಚ್ಚಾದರೆ ಮೆಟ್ರೋ ಒಳಗೆ ಮತ್ತೂ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸುವ ಕುರಿತು ಚಿಂತನೆ ನಡೆಯುತ್ತಿದೆ. ಆದರೆ ಅದಕ್ಕಿನ್ನೂ ಸಮಯ ಬೇಕಿದೆ ಎಂದು ಬಿಎಂಆರ್ ಸಿಎಲ್ ಹೇಳಿದೆ.
ಜೂನ್ 22 ರಿಂದ ಆರು ಬೋಗಿಯ ಮೆಟ್ರೋ ಸೇವೆ ಆರಂಭವಾಗಲಿದ್ದು, ಹೆಚ್ಚುವರಿ ಮೂರು ಕೋಚ್ ಗಳು ಸೇರ್ಪಡೆಯಾಗಲಿವೆ. ಇದರಿಂದಾಗಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದ್ದು, ಬಿಎಂಆರ್ ಸಿಎಲ್ ಆದಾಯ ಹೆಚ್ಚಾಗಲಿದೆ. ಆರು ಬೋಗಿಗಳು ಸದ್ಯಕ್ಕೆ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗಿನ ನೇರಳೆ ಮಾರ್ಗಕ್ಕೆ ಮಾತ್ರ. ಇವುಗಳಲ್ಲಿ ಒಂದು ಬೋಗಿ ಮಹಿಳೆಯರಿಗೆಂದೇ ಮೀಸಲಾಗಿರುತ್ತದೆಂಬುದು ವಿಶೇಷ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !